
ನಡೆ ಮುತ್ತು ಕನ್ನಡದ ನುಡಿ ಮುತ್ತು
November 1, 2020Happy Sri Varamahalakshmi Habba
July 31, 2020ನಾಗರ ಪಂಚಮಿ in 2020
July 25, 2020ಹೊಕ್ಕಳಿಗೆ, ಬೆನ್ನಿಗೆ ಈಥೈಲ್ ಅಲ್ಕೊ’ಹಾಲ’ನ್ನೆರೆದು ನಾಗರ ಪಂಚಮಿ ಆಚರಿಸಿ!
PS: Ethyl Alcohol is used in Sanitizers.
ಭೀಮನ ಅಮಾವಾಸ್ಯೆ
July 20, 2020ಭೀಮನ ಅಮಾವಾಸ್ಯೆ
ಗಂಡನಿಗೆ ಹೆಂಡತಿ ಪೂಜೆ ಮಾಡುವ ದಿನ. ಮಿಕ್ಕ 364 ದಿನ ಮಂಗಳಾರತಿ.
***
Original JB is JyotirBheemeshwara. JamesBond came later.
June 22, 2020
ಮಹಾಮಾತೆಗೆ ನಮನ
ರಚನೆ: ರಾಮಕೃಷ್ಣ ಬೆಳ್ಳೂರು
ಮಹಾಜನರ ಸಹವಾಸದಿಂದ
ಮಹಾಕಾರ್ಯಗಳನ್ನು ಮಾಡಿ
ಮಹಾಕಾವ್ಯವಾಯಿತು ನಿನ್ನ ಜೀವನ
ಮಹಾತ್ಮರಾದ ಗುರುರಾಯರ ದರ್ಶನ ಪಡೆದು
ಮಹಾನುಭಾವರ ಸತ್ಸಂಗದಿ ಇದ್ದು
ಮಹಾಪೂರವೆಂಬ ಜನರ ನಡುವೆ ಗೆದ್ದು
ಮಹಾಪ್ರಳಯ ದೇಹಸ್ಥಿಥಿಗೆ ಬಂದರೂ ಮಹಾಪ್ರಾಣಗಳನ್ನು ಕಾಪಾಡಿದೆ ನೀನು
ಮಹಾಕಂಟಕಗಳನ್ನು ಬದುಕು ಒಡ್ಡಿದರೂ
ಮಹಾಪಥದಲ್ಲಿ ನಡೆದು
ಮಹಾದೇವ ಕರುಣಿಸಿದ
ಮಹಾಪ್ರಸಾದವನ್ನು
ಮಹಾಕುಂಭದಲ್ಲಿರಿಸಿ
ಮಹಾಜ್ಞಾನ ಪಡೆದೆ ನೀನು
ಮಹಾಮೇಧಾವಿಗಳಲ್ಲಿ
ಮಹಾಭಾಷ್ಯಗಳನ್ನು ಕಲಿತು
ಮಹಾತತ್ವವನ್ನರಿತು
ಮಹಾದಾನಗಳನ್ನು ಮಾಡಿ
ಮಹಾತೇಜಸ್ಸಿನ ವರ ಹೊಂದಿದೆ ನೀನು
ಮಹಾರಾಜನಾದ ದೊರೆಯ ಕೈ ಹಿಡಿದು
ಮಹಾರಾಣಿಯಾಗಿ ದೊರೆಸಾನಿಯಾಗಿ
ಮಹಾಭಾರತದ ಪ್ರಜೆಯಾಗಿ
ಮಹಾಮತಿಯಿಂದ
ಮಹಾಶಯರಿಂದ ಕಲಿತ
ಮಹಾಮಂತ್ರಗಳ ಬಲದಿಂದ
ಮಹಾಕುಟುಂಬದಂತಹ
ಮಹಾಸಾಗರವಾದ ಸಂಸಾರಸಾಗರದಿ
ಮಹಾ ಉತ್ಸವಗಳನ್ನಾಚರಿಸಿ
ಮಹಾಮಾರಿ ದೇಹಕ್ಕೆ ಬಂದರೂ
ಮಹಾಯುದ್ಧ ನಡೆಸಿ ಜಯಿಸಿ
ಮಹಾಪಾಶವಾದ ಮೋಹಪಾಶಕ್ಕೆ ಸಿಲುಕದೆ
ಮಹಾಲಯದ ಮಹಾನವಮಿಯವರೆಗೂ ಕಾಯದೆ
ಮಹಾಪ್ರಸ್ತಾನಕ್ಕೆ ಜ್ಯೇಷ್ಠ ಶುದ್ದ ನವಮಿಯಂದು ಹೊರೆಟ
ಮಹಾಮಾತೆ ಮಹಾಲಕ್ಷ್ಮೀ!
ಇಗೋ ನಿನಗೆ ಅಕ್ಷರ ನಮನ!
ಯೋಗವಿದ್
June 20, 2020[Click on the image to enlarge]
ಯೋಗವಿದ್
ರಚನೆ: ರಾಮಕೃಷ್ಣ ಬೆಳ್ಳೂರು
ಯೋಗಪತಿಯು ಯೋಗನಾಥನು ಯೋಗಮೂರ್ತಿಧರನು
ಯೋಗಸ್ಥನೂ ಯೋಗಾಚಾರ್ಯನು ಆದ ಯೋಗಪುರುಷನು
ಯೋಗನಿದ್ರೆಯಲ್ಲಿ ಯೋಗಬಲದಿ ಯೋಗದರ್ಶನ ಪಡೆದು
ಯೋಗಶಾಸ್ತ್ರ; ಯೋಗಸಾರ; ಯೋಗಾಸನ; ಯೋಗಫಲಗಳನ್ನಡಗಿಸಿ
ಯೋಗಸಮಾಧಿಯಲ್ಲಿದ್ದ ಯೋಗಾತ್ಮರಾದ ವಸಿಷ್ಠರೊಡನೆ
ಯೋಗೀಶ್ವರನು ನಡೆಸಿದ ಸಂವಾದವೇ ಯೋಗವಾಸಿಷ್ಠವೆಂಬುದನ್ನು
ಯೋಗಾಭ್ಯಾಸಕ್ಕೆ ಯೋಗಾಭ್ಯಾಸಿಗೆ ಅವಶ್ಯವಾದ
ಯೋಗವಾಹಿಯೆಂಬ ಯೋಗಶಿಕ್ಷೆಯಲ್ಲಿರುವ
ಯೋಗವಿದ್ಯೆಯ ಯೋಗಾಂಗದ ಯೋಗಾಮೃತವನ್ನರಿಯಲು
ಯೋಗಪಥದಲ್ಲಿರುವ ಯೋಗಾನುಶಾಸನ ಪಡೆಯಲು
ಯೋಗಯುಕ್ತನಾದ ಯೋಗಯುಕ್ತಿಯು, ಯೋಗಧರ್ಮಿಯು
ಯೋಗಾಂಜನವ ಲೇಪಿಸಿಕೊಂಡು ಯೋಗಜನಾಗಿ
ಯೋಗರಥದಲ್ಲಿ ಏರಿ ಯೋಗವಾಹಿನಿಯ
ಯೋಗವಾಣಿಯ ಆಣತಿಯಂತೆ
ಯೋಗಾನಂದದಿ ಯೋಗತತ್ವೋಪನಿಷತ್ತಿನಲ್ಲಡಗಿರುವ
ಯೋಗಸೂತ್ರ, ಹಠಯೋಗ ಮತ್ತು ಕುಂಡಲಿನಿ ಯೋಗಗಳ
ಯೋಗತ್ವ ಪಡೆಯುವುದೇ ಸುಯೋಗವೆಂದರಿತು
ಯೋಗಪಾರಂಗತನಾದ ಯೋಗಸ್ವಾಮಿಯ ಸಹಯೋಗದಿಂದ
ಯೋಗೈಶ್ವರ್ಯ ಪ್ರಸಾದ ಪಡೆದು ಯೋಗಸೇವಾನಿರತನಾಗಿ
ಯೋಗದ ಯೋಗ್ಯತೆಯಿರುವ ಯೋಗ್ಯರ ಯೋಗಕ್ಷೇಮ ವಹಿಸಿ
ಯೋಗಸಂಸಿದ್ಧಿಯತ್ತ ನೀಡುತ್ತಿದ್ದಾನೆ ತನ್ನ ಯೋಗದಾನ
Also read: ಯೋಗ
ದೊರೆ
May 20, 2020ದೊರೆ
ರಚನೆ: ರಾಮಕೃಷ್ಣ ಬೆಳ್ಳೂರು
ದೊರೆಯಿಂದ
ದೊರೆಯ
ದೊರೆತನ
ದೊರೆಯಿತು ಎಮಗೆ
ದೊರೆಗೆ
ದೊರೆಸಾನಿಯಾಗಿ
ದೊರೆತ
ಮಹಾಶಕುತಿಯೇ
ಮಹಾಲಕುಮಿ
ದೊರೆಗೆ
ದೊರೆತ
ದೊರೆತನವ
ನಿಭಾಯಿಸಿ
ಆಳಾಗಬಲ್ಲವನೆ
ದೊರೆಯಾಗುವನೆಂದು
ತೋರಿಸಿದ
ದೊರೆಯು ಇಂದು
ದೊರೆತರೆ ಕೇಳುವೆ…
…ದೊರೆಯುವುದೇ
ದೊರೆಯ
ದೊರೆತನ
ಮತ್ತೊಮ್ಮೆ ಎಮಗೆ
ದೊರೆ
ನಮಗಿತ್ತ
ದೊರೆತನವಷ್ಟೇ
ದೊರೆಯಿತಂದಿನವರೆಗೂ
ಮೂವತ್ತೊಂದು ಸಂವತ್ಸರಗಳ
ಹಿಂದಿನವರೆಗೂ
ದೊರೆಗೆ
ದೊರೆತನಕ್ಕೆ
ನಮ್ಮ ನಮನ
ದೊರೆ: ಏಪ್ರಿಲ್ ೯, ೧೯೩೨ – ಮೇ ೨೧, ೧೯೮೯