ರಾಜ ಪಂಚಾಶತ್

June 21, 2017

ರಾಜ ಪಂಚಾಶತ್
ರಚನೆ: ರಾಮಕೃಷ್ಣ ಬೆಳ್ಳೂರು

ರಾಜಮಾರ್ಗದಿ
ರಾಜರ್ಷಿಯ ಧ್ಯಾನದಿ
ರಾಜಕಾರ್ಯಾಸಕ್ತರಾಗಿ
ರಾಜವೈಭೋಗವ ಅನುಭವಿಸಿ
ರಾಜಭಟನೆಂಬ
ರಾಜಪದವಿ ಪಡೆದು
ರಾಜವಂಶಸ್ಥರಾಗಿ
ರಾಜಠೀವಿಯಿಂ
ರಾಜಕೀಯಕ್ಕೆ ಹೋಗದೆ
ರಾಜಕುಲದವರಾಗಿ
ರಾಜಮಂದಿರದಿ ನೆಲೆಸಿ
ರಾಜ ಲಕ್ಷಣ ಹೊಂದಿರುವ
ರಾಜ ಸದನದಿ
ರಾಜಭವನವಲಂಕರಿಸಿ
ರಾಜಚಿಹ್ನೆಗೆ
ರಾಜತ್ವ ಇತ್ತು
ರಾಜತರುವಂತಿರುವ
ರಾಜರತ್ನಮಾಲೆ ಧರಿಸಿದ
ರಾಜರಾಜೇಂದ್ರನಂತಿರುವ
ರಾಜಕಳೆ ಉಳ್ಳ
ರಾಜೋಪಚಿತ ನಡೆನುಡಿಯುಳ್ಳ
ರಾಜಕುಮಾರನಿಂದ
ರಾಜಧರ್ಮವ ಕಲೆತು
ರಾಜಧಾನಿಯಿಂದಾಚೆಗೂ
ರಾಜನೀತಿ ತಿಳಿಸಿ
ರಾಜ ಪಟ್ಟ ಗಳಿಸಿದ
ರಾಜಪುತ್ರರರೊಡನೆ
ರಾಜಪೂಜಿತರಾಗಿ
ರಾಜಬೀದಿಯಲ್ಲಿ
ರಾಜ ಮರ್ಯಾದೆಯೊಂದಿಗೆ
ರಾಜಮಾನ್ಯರೆನಿಸಿ
ರಾಜಮುದ್ರೆ ಹೊಂದಿ
ರಾಜಾಶ್ರಯದಲ್ಲಿ
ರಾಜಯೋಗ್ಯತೆ ಪಡೆದು
ರಾಜವಂತರಾಗಿ
ರಾಜ ವೈದ್ಯರೊಡನೆ
ರಾಜ ವಿದ್ಯೆ ಕಲೆತು
ರಾಜ ಶಾಸನದಿ
ರಾಜ ಶಿರೋಮಣಿಗೆ
ರಾಜಶೇಖರನ
ರಾಜಶ್ರೀ ಸಮೇತ
ರಾಜಲಿಂಗವ ಪೂಜಿಸಿ
ರಾಜ ಸಭೆಯಲ್ಲಿ
ರಾಜಸೂಯ ಮಾಡುತ್ತ
ರಾಜಸೇವೆಯಲ್ಲಿ
ರಾಜಹಂಸದಿ ವಿಹರಿಸಿ
ರಾಜಕಾರ್ಯಾನಿರತರಾಗಿ
ರಾಜಾಜ್ಞೆಯ ಪಾಲಿಸುತ್ತ
ರಾಜಾಧಿರಾಜನ ಧ್ಯಾನದಲ್ಲಿರುವುದೇ
ರಾಜಯೋಗ
ಇದಲ್ಲವೇ ರಾಜಧರ್ಮರಾಜಯೋಗ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: