ತಮಾಷೆ Treats! by ರಾಮಕೃಷ್ಣ ಬೆಳ್ಳೂರ್

June 15, 2013

ತಮಾಷೆ Treats!
by ರಾಮಕೃಷ್ಣ ಬೆಳ್ಳೂರ್

ಒಳ್ಳೊಳ್ಳೆ ಕಡೇನೇ ಕೆಲಸ ಮಾಡ್ತಿರ್ತಾರೆ. “ಯಾವಾಫೀಸು” ಅಂತ ಯಾರಾದ್ರೂ ಕೇಳಿದಾಗ, ಆಫೀಸ್ ಹೆಸರು ಹೇಳಿದ್ ತಕ್ಷಣ ನಗು ಬರತ್ತೆ! Read on!

ಮಂಜ: ಯಾವಾಫೀಸ್ಸೋ?
ನಂಜ: ಡೌವು (Dove)

ಗುಂಡ: ಯಾವಾಫೀಸ್ಸೋ?
ಜುಂಡ: ಉಡೀಸ್ಸು (Woody’s)

ಕೆಂಚ: ನಿಮ್ ಬಾಸ್ ಯಾರೋ?
ಮಂಚ: ಬೇಜಾನ್ (Daaruwala)

ಅರುಣ: ಯಾವ್ ಡ್ಯಾಮಲ್ಲೋ ಕೆಲಸ?
ವರುಣ: ಸಕತ್ ಡ್ಯಾಂ (in Maharashtra)

ಗಿರೀಸ: ಡಿಸೈನಿಂಗ್ ಕಂಪನೀಲಿ ಏನ್ ನಿನ್ ಕೆಲಸ?
ಹರೀಸ: ಬರೀ ಸ್ಕೆಚ್ಚಾಕೋದು!

ರಾಣಿ: ಎಲ್ ಸಿಕ್ತೋ ಕೆಲ್ಸ?
ರಾಜ: ಜಿಲೆಟ್ಟು
ರಾಣಿ: ಯಾವ್ದೋ ಅದು?
ರಾಜ: ಗೊತ್ತಿಲ್ವಾ? ಫೇಮಸ್ ’ಬ್ಲೇಡ್’ ಕಂಪನಿ.

ಚೂಟಿ: ನನ್ ಫ್ರೆಂಡ್ ಗೆ ಇವತ್ತು ಕೊರೋಗೇಟೆಡ್ ಬಾಕ್ಸ್ ಕಂಪನಿಲಿ ಕೆಲ್ಸ ಸಿಗ್ತು.
ಘಾಟಿ: ಗೊತ್ತು ಬಿಡು. ಡಬ್ಬಾ ಕಂಪನಿ ಅದು.

ರಾಮ: ಟೂಲ್ ಕಂಪನಿಲಿ ಯಾವ್ ಸೆಕ್ಷೆನ್ನು?
ಸೋಮ: ಫಿಟಿಂಗ್ ಸೆಕ್ಷೆನ್ನು.

ಕಿಚ್ಚಿ: ಟ್ರಾಕ್ಟರ್ ಕಂಪನೀಲಿ ಏನ್ಕೆಲ್ಸ?
ಡಿಚ್ಚಿ: ಮೆಷೀನ್ ಬಿಡೋದು.

ಕೋರ್ಟಲ್ ಕೆಲ್ಸ ನಮ್ಮುಡ್ಗಂದು. ಕಟ್ಕಟೆಲ್ ನಿಂತೋರ್ಗೆಲ್ಲ ಓತ್ಲಾ (oath law) ಇಡ್ಯಲ್ವೇನ್ಲಾ, ಅದು.

ಸಾಂಡು: ಹಿಂದ್ವೇರ್ ಅಲ್ಲಿ ಕೆಲ್ಸ ಸಿಗ್ತಾ? ಯೇನ್ ಕಂಪನಿನೋ ಅದು?
ಪಾಂಡು: ಸಿಂಕ್ ಮಾಡ್ತಾರೆ.

ಅಜ್ಜಿ: ಗುಂಡ್ಂಗ್ ಯೇಳ್ ಮಾಡ್ಸಿದ್ ಕೆಲ್ಸ ಸಿಗ್ತು. ಮೊದಲೇ ರೀಲ್ ಬಿಡ್ತಿದ್ದ. ಈಗ್ ಥಿಯೇಟ್ರಲ್ ಬೇರೆ ಕೆಲ್ಸ.

ತಿಮ್ಮ: ಲೋ ಸಿಮ್ಮ, ಒಂದ್ ಮಾತ್ ಮರೀಬೇಡ. ಹಳ್ಳೀಲ್ ಮಾತ್ರಾ, ರಾತ್ರಿ ಕತ್ಲಲ್ಲಿ ಪೆಟ್ರೊಮ್ಯಾಕ್ಸ್ ಇಲ್ದೆ ಓಡಾಡ್ಲೇ ಬೇಡ ಕಣ್ಲಾ.

ಶ್ರೀ: ನಿಮ್ಮೆಜ್ಮಾನ್ರುದು ಯೇನ್ ಕೆಲ್ಸ?
ಸಿರಿ: ಲೆವೆಲ್ ಮ್ಯಾನೇಜರ್ರು.
ಶ್ರೀ: ಅಂದ್ರೆ? ಲೆವೆಲ್ maintain ಮಾಡೋದಾ?

ಯೆಲ್ ಬೋರ್ಡು ಸ್ಕೂಟರ್ ತಳ್ಕೊಂಡ್ ಮೆಕಾನಿಕ್ ಹತ್ರ ಹೋದ.
ಮೆಕಾನಿಕ್ಕು: ಯಾಕಪ್ಪಾ, ಸ್ಟೆಪ್ನಿ ಇಲ್ವಾ?!

One Response to “ತಮಾಷೆ Treats! by ರಾಮಕೃಷ್ಣ ಬೆಳ್ಳೂರ್”


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: