Posts Tagged ‘ಜಗದ್ಗುರು ಸ್ವಾಗತ ಸ್ತುತಿ’

ಜಗದ್ಗುರು ಸ್ವಾಗತ ಸ್ತುತಿ

May 14, 2022

ಜಗದ್ಗುರು ಸ್ವಾಗತ ಸ್ತುತಿ

ರಚನೆ : ರಾಮಕೃಷ್ಣ ಬೆಳ್ಳೂರು

ಸ್ವಾಗತಂ ಗುರು ಶ್ರೀ ಚಂದ್ರಮೌಳೀಶ್ವರಗೇ
ಶಕ್ತಿಗಣಪತಿ ಶಾರದಾಂಬೆಗೆ
ಶಂಕರಾಚಾರ್ಯರಿಗೇ ||
ಕಾಲಭೈರವಗೇ ಕಾಳಿ ದುರ್ಗಿಗೇ
ವೀರ ಧೀರ ಶೂರ ಹನುಮ
ಮಾರುತಿ ಚರಣಕ್ಕೇ ||
ಮಲ್ಲಿಕಾರ್ಜುನಗೇ ಚೆಲ್ವ ಜನಾರ್ದನಗೇ
ಅಂಬಾಭವಾನಿ ಕಂಬದ ಗಣಪತಿ
ಚಂಡಿಚಾಮುಂಡಿಗೇ ||
ವಿದ್ಯಾರಣ್ಯರಿಗೇ ವಿದ್ಯಾಶಂಕರಗೇ
ವಾಗೀಶ್ವರಿಗೇ ವಜ್ರದೇಹ
ಗರುಡಾಂಜನೇಯರಿಗೇ ||
ತುಂಗಭದ್ರೆಗೇ ಶೃಂಗನಿವಾಸಿನಿಗೇ
ಶೃಂಗೇರಿಪುರದೊಳು
ನೆಲೆಸಿರುವಂಥ ಶಾರದಾಂಬೆಗೇ ||
ಸಚ್ಚಿದಾನಂದ ಶಿವ ಅಭಿನವ
ನೃಸಿಂಹಭಾರತಿಗೇ
ಚಂದ್ರಶೇಖರಭಾರತೀ ಗುರು
ಸಾರ್ವಭೌಮರಿಗೇ
ಚಂದ್ರಶೇಖರಭಾರತೀ ಗುರು
ವಿದ್ಯಾತೀರ್ಥರಿಗೇ
ಚಂದ್ರಶೇಖರಭಾರತೀ ಗುರು
ಭಾರತೀತೀರ್ಥರಿಗೇ
ಚಂದ್ರಶೇಖರಭಾರತೀ
ವಿಧುಶೇಖರಭಾರತಿಗೇ ||

ಸ್ವಾಗತಂ ಗುರುಶ್ರೀ ಆಮ್ನಾಯ ಪೀಠಕ್ಕೆ
ದಕ್ಷಿಣಾಮ್ನಾಯದ ಉಭಯ ಜಗದ್ಗುರು
ಶಂಕರಾಚಾರ್ಯರಿಗೆ
ಮಹಾಸನ್ನಿಧಾನಂಗಳಿಗೆ ಸನ್ನಿಧಾನಂಗಳಿಗೆ
ನಮಿಸುವೆ ಗುರುವೇ ಸ್ವಾಗತ ನಿಮಗೆ
ಭಾರತಿ ತೀರ್ಥರಿಗೆ ವಿಧುಶೇಖರ ಭಾರತಿಗೆ