Ganesha jokes

September 6, 2016

Two days in a year must be declared as: Veda Brahma Sri Ganapati Shastry Day.
{need i say which 2 days}

***

ದೇವಲೋಕದ ಮೈದಾನ.
ಪುಟ್ಟ ಮಕ್ಕಳಾದ ರಾಮ, ಹನುಮ, ಕೃಷ್ಣ, ಸುಬ್ರಮಣ್ಯ, ಅಯ್ಯಪ್ಪ, ಶ್ರೀನಿವಾಸ ಎಲ್ಲರೂ ಕ್ರಿಕೆಟ್ ಆಡಕ್ಕೆ ಇನ್ನೇನು ರೆಡಿ ಆಗ್ತಿದ್ದಾರೆ.
ರಾಮ: ಎಲ್ಲ ರೆಡಿನಾ. ಕೃಷ್ಣನ್ ಟೀಮ್ ಬ್ಯಾಟಿಂಗ್.
ಹನುಮ: ನಾನ್ ಎಲ್ಲಿ ಫೀಲ್ಡಿಂಗು?
ಶ್ರೀನಿವಾಸ: ನೀನ್ ಸ್ಲಿಪ್ಸ್. ಚೆನ್ನಾಗ್ ಡೈವ್ ಹೋಡೀತ್ಯಾ.
ಸುಬ್ರಮಣ್ಯ: ಇರ್ರಪ್ಪ. ಗಣೇಶಾನೇ ಬಂದಿಲ್ಲ. ಅವನಿಗೆ ತಾನೆ first ಬ್ಯಾಟಿಂಗ್, first ಬೌಲಿಂಗು.

***

ಗೌರಿ (ಅಡಿಗೆ ಮನೆಯಿಂದ): ಗಣೇಶ, ಬ್ರಹ್ಮ ತಾತ ಬಂದಿದಾರೆ. ರೂಮಿಂದ ಬಾ ಹೊರಗೆ. ಐ ಪ್ಯಾಡ್ ಸಾಕು.
ಐದ್ ನಿಮಿಷ ನೋ ರೆಸ್ಪಾನ್ಸ್.
ಗೌರಿ: ಗಣೇಶಾ!
ಗಣೇಶ (ಮೈ ಮುರ್ಕೊಂಡ್ ರೂಮಿಂದ ಬರ್ತಿದಾನೆ ಲೇಜ಼ಿಲಿ): ಯೇನು?
ಗೌರಿ: ಬ್ರಹ್ಮ ತಾತ ನೋಡು, ನಿಂಗೋಸ್ಕ್ರ ಯೇನೇನೋ ತಂದಿದಾರೆ. ಅವ್ರಿವತ್ತೇ ನಿನ್ ಬರ್ತಡೇ ಅಂದ್ಕೊಂಡ್ರಂತೆ.
ಗಣೇಶ: ಹೈ ತಾತ! ಹೌವಾರ್ಯು?
ಬ್ರಹ್ಮ:ಯೆನೋ! ಯಾವಾಗ್ಲೂ ಮೌಸು, ಐ ಪ್ಯಾಡು! ನಮ್ಮನ್ನೆಲ್ಲ ಮರ್ತೇಬಿಡು! ನೀನಾದ್ರು ಸ್ವಲ್ಪ ದೊಡ್ಡೋರು ಚಿಕ್ಕೋರು ಅಂತ ಇಟ್ಕೊಂಡಿದ್ಯ. ನಿನ್ ತಮ್ಮ ಸುಬ್ಬು ಬಿಡು, ಯಾವಾಗ್ಲೂ ಕೋಪಾ…ಆ ಅಯ್ಯಪ್ಪ, ವರ್ಷಕ್ ಒಂದೋ ಎರಡೋ ಸಲ ಕಾಣಸ್ಕೋ ತಾನೆ. ಅದ್ಸರಿ…ಯಾವಾಗ್ ನಿನ್ ಹುಟ್ಟಿದ್ ಹಬ್ಬ?
ಗಣೇಶ: B.Sc. ತಾತ.
ಬ್ರಹ್ಮ: ಹುಡುಗಾಟದ್ ಬುದ್ಧಿ ಬಿಟ್ಟಿಲ್ಲ ನೋಡು. ನಂಗ್ ವಯಸ್ಸಾಗಿದೆ ನಿಜ. ಆದ್ರೆ ಕಿವಿ ಕೇಳತ್ತೆ. ನಾ ಕೇಳಿದ್ದು ಬರ್ತಡೆ. ನೀನ್ ಡಿಗ್ರಿ ಹೇಳ್ತಿಯಲ್ಲೋ?
ಗಣೇಶ: ತಾತ, ನನ್ ಬರ್ತಡೇ ನಿಜ್ವಾಗ್ಲೂ B.Scನೇ. ಭಾದ್ರಪದ ಶುಕ್ಲ ಚೌತಿ!
ಗೌರಿ (ಅಡಿಗೆ ಮನೆಯಿಂದ): ಹೀಗೆ…ಯಾವಾಗ್ ನೋಡಿದ್ರೂ ಹುಡುಗಾಟ. ತಾತ, ಕಾಫಿಗೆ ಸಕ್ಕರೆ?
ಬ್ರಹ್ಮ: ಸಕ್ಕರೆ ಬೇಡಮ್ಮ, ಶುಗರ್ಲೆಸ್ಸು.

 

Also see:

A to Z of Ganesha Sahasranaama

GST Omkara Ganesha

Happy Gowri-Ganesha festival

One liners for ಗಣೇಶನ ಹಬ್ಬ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: