ಕೃತಜ್ಞನಾಗು

July 15, 2016

ಕೃತಜ್ಞನಾಗು
ರಚನೆ: ಬೆಳ್ಳೂರು ರಾಮಕೃಷ್ಣ

ಸಂಗೀತದಲ್ಲಿ ಗಾನಗಂಧರ್ವನಾಗು
ನಾಟ್ಯದಲ್ಲಿ ಪುನೀತನಾಗು

ಕಲೆಯ ದೋಣಿಯ ಅಂಬಿಗನಾಗು
ಸಾಹಸದಲ್ಲಿ ಸಿಂಹನಾಗು

ನಟನೆಯಲ್ಲಿ ಅನಂತನಾಗು
ರಂಗವನ್ನೇರಿ ಶಂಕರನಾಗು

ಹಾಸ್ಯದ ಚಕ್ರವರ್ತಿಯಾಗು
ನವರಸಗಳ ನಾಯಕನಾಗು

ದನಿಯಿಂದ ಕಿಚ್ಚಾಯಿಸುವಂಥವನಾಗು
ಕಲಾಲೋಕದ ಯುಗಪುರುಷನಾಗು

ಕಲಾದೇವಿಯ ದರುಶನ ಪಡೆದು
ಯಶೋವಂತನಾಗು

ಸಾಗರದ ನೀರಿನಲ್ಲಿ ಉಪ್ಪಿನಂತೆ
ಕಲಾಸಾಗರದಲ್ಲಿ ಬೆರೆಯುವಂತವನಾಗು

ಶುಭ್ರವೇಷ್ಠಿಧರಿಸಿ ಕಲಾತಪಸ್ವಿಯಾಗು
ಕಲರಸಿಕರಿಗೆ ಚೈತನ್ಯವಾಗು

ಕಲೆಯ ಧ್ಯಾನ ಮಾಡುವ ಯೋಗರಾಜನಾಗು
ಕಲಾದೀಪದ ಪ್ರಕಾಶವಾಗು

ಕಲಾಪೂರ್ಣಚಂದ್ರನ ಹೋಲುವ ಬಾಲಚಂದ್ರನಾಗು
ಕಲೆಯ ದಿಗಂತವನ್ನೇರಿ ಸೃಜನಶೀಲನಾಗು

ಕಲಾರಾಧನೆ ಮಾಡುವ ಜೋಗಿಯಾಗು
ಕಲೆಯಲ್ಲಿ ತಲ್ಲೀನವಾಗಿ ಚಿರಂಜೀವಿಯಾಗು

ಕಲೆಗೆ ತಲೆ ಬಾಗಿ ಸಾಧು ಶರಣನಾಗು
ಕಲಾಜ್ಯೋತಿಯನ್ನು ಹೋತ್ತಿರುವ ತೂಗುದೀಪವಾಗು

ನಟನಾಶಕ್ತಿಯ ಪ್ರಸಾದ ಉಂಡು
ವಜ್ರಕಾಯದ ಮುನಿಯಾಗು

ಕಲಾವೈಕುಂಠದ ವಿಷ್ಣುವಾಗು
ಕಲೆಯ ಕೈಲಾಸ ಶಿಖರದಿ ಲೋಕೇಶನಾಗು

ಕಲೆಯ ಸರೋವರದಿ ಅರಳಿದ ಅರವಿಂದನಾಗು
ಕಲಾವೃಕ್ಷದ ಅಶ್ವತ್ಥನಾರಾಯಣನಾಗು

ಕಲೆಯ ಮೂಡಣದಿ ಪ್ರಜ್ವಲಿಸುವ ಪ್ರಭಾಕರನಾಗು
ಕಲೆಯ ಕ್ಷೀರಸಾಗರದಿ ಪವಡಿಸುವ ನಾರಾಯಣನಾಗು

ಕಲಾಪ್ರಪಂಚದಿ ವಿನಯವಂತನಾಗು
ಕಲೆಯ ಕಾಶಿಯ ಸಂಕೇತವಾಗು

ಕಲಾದೇವಿಯ ಮಡಿಲಲ್ಲಿ ಸುರಕ್ಷಿತನಾಗು
ಕಲೆಗೆ ಬೆಲೆ ಕೊಡುವ ವಿಜಯ ಕಿಶೋರನಾಗು

ಕಲೆಯ ರಂಗ ತರಂಗಗಳ ವೀಕ್ಷಕನಾಗು
ಕಲೆಯ ಭಂಡಾರಕ್ಕೆ ಕೊಡುಗೆಯಾಗು

ಕಲೆಯ ಕೃಪಾಕಟಾಕ್ಷ ಪಡೆದ ಕಲಾವಿದನಾಗು
ಆದಿ ಅಂತ್ಯವಿಲ್ಲದ ಕಲೆಯ ಮನೋಹರ ತೀರದಿ ಕೃತಜ್ಞನಾಗು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: