Posts Tagged ‘son’

ಬೃಂದಾವನ ನಂದನವನ

August 24, 2021

ಬೃಂದಾವನ ನಂದನವನ
ರಚನೆ: ರಾಮಕೃಷ್ಣ ಬೆಳ್ಳೂರು

ಮಾಚಿ ಅಜ್ಜಿ ಮೊರೆ ಹೋದದ್ದು ಗುರುರಾಯರನ್ನು
ರಾಯರ ದೆಸೆಯಿಂದ ಪಡೆದಳು ಗುರುವಾರದಂದು ಮಾಚಿ ತನ್ನ ಮಗನನ್ನು

ಮಾಚಿ ಅಜ್ಜಿಯ ಆನಂದಕ್ಕೆ ಇಂದು ಪಾರವೇ ಇಲ್ಲದ ದಿನ
ಏಕೆಂದರೆ ರಾಯರ ಆರಾಧನೆಯಂದು ಬಂದಿದೆ ತನ್ನ ಮೊಮ್ಮಗನ ಹುಟ್ಟಿದ ದಿನ

ಈ ದಿವಸದಂದು ರಾಯರು ಸೇರಿದ್ದು ಬೃಂದಾವನ
ಮೊಮ್ಮಗನ ಜನನದಿಂದಾಯಿತು ಮಾಚಿಯ ಮನೆ ನಂದನವನ

ಮಂಚಾಲಮ್ಮ ಆಶ್ರಯ ನೀಡಿದ್ದು ರಾಯರಿಗೆ
ಮಾಚಮ್ಮ ಆಶ್ರಯ ನೀಡಿದ್ದು ನಮಗೆ

ಈ ಪವಿತ್ರದಿವಸದಂದು ಶಿರಸಾ ನಮಸ್ಕರಿಸುವೆವು ಗುರುರಾಯರಿಗೆ, ಗ್ರಾಮದೇವತೆಗೆ,
ಇಷ್ಟದೇವತೆಗೆ, ಮನೆದೇವರಿಗೆ, ಮಾತೃದೇವರಿಗೆ

ಎಲ್ಲರೂ ಕರುಣಿಸಿ ಹರಸಿ ಮಾಚಿಯ ಮೊಮ್ಮಗ ನಾರಾಯಣನಿಗೆ
ಸಕಲ ಜ್ಞಾನ ಸಂಪತ್ತುಗಳ ಜೊತೆಗೆ ನಿರಂತರ ಸಾಗಲಿ ಕಾರ್ಯಸಿದ್ಧಿಯ ಪಥದೆಡೆಗೆ