Posts Tagged ‘ಕನ್ನಡ’

ಕನ್ನಡದ ಕಂಪು

August 27, 2019

ಕನ್ನಡದ ಕಂಪು ಎಲ್ಲೆಡೆ ಹರಡಲಿ
ಕನ್ನಡಿಗನೆಂಬ ಛಾಪು ಎಲ್ಲೆಡೆ ಮೂಡಲಿ
ಕನ್ನಡತನ ಎಲ್ಲರಲ್ಲೂ ಪಸರಿಸಲಿ

ಬರವಣಿಗೆ ಆಗಲಿ ಕನ್ನಡ

‘Angadiyalli Kannada Nudi’ cartoon

February 3, 2013

rwbangadiyallikannadanudi03

 

Cartoon: RK

Also visit the Cartoon page on RwB.

Related Post:  “ಅಂಗಡಿಯಲ್ಲಿ ಕನ್ನಡ ನುಡಿ” ಹೊತ್ತಿಗೆ ಬಿಡುಗಡೆ

“ಅಂಗಡಿಯಲ್ಲಿ ಕನ್ನಡ ನುಡಿ” ಹೊತ್ತಿಗೆ ಬಿಡುಗಡೆ

May 10, 2010

ಏನ್ ಗುರು, ಕಾಫಿ ಆಯ್ತಾ?

ಓ, ಬನವಾಸಿ ಬಳಗದಲ್ಲೇ ಎರ್ಡ್ ಲೋಟ ಆಯ್ತು.
ಅದರ ಜೊತೆ ಬಳಗದ ಸದಸ್ಯರ ಪರಿಚಯ.
ಕೆಲ ಹಳೆ ಸ್ನೇಹಿತರ ದರ್ಶನ.
ಚಿರ-ಪರಿಚಿತರ ಭೇಟಿ ಕೂಡ ಆಯ್ತು ಗುರು.

ಇಷ್ಟೆ ಅಲ್ಲ ಗುರು, ಬಳಗದ ಯೋಜನೆಗಳು, ಧ್ಯೇಯೋದ್ದೆಶಗಳು ಮತ್ತು ಚಟುವಟಿಕೆಗಳ ಬಗ್ಗೆ ಮಾತುಕಥೆ ಕೇಳಿ ನಮ್ಮಲ್ಲಿರೋ ಕನ್ನಡಿಗನ್ನ ಬಡಿದೆಬ್ಬಿಸಿತು..

ಒಟ್ಟ್ನಲ್ಲಿ, ನಿನ್ನೆ ಸಂಜೆ ’ಅಂಗಡಿಯಲ್ಲಿ ಕನ್ನಡ ನುಡಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸೊಗಸಾಗಿ ನಡೀತು.

ಎಲ್ಲಿ, ಪುಸ್ತಕ ತತ್ತ?

ಪರ್ವಾಗಿಲ್ಲ ಗುರು, ಚೆನ್ನಗ್ಬರ್ದವ್ರೆ.

ಇದೇನ್ ಗುರು, ಈ ಯಂಗ್ಯ ಚಿತ್ರಗುಳ್ನ ಗೀಚಿರೋ ಶೈಲಿ ನೋಡಿದ್ರೆ, ಎಲ್ಲೋ ನೋಡ್ದಂಗಿದೆ ?

ಹೂಂ ಗುರು, ಇವ್ನು ನಮ್ಮಾಸಾಮಿ, ಬೆಳ್ಳೂರು ಗೀಚಿರೋದು.

***

ಮುನ್ನುಡಿಯಲ್ಲಿ…

ಈ ಹೊತ್ತಿಗೆಯು ಮಾರುಕಟ್ಟೆಯಲ್ಲಿ ನಮ್ಮ ಹಕ್ಕಿನ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವ ಪ್ರಯತ್ನ. ಈ ದಿನ ನಾಡಿನ ಮಾರುಕಟ್ಟೆಯಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನ ಸಿಗುತ್ತಿಲ್ಲ ಎನ್ನುವುದು ಒಂದೆಡೆ ಎದ್ದು ತೋರುತ್ತಿದ್ದರೆ, ಹಲವೆಡೆ ನಮ್ಮ ಜನರಿಗೇ ‘ಇಂತಿಂತಹ ಕಡೆಗಳಲ್ಲಿ ಕನ್ನಡ ಬಳಸಬಾರದು, ಬಳಸಲಾಗಲ್ಲ’ ಎನ್ನುವ ಮನಸ್ಥಿತಿ ಇದೆಯೇನೋ ಎನ್ನುವಂತೆ ತೋರುತ್ತದೆ. ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಬರೆಯಬಾರದು, ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಕನ್ನಡ ಬಳಸಬಾರದು, ಮಾಲ್‌ಗಳಿಗೆ ಹೋದಾಗ, ವಿಮಾನನಿಲ್ದಾಣಕ್ಕೆ ಹೋದಾಗೆಲ್ಲಾ ನಾವುಗಳು ಇಂಗ್ಲೀಷಲ್ಲೇ ಮಾತಾಡಬೇಕು… ಇತ್ಯಾದಿ ಭ್ರಮೆಗಳು ನಮ್ಮಲ್ಲಿರುವಂತೆ ತೋರುತ್ತದೆ. ಒಟ್ಟಾರೆ ನಮ್ಮ ಜನರು ಗ್ರಾಹಕಸೇವೆಯಲ್ಲಿ ನಮ್ಮ ನುಡಿಗೆ ಇರುವ ಮಹತ್ತರವಾದ ಪಾತ್ರವನ್ನೇ ಮರೆತಿರುವಂತೆ ತೋರುತ್ತದೆ. ಈ ಮರೆವನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದ ನಾವು ಈ ಹೊತ್ತಿಗೆಯನ್ನು ಹೊರತರುತ್ತಿದ್ದೇವೆ.
ಬೆನ್ನುಡಿಯಲ್ಲಿ…

ಗ್ರಾಹಕ ಹಕ್ಕುಗಳ ಬಗ್ಗೆ ನಾನಾ ರೀತಿಯ ಜಾಗೃತಿ ಅಭಿಯಾನಗಳು ಎಲ್ಲೆಡೆ ನಡೆಯುತ್ತಾ ಇರುತ್ತವೆ. ತೂಕ, ಅಳತೆ, ಪ್ರಮಾಣ, ಬೆಲೆ, ಗುಣಮಟ್ಟ, ಸೇವೆ, ಇವೆಲ್ಲವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾರ್ಚ್ 15ನ್ನು ವಿಶ್ವ ಗ್ರಾಹಕ ದಿನಾಚರಣೆಯಾಗೂ ಆಚರಿಸಲಾಗುತ್ತಿದೆ. ಈ ಗ್ರಾಹಕ ಹಕ್ಕುಗಳನ್ನು ಆಳವಾಗಿ ಪರಿಶೀಲಿಸಿದಾಗ ಇಲ್ಲಿ ಭಾಷೆಯ ಪಾತ್ರವನ್ನೇ ಮರೆತಿರುವುದು ಕಾಣುತ್ತದೆ. ಅಂತಹ ಭಾಷಾ-ಆಯಾಮ ಇಲ್ಲದ ಕಾರಣದಿಂದಲೇ ಗ್ರಾಹಕರಿಗೆ ನಾನಾ ರೀತಿಯಲ್ಲಿ ತೊಡಕುಗಳಾಗುತ್ತಿವೆ. ಈ ಬಗ್ಗೆ ಅರಿವು ಮೂಡಿಸುವ, ಈ ದಿಕ್ಕಿನಲ್ಲಿ ನಿಮ್ಮನ್ನು ಯೋಚಿಸಲು ಪ್ರೇರೇಪಿಸುವ ಉದ್ದೇಶದಿಂದ ಈ ಕೊಳ್ಳುಗರ ಕೈಪಿಡಿಯನ್ನು ರೂಪಿಸಿ ನಿಮ್ಮ
ಕೈಗಿಟ್ಟಿದ್ದೇವೆ.
ಬನವಾಸಿ ಬಳಗದ ಗುರಿ, ಕನ್ನಡನಾಡಿನ ಮಾರುಕಟ್ಟೆಯಲ್ಲಿ ಬರಿಯ ಕನ್ನಡವನ್ನಷ್ಟೇ ಬಲ್ಲ ಒಬ್ಬ ಸಾಮಾನ್ಯ ಕನ್ನಡಿಗನೂ ತನ್ನೆಲ್ಲಾ ವ್ಯಾಪಾರ ವಹಿವಾಟುಗಳನ್ನು ಸಲೀಸಾಗಿ ಪೂರೈಸಿಕೊಳ್ಳುವಂತಾಗಬೇಕು ಎಂಬುದು. ತನ್ನದೇ ನಾಡಿನ ಯಾವುದೇ ಅಂಗಡಿ, ಮುಂಗಟ್ಟು, ಕಛೇರಿ, ಬ್ಯಾಂಕು, ಮನರಂಜನೆ, ವ್ಯಾಪಾರ, ಉದ್ದಿಮೆ, ಮಾರುಕಟ್ಟೆಗಳಲ್ಲಿ ಭಾಷೆಯ ಕಾರಣದಿಂದ ಯಾವ ತೊಡಕನ್ನೂ ಎದುರಿಸದಂತಹ ವ್ಯವಸ್ಥೆ ನಿರ್ಮಾಣವಾಗಬೇಕು. ಈ ಗುರಿ ಈಡೇರಬೇಕಾದರೆ ಈಗಿರುವ ಪರಿಸ್ಥಿತಿ ಬದಲಾಗಬೇಕು. ಆ ಬದಲಾವಣೆ ಜಾಗೃತರಾದ ಗ್ರಾಹಕರಿಂದ ಮಾತ್ರ ಸಾಧ್ಯ. ಅಂತಹ ಬದಲಾವಣೆಯೆಡೆಗೆ ಹೆಜ್ಜೆಗಳನ್ನಿಡಲು ದೀವಿಗೆಯಾಗಲಿ ಈ ಹೊತ್ತಿಗೆ ಎಂಬ ಆಶಯ ನಮ್ಮದು. ಓದಿರಿ, ಜಾರಿಗೆ ತನ್ನಿ, ಬದಲಾವಣೆಗೆ ಕಾರಣರಾಗಿರಿ.

ಹೊತ್ತಿಗೆಗಾಗಿ ಸಂಪರ್ಕಿಸಿ…
ಈ ಪುಸ್ತಕದ ತುಂಬಾ ಅಂದವಾದ ವ್ಯಂಗ್ಯಚಿತ್ರಗಳು, ಕಿರುಸಂದೇಶಗಳು ಇದ್ದು 5 X 7 ಇಂಚು ಅಳತೆಯಲ್ಲಿ 56 ಪುಟಗಳಿವೆ. ಬಿಡುಗಡೆಗೆ ಬಂದಿದ್ದ ಗೆಳೆಯರೆಲ್ಲ ‘ಈ ಹೊತ್ತಿಗೆ ಆಕರ್ಷಕವಾಗಿ ಮೂಡಿ ಬಂದಿದೆ’ ಎಂದು ಬೆನ್ನು ತಟ್ಟಿದರು. ನೀವೂ ಈ ಪುಸ್ತಕವನ್ನು ಪಡೆದುಕೊಳ್ಳಬೇಕೆಂದಿದ್ದಲ್ಲಿ kacheri@banavasibalaga.org ಗೆ ಬರೆಯಿರಿ. ನಿಮಗೆ ಬೇಕಿರುವಷ್ಟು ಪ್ರತಿಗಳನ್ನು ಪಡೆದುಕೊಳ್ಳಿರಿ.
ಕೃಪೆ: ಏನ್ ಗುರು, ಕಾಫಿ ಆಯ್ತಾ?