
Posts Tagged ‘Amma’
22 years ago, Amma passed away on June 22
June 22, 2021ಮನೆಗೆ ನಂದಾದೀಪವಾದ ಮಹಾಲಕ್ಷ್ಮೀ
June 22, 2021ಮಹಾಲಕುಮಿ
June 13, 2021ಮ ಹಾ ಲ ಕ್ಷ್ಮೀ WORDPLAY
June 13, 2021June 22, 2020
ಮಹಾಮಾತೆಗೆ ನಮನ
ರಚನೆ: ರಾಮಕೃಷ್ಣ ಬೆಳ್ಳೂರು
ಮಹಾಜನರ ಸಹವಾಸದಿಂದ
ಮಹಾಕಾರ್ಯಗಳನ್ನು ಮಾಡಿ
ಮಹಾಕಾವ್ಯವಾಯಿತು ನಿನ್ನ ಜೀವನ
ಮಹಾತ್ಮರಾದ ಗುರುರಾಯರ ದರ್ಶನ ಪಡೆದು
ಮಹಾನುಭಾವರ ಸತ್ಸಂಗದಿ ಇದ್ದು
ಮಹಾಪೂರವೆಂಬ ಜನರ ನಡುವೆ ಗೆದ್ದು
ಮಹಾಪ್ರಳಯ ದೇಹಸ್ಥಿಥಿಗೆ ಬಂದರೂ ಮಹಾಪ್ರಾಣಗಳನ್ನು ಕಾಪಾಡಿದೆ ನೀನು
ಮಹಾಕಂಟಕಗಳನ್ನು ಬದುಕು ಒಡ್ಡಿದರೂ
ಮಹಾಪಥದಲ್ಲಿ ನಡೆದು
ಮಹಾದೇವ ಕರುಣಿಸಿದ
ಮಹಾಪ್ರಸಾದವನ್ನು
ಮಹಾಕುಂಭದಲ್ಲಿರಿಸಿ
ಮಹಾಜ್ಞಾನ ಪಡೆದೆ ನೀನು
ಮಹಾಮೇಧಾವಿಗಳಲ್ಲಿ
ಮಹಾಭಾಷ್ಯಗಳನ್ನು ಕಲಿತು
ಮಹಾತತ್ವವನ್ನರಿತು
ಮಹಾದಾನಗಳನ್ನು ಮಾಡಿ
ಮಹಾತೇಜಸ್ಸಿನ ವರ ಹೊಂದಿದೆ ನೀನು
ಮಹಾರಾಜನಾದ ದೊರೆಯ ಕೈ ಹಿಡಿದು
ಮಹಾರಾಣಿಯಾಗಿ ದೊರೆಸಾನಿಯಾಗಿ
ಮಹಾಭಾರತದ ಪ್ರಜೆಯಾಗಿ
ಮಹಾಮತಿಯಿಂದ
ಮಹಾಶಯರಿಂದ ಕಲಿತ
ಮಹಾಮಂತ್ರಗಳ ಬಲದಿಂದ
ಮಹಾಕುಟುಂಬದಂತಹ
ಮಹಾಸಾಗರವಾದ ಸಂಸಾರಸಾಗರದಿ
ಮಹಾ ಉತ್ಸವಗಳನ್ನಾಚರಿಸಿ
ಮಹಾಮಾರಿ ದೇಹಕ್ಕೆ ಬಂದರೂ
ಮಹಾಯುದ್ಧ ನಡೆಸಿ ಜಯಿಸಿ
ಮಹಾಪಾಶವಾದ ಮೋಹಪಾಶಕ್ಕೆ ಸಿಲುಕದೆ
ಮಹಾಲಯದ ಮಹಾನವಮಿಯವರೆಗೂ ಕಾಯದೆ
ಮಹಾಪ್ರಸ್ತಾನಕ್ಕೆ ಜ್ಯೇಷ್ಠ ಶುದ್ದ ನವಮಿಯಂದು ಹೊರೆಟ
ಮಹಾಮಾತೆ ಮಹಾಲಕ್ಷ್ಮೀ!
ಇಗೋ ನಿನಗೆ ಅಕ್ಷರ ನಮನ!
ಮಂಚಾಲಮ್ಮ-ಮಾಚಮ್ಮ
June 22, 2019ಮಂಚಾಲಮ್ಮ-ಮಾಚಮ್ಮ
ರಚೆನೆ: ರಾಮಕೃಷ್ಣ ಬೆಳ್ಳೂರು
ರಾಯರಿಗೆ ಭೂದಾನ ಮಾಡಿದಳು ಮಂಚಾಲಮ್ಮ
ರಾಯರಿಂದ ವರದಾನ ಪಡೆದಳು ಮಾಚಮ್ಮ
ಅಲ್ಲಿ ಗ್ರಾಮದೇವತೆಯ ಶಕ್ತಿ
ಇಲ್ಲಿ ಮಾತೃದೇವತೆಯ ಭಕ್ತಿ
ಅಲ್ಲಿ ರಾಯರ ದರುಶನ ಪಡೆಯುವ ಮುನ್ನ
ಪಡೆಯಬೇಕು ಮಂಚಾಲಮ್ಮನ ದರುಶನ
ಇಲ್ಲಿ ಮಾಚಮ್ಮನ ಮನವೆಂಬ ಮಂತ್ರಾಲಯದಲ್ಲಿ
ಆಗುವುದು ನಿತ್ಯ ರಾಯರ ದರುಶನ
ಅವಳ ದೇವಾಲಯದ ಪಕ್ಕದಲ್ಲಿದೆ ಬೃಂದಾವನ
ಇವಳ ಹೃದಯಾಲಯದ ಒಳಗಿದೆ ತಪೋವನ
ಮಂಚಾಲಮ್ಮ ಮಾಚಮ್ಮ ಇಬ್ಬರಿಗೂ ಅನುಗ್ರಹಿಸದರು ರಾಯರು
ಇವರಿಬ್ಬರೊಡನೆ ಸೇರಿ ಆಶೀರ್ವದಿಸಬೇಕು ನಮ್ಮನ್ನು ಗುರುರಾಯರು
ಗುರುರಾಯರೇ ನಮಗೆ ಕಲ್ಪವೃಕ್ಷ
ಕೈ ಚಾಚಿ ನಿಂತಿರುವೆವು, ನೀಡಿ ನಮಗೆ ಜ್ಞಾನಭಿಕ್ಷ
ಕಲಿಯುಗದಲ್ಲಿ ಗುರುರಾಯರೇ ಕಾಮಧೇನು
ಎಲ್ಲ ಅವನ ಇಚ್ಛೆ, ಇಲ್ಲಿ ನಮ್ಮದೇನು?!