




ಮಹಾಮಾತೆಗೆ ನಮನ
ರಚನೆ: ರಾಮಕೃಷ್ಣ ಬೆಳ್ಳೂರು
ಮಹಾಜನರ ಸಹವಾಸದಿಂದ
ಮಹಾಕಾರ್ಯಗಳನ್ನು ಮಾಡಿ
ಮಹಾಕಾವ್ಯವಾಯಿತು ನಿನ್ನ ಜೀವನ
ಮಹಾತ್ಮರಾದ ಗುರುರಾಯರ ದರ್ಶನ ಪಡೆದು
ಮಹಾನುಭಾವರ ಸತ್ಸಂಗದಿ ಇದ್ದು
ಮಹಾಪೂರವೆಂಬ ಜನರ ನಡುವೆ ಗೆದ್ದು
ಮಹಾಪ್ರಳಯ ದೇಹಸ್ಥಿಥಿಗೆ ಬಂದರೂ ಮಹಾಪ್ರಾಣಗಳನ್ನು ಕಾಪಾಡಿದೆ ನೀನು
ಮಹಾಕಂಟಕಗಳನ್ನು ಬದುಕು ಒಡ್ಡಿದರೂ
ಮಹಾಪಥದಲ್ಲಿ ನಡೆದು
ಮಹಾದೇವ ಕರುಣಿಸಿದ
ಮಹಾಪ್ರಸಾದವನ್ನು
ಮಹಾಕುಂಭದಲ್ಲಿರಿಸಿ
ಮಹಾಜ್ಞಾನ ಪಡೆದೆ ನೀನು
ಮಹಾಮೇಧಾವಿಗಳಲ್ಲಿ
ಮಹಾಭಾಷ್ಯಗಳನ್ನು ಕಲಿತು
ಮಹಾತತ್ವವನ್ನರಿತು
ಮಹಾದಾನಗಳನ್ನು ಮಾಡಿ
ಮಹಾತೇಜಸ್ಸಿನ ವರ ಹೊಂದಿದೆ ನೀನು
ಮಹಾರಾಜನಾದ ದೊರೆಯ ಕೈ ಹಿಡಿದು
ಮಹಾರಾಣಿಯಾಗಿ ದೊರೆಸಾನಿಯಾಗಿ
ಮಹಾಭಾರತದ ಪ್ರಜೆಯಾಗಿ
ಮಹಾಮತಿಯಿಂದ
ಮಹಾಶಯರಿಂದ ಕಲಿತ
ಮಹಾಮಂತ್ರಗಳ ಬಲದಿಂದ
ಮಹಾಕುಟುಂಬದಂತಹ
ಮಹಾಸಾಗರವಾದ ಸಂಸಾರಸಾಗರದಿ
ಮಹಾ ಉತ್ಸವಗಳನ್ನಾಚರಿಸಿ
ಮಹಾಮಾರಿ ದೇಹಕ್ಕೆ ಬಂದರೂ
ಮಹಾಯುದ್ಧ ನಡೆಸಿ ಜಯಿಸಿ
ಮಹಾಪಾಶವಾದ ಮೋಹಪಾಶಕ್ಕೆ ಸಿಲುಕದೆ
ಮಹಾಲಯದ ಮಹಾನವಮಿಯವರೆಗೂ ಕಾಯದೆ
ಮಹಾಪ್ರಸ್ತಾನಕ್ಕೆ ಜ್ಯೇಷ್ಠ ಶುದ್ದ ನವಮಿಯಂದು ಹೊರೆಟ
ಮಹಾಮಾತೆ ಮಹಾಲಕ್ಷ್ಮೀ!
ಇಗೋ ನಿನಗೆ ಅಕ್ಷರ ನಮನ!