Posts Tagged ‘ಇಂದು ಶುಕ್ರವಾರ ಶುಭವ ತರುವವರ’

ಇಂದು ಶುಕ್ರವಾರ ಶುಭವ ತರುವವರ spoof song (relating to Bandhs)

September 9, 2016

ಎದುರುಮನೆ ಅಜ್ಜಿ ಶುಕ್ರವಾರದ ಹಾಡು ಹಾಡ್ತಿದ್ರು:

ಬಂದ್ ಶುಕ್ರವಾರ! ಬಂದ್ ತರುವವಾರ
ರಾಜ್ಯದೆಲ್ಲೆಡೆ ಬೀಗ ಹಾಕಿ ಯಶಸ್ವಿಯಿಂದ ಬಂದ್ ಮಾಡುವವಾರ

ಮುಂಜಾನೆಯ ಮಡಿಉಟ್ಟು ಪೋಸ್ಟರ್ ಎಲ್ಲರಿಗೂ ಕೊಟ್ಟು
ನಮ್ಮ ಧ್ವಜವನ್ನು ಹಿಡಿದಿಟ್ಟು ರಜೆಯನ್ನು ನೀಡುವ ವಾರ

ಬ್ಯಾನರ್ ಸ್ಲೋಗನ್ ಊರೆಲ್ಲ ಹಾಕಿ ವಾಹನ ನಿಲ್ಲಿಸಿ ಗಲಾಟೆ ಮಾಡಿ
ಚಪ್ಪಲಿ ಆರತಿ ವೈರಿಗೆ ಮಾಡಿ ವೈಕುಂಠ ಸಮಾರಾಧನೆ ಮಾಡುವ ವಾರ

ಪಡ್ಡೆ ಹುಡುಗರಿಗೆ ಕಿಚ್ಚನು ಹಚ್ಚಿ ಸಂಭ್ರಮದಿಂದ ಬಾವುಟ ನೀಡಿ
ನಮ್ಮ ರಾಜ್ಯದ ಕೀರ್ತಿಯ ಹಾಡಿ ಸಕಲ ರಾಜ್ಯವ ಮುಚ್ಚುವ ವಾರ

(ರಚನೆ: ರಾಮಕೃಷ್ಣ ಬೆಳ್ಳೂರು)