Random Jottings on Facebook – 9

January 10, 2017

ಈಗ: “ನೀವು ಕರೆಮಾಡುತ್ತಿರುವ ಚಂದಾದರರು ಬಿಜ಼ಿಯಾಗಿದ್ದಾರೆ”
ಮುಂದೆ: “ನೀವು ಕರೆಮಾಡುತ್ತಿರುವ ಚಂದಾದರರು ಹಿತ್ಲ್ ಕಡೆ, ನಲ್ಲಿ ನಿಲ್ಲಿಸಿ, ಬಟ್ಟೆ ಹರ್ವಾಕಿ, ಕೈ ವರೆಸ್ಕೊತಿದ್ದಾರೆ. ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ.

***

ಅವರೇಕಾಯಿ ಸೀಸನ್ನು.ಸ್ನೇಹಿತನ್ ಜೊತೆ ಮಾರ್ಕೆಟ್ಟಲ್ಲಿ ಹೋಗ್ತಿದೀನಿ. ವಾಸವಿ ಕಾಂಡಿಮೆಂಟ್ಸಲ್ಲಿ 47 ಐಟಂ ಇಟ್ಟಿದ್ದ್ರು. ಸ್ವಲ್ಪ ಮುಂದೆ ಹೋದ್ರೆ, ವಾಸವಿ ಸ್ಟೋರ್ಸಲ್ಲಿ 56 ಐಟಮ್ಮು. ನೋಡಿದ್ರೆ, ಎರಡ್ ಅಂಗಡಿಗೂ ಒಬ್ಬ್ರೆ ಓನರ್ರು. ಸ್ನೇಹಿತ ನನ್ ಕೇಳ್ದ: ಅಲ್ಲ ಕಣೋ, ನಲ್ವತ್ತೈದೋ, ಐವತ್ತೈದೋ, ರೌಂಡ್ ಫಿಗರ್ ಮಾಡ್ಬೊದಿತ್ತಲ್ಲ… ಇದೇನ್ ನಲ್ವತ್ತೇಳು, ಐವತ್ತಾರು?
ನಾನ್ ಹೇಳ್ದೆ: ನೋಡು ರಾಜೇಶೂ, ಅವರೆಕಾಯಿ ಅಂದ್ರೆ AK. ಸೋ AK-47, AK-56, ಮ್ಯಾಚ್ ಆಯ್ತಲ್ಲ. ಅದ್ರಲ್ಲೂ, ಇದ್ರಲ್ಲೂ ಎರಡ್ರಲ್ಲೂ ಗ್ಯಾಸ್ ಆಪರೇಟೆಡ್ ಮೆಕಾನಿಸಮ್ಮೆ!

***
ಇಲ್ಲೊಂದ್ ಅಜ್ಜಿ ಇದೆ. ಯಾವಾಗ್ ನೋಡಿದ್ರೂ ಸ್ವೆಟರ್ರು, ಬುಟ್ಟಿ, ಕುಲಾವಿ ಹೆಣೀತ್ಲೇ ಇರತ್ತೆ. ಮೊನ್ನೆ ಸಂಜೆ ಮಾತಾಡ್ಸಕ್ಕ್ ಹೋದೆ.
ಅಜ್ಜಿ: ಯಾಕೋ ಇಷ್ಟ್ ದಿವ್ಸಾ ಕಾಣಿಸ್ಲೇ ಇಲ್ಲ?
ನಾನು: ಹೋದ್ವಾರ ಬಂದಿದ್ನಲ್ಲಜ್ಜಿ, ಬಿಸಿ ಬಿಸಿ ಅವರೇಕಾಯಿ ಉಪ್ಪಿಟ್ ಕೊಟ್ರಿ. ಮರ್ತ್ಬಿಟ್ರ?
ಅಜ್ಜಿ: ಆದ್ರಿವತ್ತೇನಿಲ್ ಕಣೊ. ಇವತ್ ಉಪ್ವಾಸ.
ನಾನು: ಭೂಮಂಡಲ್ದಲ್ಲಿ, ಕಲೀಗ್ದಲ್ಲಿ, ನೀವೊಬ್ರೆ ಅಜ್ಜಿ, knit-ಉಪ್ವಾಸ ಮಾಡೋದು.
ಅಜ್ಜಿ: ಕೊಡ್ತೀನ್ನೋಡೊಂದು!

***

ಕೃಷ್ಣ ಪರಮಾತ್ಮನಿಗೆ ಯಾವ ಪತ್ನಿ ಹತ್ರ ಹೋದ್ರೆ ‘ನಿಜ್ವಾಗ್ಲೂ’ ತಲೆನೊವ್ವು ಹೋಗತ್ತೆ?
ಸತ್ಯ balmಎ.

***

ತಿಳುವಳಿಕೆ ಬರಕ್ಕೆ ಯಾವೆರಡು ಫುಡ್ ಐಟಂಸ್ ತಿನ್ಬೇಕು?
‘ತಿಳಿ’ ಸಾರು ಮತ್ತು ‘ತಿಳಿ’ ಮಜ್ಜಿಗೆ.
***
ಅಡಿಗೆ ಮಾಡಕ್ಕೆ ನಾವೆಷ್ಟೆಲ್ಲ ಇಂಗ್ರೀಡಿಯೆಂಟ್ಸ್ ಬಳಸ್ತೀವಿ. ಇಡೀ ಪ್ರಪಂಚ ಸೃಷ್ಟಿಸೋಕ್ಕೆ ಆ ದೇವರು ಕೇವಲ ಐದೇ ಇಂಗ್ರೀಡಿಯೆಂಟ್ಸ್ ಬಳಸಿರೋದು. ಖಿಲಾಡಿ!

***

ಯೆಂಕ್ಟ್ರಮಣಸ್ವಾಮಿ ಭಕ್ತ್ರಿಗೆ ತಿರುಪ್ತಿ ಯೆಂಗೋ
ಅಯ್ಯಮ್ಪ್ಸಾಮಿ ಭಕ್ತ್ರಿಗೆ ಶಬ್ರಿಮಲೆ ಯೆಂಗೋ

ಮಂಜುನಾಥನ್ ಭಕ್ತ್ರಿಗೆ ಧರ್ಮ್ಸ್ಥಳ ಯೆಂಗೋ
ಮಾದೇಸ್ವರನ್ ಭಕ್ತ್ರಿಗೆ ಮಲೆ ಮಾದೇಸನ್ಬೆಟ್ಟ ಯೆಂಗೋ

ಅವರೇಕಾಯಿ ಭಕ್ತ್ರಿಗೆ ಅವರೇಮೇಳಾ ಯೆಂಗೋ
ಬೆಣ್ಣೆ ಮಸಾಲೆ ಭಕ್ತ್ರಿಗೆ ಸಿ.ಟಿ.ಆರ್ ಯೆಂಗೋ

ಇಡ್ಲಿ-ವಡೆ ಭಕ್ತ್ರಿಗೆ ವೀಣಾ ಸ್ಟೋರ್ಸ್ ಯೆಂಗೋ
ಹಾಗೆ
(ವರ್ಲ್ಡ್) ಸಿನೆಮಾ ಭಕ್ತರಿಗೆ BIFFES ಕಾಣೋ

***

ಕೋಳಿ ಮೊಟ್ಟೆ ಲೆಕ್ಕ ಹಾಕದ್ಯೇನೋ?
ಅದೆಂಗ್ ಹಾಕ್ಲಿ ಎಜ್ಮಾನ್ರೆ, ಲೆಕ್ಕದಲ್ಲೇ ಕೋಳಿ ಮೊಟ್ಟೆ ನಂಗೆ!

***

Women are implacably determined on a course of action; very resolute. It is the word ‘Female’ that makes them iron-willed. Fe = Iron

Women also forecast better because there is ‘omen’ in women.

***

ಭಾಳಾ ದಿನಗಳ ನಂತರ ಒಬ್ಬರು ರೋಡಲ್ಲಿ ಟೈಮ್ ಕೇಳಿದ್ರು. ನೋಡ್ತೀನಿ! ಖರೆಖ್ಟಾಗಿ “ಮಂಗಳ್ವಾರ ಮಟಮಟ ಮಧ್ಯಾಹ್ನ ಮೂರ್ಗಂಟೆ !!!”

***

Trumpಎಟ್ ಊದ್ಕೊಳೋಕ್ಕೆ ಹೇಳ್ತಿಲ್ಲ…USಗೆ ಹೋದ್ರೆ White Houseಅಲ್ಲಿ ಒಂದೆರಡ್ ದಿವಸ ಇರೋದಂತೂ ಗ್ಯಾರಂಟಿ. ಅದು ನಮ್ ಚಿಕ್ಕಪ್ಪನ್ ಮಗಳ್ ಮನೆ – White House. ನಮ್ ಶ್ವೇತಾ, ಗೊತ್ತಿರ್ಬೇಕಲ್ಲ.

***

ಮೇಷ್ಟ್ರು ಪ್ರಶ್ನೆ ಕೇಳಿದಾಗ ನಮ್ಮಂಥ ಬೃಹಸ್ಪತಿಗಳು ಕೊಡೋ ಉತ್ತರಕ್ಕೆ ಅವರ ಮುಖದ ಮೇಲೆ ಮೂಡುವ ಟೆನ್ಷನ್ is known as Surface Tension.

***

Ragಇಸುವುದು = ರೇಗಿಸುವುದು

***

ಕೊಡವ ಸಮಾಜಕ್ಕೆ ಸೇರಿರೋರು ಕೆಲುವ್ರು .
ಕೊಡುವ ಸಮಾಜಕ್ಕೆ ಸೇರಿರೋರು ಕೆಲುವ್ರು .
ಕೊಡುವ್ಕೊಳ್ಳೊ ಸಮಾಜಕ್ಕೆ ಸೇರಿರೋರು ಇನ್ ಕೆಲುವ್ರು.

***

ಒಂದ್ ಫಂಕ್ಷನ್ನಲ್ಲಿ ಯಥಾಪ್ರಕಾರ ಪರಿಚಯಸ್ಥರೊಬ್ಬರು ಒಂದ್ ಹಾಡ್ ಹೇಳ್ಸದ್ರು. ನನ್ನ ಪಕ್ಕದಲ್ಲಿ ಕುಳಿತಿದ್ದ ಹಿರಿಯರು ಕೇಳದ್ರು: ಎಷ್ಟನೇ ವಯಸ್ಸಿನಿಂದ ಸಂಗೀತ ಹಾಡ್ತಿದೀರಾ?

ಸಾರ್, ಹುಟ್ಟಿನಿಂದ ಸಂಗೀತ ಜ್ಞಾನ ಬಂದಿದೆ ನನಗೆ ಎಂದೆ.

ಯೇನ್ ಪ್ರೂಫು?

ಹುಟ್ಟಿದಾಗಿಂದ ಹಸಿದಾಗೆಲ್ಲ ಹೊಟ್ಟೆ ತಾಳ ಹಾಕೋದಲ್ಲದೆ ಹಾಡೂ ಹೇಳತ್ತೆ. ದಟ್ಸಾಲ್ಯುವರಾನರ್.

***

Seeing the poor infrastructure facilities at the crematoriums, want to live forever.

***

Musicians and students certainly need it.
We may go digital, but we still need it.
What is it?

A. Notes

***

15965038_835754173233248_2156198498427206265_n

Buguri Kaayi! Found this at 18th cross grounds while playing cricket with my son and his friends today morning!

ಬುಗುರಿ ಆಡ್ಸೋ ಖುಷಿ ಬೇರೆ. ಬುಗುರಿ ಕಾಯಿ ಕೊಡೋ ಮಜಾನೇ ಬೇರೆ!

***

rwb-mantri-mall-wall

***

ನವೆಂಬರ್ ಎಂಟರಿಂದ ನಡೀತಿರೋದು: ಕಾಸ್ & ಎಫೆಕ್ಟ್

***

ಕ್ರಿಸ್ ಗೇಯ್ಲ್ ಮೂವತ್ತು ಬಾಲಲ್ಲಿ ಸೆಂಚುರಿ ಹೊಡೆದ. ಎ ಬಿ ಡಿ ಮೂವತ್ತೊಂದ್ ಬಾಲಲ್ಲಿ ಸೆಂಚುರಿ ಹೊಡೆದ. ಬಟ್ ಇಟೀಜ಼್ ಇಂಪಾಜ಼ಿಬಲ್ ಟು ಬೀಟ್ ಧೃತರಾಷ್ಟ್ರಾಸ್ ರೆಕಾರ್ಡ್.

***

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹಶೀಮ್ ಆಮ್ಲಾರ ತಂದೆ ಎಲ್ಲರಿಗೂ ಭಾಳಾ ಬೇಕಾದೋರು. ಬಿಕಾಜ಼್ ಹೀ ಇಸ್ ಆಮ್ಲಜನಕ.

***
Complete the series. (5 pts). With reason (bonus 5 pts).
8, 5, 4, __, __, 7, __, __, 3, __, __

***

Father: Did you finish all the homework, Ali?

Ali: English homework is difficult, father.

Father: What is the homework?

Ali: We need to write four words to show ‘Bad’ is not good.

Father: Ok write. Naseeb (fortunate) – becomes BAD-NASEEB (unfortunate).
Naam (repute) – becomes BAD-NAAM (disrepute).
Duaa (blessing) – becomes BAD-DUAA (curse).
Tameez (Cultured) – becomes BAD-TAMEEZ (uncultured).

Ali: That was quick. Thank you, father.

***

Kanfusion: ಕನ್ನಡ ಮಾತನಾಡುವಾಗ ಬೇರೆ ಭಾಷೆಗಳನ್ನು mix ಮಾಡಿ ಮಾತನಾಡುವ ಪ್ರಕ್ರಿಯೆ.

***

See no evil!

rwb-see-no-evil

***

She is called Chinnamma. Actually she is DOUBLE CHIN-amma.

***

Light year: When you lose considerable weight in a year.

***

‘Lie Too Runs’ and ‘Lies on Tour’ are anagrams of RESOLUTION. But the best anagram is: RULE IT SOON!

***

Live in the moment!

rwb-live-for-the-moment

***

What do you call a broken fruit?
टूटी Fruity

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: