ಮಜವಾಗಿತ್ತು !

December 2, 2013

ಮಜವಾಗಿತ್ತು !
ರಚನೆ: ರಾಮಕೃಷ್ಣ ಬೆಳ್ಳೂರು

ನಮ್ಮ ಜೀವನದಲ್ಲಿ ಮಿಕ್ಸೀ ಬಂದಾಗ
ಟೊಮೇಟೋ ಜ್ಯೂಸ್ ಮಾಡೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಕುಕ್ಕರ್ ಬಂದಾಗ
ವಿಸಿಲ್ ಶಬ್ಧ ಕೇಳೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಗ್ರೈಂಡರ್ ಬಂದಾಗ
ಅದು ಹಿಟ್ಟು ರುಬ್ಬೋದನ್ನ ನೋಡೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಕೇಬಲ್ ಟಿ.ವಿ. ಬಂದಾಗ
ರಿಮೋಟ್ ಹಿಡಿದು ಚಾನಲ್ ಬದಲಾಯಿಸೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಬೈಕ್ ಬಂದಾಗ
ಮೈಲೇಜ್ ಚೆಕ್ ಮಾಡೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಕಾರ್ ಬಂದಾಗ
ಲಾಂಗ್ ಡ್ರೈವ್ ಹೋಗೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಫ್ರಿಡ್ಜ್ ಬಂದಾಗ
ಲೋಟದಲ್ಲಿ ರಸ್ನ ಜ್ಯೂಸ್ ಹಾಕಿ ಐಸ್ ಕ್ರೀಮ್ ಮಾಡೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಲೆದರ್ ಬಾಲ್ ಬಂದಾಗ
ಬ್ಯಾಟ್ ಅದನ್ನು ಹೊಡೆಯುವ ಸದ್ದು ಕೇಳೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಸಿ.ಡಿ. ಪ್ಲೇಯರ್ ಬಂದಾಗ
ಬೇಕಾದ ಹಾಡನ್ನು ಕೇಳೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಕಪ್ಪು ಬಣ್ಣದ ಲ್ಯಾಂಡ್ ಲೈನ್ ಫೋನ್ ಬಂದಾಗ
೧-೦-೦ ತಿರುಗಿಸೊದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಫ್ಯಾಕ್ಸ್ ಬಂದಾಗ
ಕರ್ರಾ ಕರ್ರಾ ಸದ್ದು ಕೇಳೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಪೇಜರ್ ಬಂದಾಗ
ಮೆಸೇಜ್ ಕಳ್ಸೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಕಂಪ್ಯೂಟರ್ ಬಂದಾಗ
ಚಾಟ್-ಇಮೇಲ್ ಮಾಡೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಫೇಸ್ ಬುಕ್ ಬಂದಾಗ
ಹಳೇ ಸ್ನೇಹಿತರನ್ನ ಕಂಡು ಹಿಡಿಯೋದೇ ಮಜವಾಗಿತ್ತು

ನಮ್ಮ ಜೀವನದಲ್ಲಿ ಮೊಬೈಲ್ ಬಂದಾಗ….
(ಲೇಟೆಸ್ಟ್ ಇನ್ನು ಬಂದಿಲ್ಲ… ಈ ಸಾಲು ಸಶೇಷ)

Advertisements

2 Responses to “ಮಜವಾಗಿತ್ತು !”

 1. UmaSuresh Says:

  Very nice!
  Suresh said,Ninna blog bandagella adanna odode majavagittu! And Bengaloorige bandagella neenu taruva adbhutavada Veena stores Idli/vade tinnode majavagittu!!!
  Have a great day and a great weekend Bellur.
  bye
  Uma & Suresh


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: