Archive for the 'Food' Category

ಆಚೆ ಮನೆಯ ಸುಬ್ಬಮ್ಮನಿಗೆ SPOOF

June 1, 2017

ನಾನು: ಏನ್ ಸುಬ್ಬಮ್ಮ್ನೋರೆ, ಸೋಮ್ವಾರ ಏಕಾದಶಿ. ಎಲ್ಲ ರೆಡೀನ?
ಸುಬ್ಬಮ್ಮನೋರು: ಏನ್ ಏಕಾದಶಿನೋ ಏನೊ…ನನ್ ಕಷ್ಟ ನನಗೆ.

ಅವರ ಕಷ್ಟಾನ ಇಲ್ಲಿ ಬರ್ದಿದ್ದೀನಿ…ದಯಮಾಡಿ ಓದಿ!

ಸುಬ್ಬಮ್ಮನ ಏಕಾದಶಿ ಇಂದು
ರಚನೆ: ರಾಮಕೃಷ್ಣ ಬೆಳ್ಳೂರು

ಆಚೆ ಮನೆಯ ಸುಬ್ಬಮ್ಮನಿಗೆ
ಏಕಾದಶಿ ಉಪವಾಸ
ಎಲ್ಲೊ ಸ್ವಲ್ಪ ತಿಂತಾರಷ್ಟೆ
ಚಾಟ್ಸು, ನೂಡಲ್ಸು, ಪಾಸ್ತ

ಮೂರೋ ನಾಲ್ಕೋ ಕಲ್ಲಂಗಡಿ ಹಣ್ಣು
ಸ್ವಲ್ಪ ಭೇಲ್ ಪಾಪ್ ಕಾರ್ನು
ಘಂಟೆಗೆ ಡಜ಼ನ್ನು ಸ್ಟ್ರಾಬೆರಿಹಣ್ಣು
ಆಗಾಗ ಒಂದೊಂದು ಬೇಬಿ ಕಾರ್ನು

ಮಧ್ಯಾನಕ್ಕೆಲ್ಲ ನುಚ್ಚಿನುಂಡೆ
ಕಾಂಗ್ರೆಸ್ ಹಾಕಿರೊ ಉಸಲಿ
ಎಲ್ಲೋ ಸ್ವಲ್ಪ ಬೆಣ್ಣೆ ದೋಸೆ ಟೇಸ್ಟಿಗೆ
ಬೆಣ್ಣೆ ಖಂಡಿತಾ ಅಸಲಿ

ರಾತ್ರಿಗೆ ಪಾಪ ಫುಡ್ ಸ್ಟ್ರೀಟೆ ಗತಿ
ಒಂದ್ ಲೋಟದ ತುಂಬಾ ಲಸ್ಸಿ
ಪಕ್ಕದಲ್ಲಿರೋ ಲಸ್ಸಿ ಬಾರಲಿ
ಸುಬ್ಬಮ್ಮ ತುಂಬ ಫಸ್ಸಿ

As a Fan guest on Majaa Bharatha (Colors Super) (Raj special: April 25, 2017)

April 26, 2017

As a Fan guest on Majaa Bharatha (Colors Super) (Raj special: April 25, 2017)

Below is the complete version of Raaja Panchakshara stotra and Raj Rangoli.

 

ಅದೇ ಕಲ್ಲು ಅದೇ ಕಲ್ಲು (Spoof song)

April 11, 2017

https://clyp.it/nhamijpr

ಅದೇ ಕಲ್ಲು ಅದೇ ಕಲ್ಲು (Spoof song)

ಮೂಲ ಗೀತೆ: ಅದೇ ಕಣ್ಣು ಅದೇ ಕಣ್ಣು
ರಚನೆ: ಚಿ.ಉದಯಶಂಕರ್
ಗಾಯಕರು: ಡಾ.ರಾಜಕುಮಾರ್
ಅಣಕು ಗೀತೆ ರಚನೆ ಮತ್ತು ಗಾಯನ: ರಾಮಕೃಷ್ಣ ಬೆಳ್ಳೂರು

koLi moTTe

January 25, 2017

rwb-motte

40 more Songs that make me cry – Part 3

October 10, 2016

17. Antaryami Alasiti Solasiti (Annamayya): The deep meaning words makes me cry throughout the song. SP Balasubrahmanyam and SP Sailaja have sung this soulful Annamacharya composition set to tune (Shivaranjini) by MM Keeravani with complete divinity.

18. Elu Narayane (Udayaraga album by Sri Vidyabhushana): This album was played everyday for years in my childhood. The flute bit at the beginning sets the mood of the song. When Sri Vidyabhushana starts ‘Elu Narayanane’… it simply means one has to wake up from slumber!

19. Ranganaayaka (Udayaraga album by Sri Vidyabhushana): The slow paced stotra at the beginning “kuNdala-maNdita-gaNda kambugreevam” gives us a hint of what is to follow. “Ranganaayaka” is sung in vilamba kala. It gives immense pleasure and mental peace to hear this devaranama, wonderfully sung by Sri Vidyabhushana. When he sings the line “Ghana shuka Shaunaka Vyasa Valmikaru nenedu nenedu kondaduvaro hariye” tears swell!

A word about the music director. H.K. Narayana was a well known singer and music composer from Karnataka, India. He was an icon of Light music and played an important role in popularizing the genre of Sugama Sangeetha in Kannada.

20. Shiva Shiva Ennada Naalige (Hemavathi): This song is out-of-the-world! It’s one of the most complex classical songs (half in abhogi and other half in todi – carnatic todi is different from Hindustani todi) sung by S Janaki whose rendition is energetic, vibrant and her felicity all through the very long and daunting song is remarkable. The composition is by L Vaidyanathan. Except for the last 1 minute or so you will enjoy the rest of the song and it’s sublime singing. Not that the last one minute is disappointing. It is just extremely hard to sing and Janaki has done a commendable job at it.

Janaki has managed the level of difficulty involved in singing the swaras really well. Singing the same swaras as a taan with akaaras (which is what the violin is doing) is quite different from actually saying the swaras as you sing it. That’s why you don’t hear too many carnatic singers attempting to render kalpana swaras (actual swaras not akaaras) at the 4th kaala (8 swaras per beat). But this song would have been better without the last few swaras at 4th speed when you sing two ragas.

The swarasthanam do go out of synch at super high speed to an extent. Though it is not bad. It is impossible to go back and forth between two ragas at that speed with human voice, with two different set of notes and assent and descent pattern.

21. Jag Mein Sundar Hai Do Naam (Anup Jalota): The comparisons are so perfect between lord Ram and Shyam… when Anup Jalota sings “Chaahe seetha-ram kaho ya bolo raadhe shyam” there are tears in my eyes.

22. Rang de chunariya (Anup Jalota): This bhajan takes you to another world…Anup jalota was born only to sing bhajans! When he gives answers to those set of questions “Jal se patla kaun hai…” I cry.

23. Patta Patta Boota Boota (Mehdi Hassan): One of the most fascinating yet intricate renditions by Shahensha-e gazal. I would never get enough by listening to this masterpiece of one and only Khan sahib Mehdi Hassan. When he begins this ghazal “Patta patta, boota boota, haal hamaaraa jaane hai” (Every leaf and every shrub here knows of my state), tears in my eyes!

24. Giripai (M.D Ramanathan): If you want to hear Raga Sahana, you must listen to MD Ramanathan which is medicine when you are in distress. MDR firmly believed that Carnatic music should give emotional satisfaction, instead of being merely an intellectual exercise.

When I was a three-year old, the great musician MD Ramanathan treated me with a ‘Masale Dose’. The story goes like this. I was taken by my uncle to MDR’s concert that was in Bangalore and I waited for the kruthi ‘Giripai’ and he didn’t sing it in this concert. My uncle, who knew the singer personally, took me the next day to the hotel where MDR was staying. The singer asked me what ‘M.D.’ stood for in his name and it seems I said ‘Masale Dose’. And not only did he treat me with my favourite number, he treated me with my favourite dish as well!

***

Also read:

40 more Songs that make me cry – Part 1

40 more Songs that make me cry – Part 2

40 Songs that make me cry – Part 1

40 Songs that make me cry – Part 2

Random Jottings on Facebook – 8

September 14, 2016
ನಮ್ ಫ್ರೆಂಡ್ಗೆ ಅವನ್ ಮನೆದೇವ್ರು ನಾಗಪ್ಪನ ಮೇಲೆ ಎಷ್ಟ್ ಭಕ್ತಿ ಅಂದ್ರೆ ಕಾರ್ ರಿವರ್ಸ್ ಮಾಡೋ ಹಾಡೂ ಪುಂಗೀ ಊದೋ ಟ್ಯೂನು!
(ಅವನ್ ರಿವರ್ಸ್ ಮಾಡ್ದಾಗ್ಲೆಲ್ಲ ನಾನ್ ಮೋರಿ ಕಡೆ ಕಣ್ ಹಾಯಿಸ್ತೀನಿ… ಯಾವ್ ಕಡೆ ಇಂದ ನಾಗಪ್ಪ ಹಾಯ್ ಹೇಳಕ್ ಬರ್ತಾನೋ ಅಂತ)
***

The First BRO song ever!

Bro dear
None other
to bestow affection
on me
and protect me
other than you,
Lord of the Universe!

#brOcEvArevarurA

***

What is the difference between a soldier, a cook, a roasted corn and a smoker?

*
*
*
*
*
*
*
*
*
*
*
*

A soldier is under fire, a cook is in front of fire, roasted corn is over the fire and a smoker? Behind the fire.

***

Kaveri ಶುರು ಆಗೋದೆ KA ಇಂದ. ಕಾವೇರಿನೇ ಅವಳ ಹೆಸರಲ್ಲಿ KA ಹಾಕಿಕೊಂಡಿದ್ದಾಳೆ. ಇನ್ನೇನು ಬೇಕಪ್ಪ?!

***

Amavasye effect at Eden Gardens. But ಮ್ಯಾಚ್ ಗೆ ಇನ್ನು ತರ್ಪಣ ಬಿಡಬೇಡಿ.

***

ಶ್ಯಾಮ: ಯಾಕೋ ಭೀಮ, ನಾಳೆ ಲಾಸ್ಟ್ ಎಗ್ಸಾಮು. ಓದ್ಕೋಳಲ್ವಾ?
ಭೀಮ: ಇನ್ನೇನ್ ಓದೋದು ಬಿಡೋ. ಯುದ್ಧ ಶುರು ಆಗತ್ತೆ. ಬಾಂಬ್ ಹಾಕ್ತಾರೆ ಅವ್ರು. ಇಲ್ಲೀವರೆಗೂ ಎಫೆಕ್ಟ್ ಇರತ್ತಂತೆ. ಇನ್ ಫುಲ್ ಟೈಮ್ ಪಾಸ್ ಅಷ್ಟೆ.

***

MAHA = Dodda
AALAYA = Mane
AMAVASYE = Power
In old Indian culture and beliefs, irrespective of religions, Amavasye is considered a time of great power.

***

ಕಾಕನಕೋಟೆ:
ಅರ್ಥ 1: ಮನೆ ಸುತ್ತಲೂ ಕಾಕಾ ಅಂಗಡಿ
ಅರ್ಥ 2: ವೈಧಿಕ ಧರ್ಮ ಸಭೆ ಟೆರೇಸ್ (ಪಿತೃಗಳಿಗೆ ಪ್ರಿಯ)

***

ಈಜು ಕಲಿತ್ಮೇಲ್ ಮುಗ್ಧೋಯ್ತ್…ಲೋಕಲ್ ಚಾನೆಲ್ಸ್ ಬಿಲ್ಕುಲ್ ಬೇಡ, ಬರೀ ಇಂಗ್ಲೀಷ್ ಚಾನೆಲ್ಲೆ.

***

ಅದೃಷ್ಟದ ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ಬಾಗಿಲು ತೆರೆಯುತ್ತದೆ.
ಅಂದ್ರೆ ಅರ್ಥ ಇಷ್ಟೆ: ಕಾರ್ಪೆಂಟರ್ ಕೆಲಸ ಸರಿಯಾಗಿ ಮಾಡಿಲ್ಲ.

***

This into This divided by This!
ಯಾವ Thisಗೆ ಯಾವ Thisಅನ್ನು Into ಮಾಡಿ ಯಾವ This ಅನ್ನು Divide ಮಾಡ್ಬೇಕು ಅಂತ ಗೊತ್ತಾಗಿ ಹೋದರೆ, ನಾನು ದೇವರು ಆಗಿ ಹೋಗ್ತೀನಿ!
ಗೀಚೋದೇ ನನ್ನ ಬಿಜ಼್ನೆಸ್ಸು
ಆದ್ರೆ
ಲೆಕ್ಕಾನೇ ನನ್ನ ವೀಕ್ನೆಸ್ಸು

***

Knee replacement ಮಾಡಸ್ಕೋಬೋದು… ನೀ replacement ಖಂಡಿತಾ ಆಗಲ್ಲ.

***

Do North Indians refer to Anna DMK party people as Analog?

***

Drug peddlers: Those who sell drugs on cycle

***

Parabola: When Shiva not only talks in parables but writes them in paragraphs.
[Hyperbola : Talking too much]

***

Distributive Property : ಆಸ್ತಿ ಹಂಚುವ ಪ್ರಕ್ರಿಯೆ.

***

ಮಕ್ಕಳ ಜೊತೆ ಐಸ್ ಪೈಸ್ ಆಡ್ತಿದ್ದೆ. ನಾನ್ ಔಟಾದಾಗ, ಐವತ್ತರ ತನಕ ಏಣಿಸಿ ನಿಂತಿದ್ದೆ. ಒಬ್ಬ ಹುಡುಗ ಎಲ್ಲಿಂದ್ಲೋ ಕೂಕ್ಕೊಂಡ: “ಅಜ್ಜಿ ಮನೆ ಕಾಯಂಗಿಲ್ಲಾ” ಅಂತ. ನಾನ್ ವಾಪಸ್ ಕೂಗ್ ಹೇಳ್ದೆ: “ಲೋ! ನಲ್ವತ್ ವರ್ಷ್ದಿಂದ ಅಜ್ಜಿ ಮನೆನೇ ಕಾಯ್ತಿರೋದು. ಕೂತ್ಕೊಳೋ ಸುಮ್ನೆ” ಅಂತ.

***

Without RK, WORK is incomplete.

***

Mutually Bond ಆಗಿದ್ದ ಜೋಡಿ assured ಆಗಿ Providence Share ಮಾಡಿದ್ರೆ Insured Real Estateಗೆ Assured ಆಗಿ ಕಿಚ್ಚು ಹಚ್ಚೆಂದ ಮರ್ಮಜ್ಞ.

***

ಉರಿಸಿರೋದು ಸಾಲ್ದು ಅಂತ ಈಗ ‘ಉರಿ’ನೇ ಹತ್ಕೊಂಡ್ ಉರಿಯೋ ಹಾಗೆ ಮಾಡಿದಾರೆ.

***

Maths ಹಲವರಿಗೆ ಹುಚ್ಚು ಹಿಡಿಸೋದ್ ಯಾಕೆ ಗೊತ್ತಾ?
ಅದರಲ್ಲಿ MADS ಇದೆ.
Multiplication-Addition-Division-Subtraction

***

ಪ್ರಾಪರ್ಟಿ ಮಾಡಿರೋರು, ಮನೆ ಕಟ್ಟಸ್ತಿರೋರು, ಬಿಲ್ಡರ್ಸು… ಇವ್ರೆಲ್ಲ ಯಾರು?
’ಕಟ್ಟಪ್ಪ’ನ ವಂಶಸ್ಥರು!

***

ab bacche log sacchi mein acche din sachmuch aayenge! jug jug jio! modi-choor ladoo khaake so jao!

***

ಗಿಮಿಕ್ಮಾಡ್ಸಿಂಗಾರೂಜನಮುಂಗಾರೂನ್ನೋಡಕ್ತೇಟ್ರಿಗೆಂಗಾರಾಬರ್ತಾರೇನೋಂತ.

***

SI unit of weight: The new tons that the cops put on.

***

ಸೋಮ: ಇದೇನೋ ಫಿಲಂ ಹೆಸ್ರು ಹಿಂಗಿದೆ? BB5 ಅಂತೆ!
ಭೀಮ: ಬಿಗ್ ಬಾಸ್ ಫೈವ್ ಕಥೆ ಇರ್ಬೇಕೋ.

***

The problem with water is: It is not a solution. It is not a substance. It is a compound.

No wonder the problem is compounding!

***

It is Times ನೋವು ever since Arnab Goswami started those heated and angry discussions.

***

How are these connected?
Our PM, Analysis of Means, Popular Telugu Singer (voice closely resembles SPB’s) and Mona darling?

All of these is an anagram of ONAM.
[NAMO, ANOM, MANO and MONA]

***

Gunda: Yendha mone! Already decked up! Can hardly see you amidst so much Gold!
Kunjumon: Blanning four Onam! Dhiz iz Zizdarz gift from Thubai!
Gunda: So if I take a picture of you with so much Gold, it can be titled:
Kunjumon’s ONAMpic meDal!
Kunjumon: Hey! This is Note Medal!
Gunda: For you, gold is medal. For us, gold is metal. Happy Vownam!
Kunjumon: Dhangyu! Come for onasadya!

***

ಬೇರೆಯವರು ನಮ್ಮ ಮೈ ಮುರಿಯೋದು ತಪ್ಪು. ನಮಗೆ ನಾವೇ ಮೈ ಮುರ್ಕೊಂಡ್ರೆ ಓಕೆ.

***

ಸುದ್ದಿ: ಅಮಿತಾಭ್ ಬಚ್ಚನ್ ಮಾಡಿದರು ಲಾಲ್ ಬಾಗ್ ಗಣಪತಿಯ ದರ್ಶನ
ರೆಗ್ಯುಲರ್ ಲಾಲ್ ಬಾಗ್ jogger 1 : ಏನಯ್ಯ, ನಾವು ಇಷ್ಟು ವರ್ಷದಿಂದ ಬರ್ತಿದ್ದೀವಿ ಲಾಲ್ ಬಾಗ್ಗೆ. ಗಣಪತಿ ಇರೋದೇ ಗೊತ್ತಿಲ್ಲ.
ರೆಗ್ಯುಲರ್ ಲಾಲ್ ಬಾಗ್ jogger 2: ಆ ಸೈಡ್ ಎಲ್ಲೋ ವೆಸ್ಟ್ ಗೇಟ್ ಕಡೆ ಜೋರಾಗಿ ಪೆಂಡಾಲ್ ಹಾಕಿರ್ಬೇಕು.

***

ಸೊಳ್ಳೆ ಪರದೆ ಹಾಕಿಸಿಕೊಂಡ ಮಾಲ್ ಮತ್ತು ಕಟ್ಟಡಗಳು!

***

ದೋಸೆ ಭಟ್ಟರ ಸಮಾವೇಶ.
ಕೊಲಂಬಿಯಾದ Dos Quebradas ದಲ್ಲಿ ನಡೆಯಲಿರುವ International DOSE competitionಗೆ ಯಾವ ಹೋಟೆಲ್ ಹೋಗಬೇಕೆಂದು discussion ನಡೀತಿದೆ.
ಆಗ…
ದೋಸೆ ಭಟ್ಟರು (ಸೌತ್ ಬೆಂಗಳೂರಿನ ಹೋಟೆಲ್ ಗಳನ್ನು ನೋಡುತ್ತ) ಶಾಸ್ತ್ರೋಕ್ತವಾಗಿ ಮಾಡಬೇಕಾದ ಹವನ ಹೋಮಗಳೆಲ್ಲ ನಿಮ್ಮ ದಯದಿಂದ ನಿರ್ವಿಘ್ನವಾಗಿ ಮುಗಿದಿವೆ. ಈಗ competitionಗೆ ಯಾವ ಹೋಟೆಲನ್ನು ಕಳಸೋಣ?
ಕೃಷ್ಣ ಭಟ್ಟ: ದೋಸೆ ಹೋಮದ ಕಂಕಣಧಾರಿಯಾದ ನಿಮ್ಮನ್ನು ಬಿಟ್ಟು ಯಾವ ಹೋಟೆಲ್ ಬೇಕಾದರೂ ಹೋಗಬಹುದು.
ದೋಸೆ ಭಟ್ಟರು : ಮತ್ತೆ, ಯಾರನ್ನು ಕಳಸೋಣ?
CTR: ಯಾಕ್ ದೋಸೆ ಭಟ್ಟ್ರೆ? ನನ್ನ ದೋಸೆ ರುಚಿ ಮೇಲೆ ನಿಮಗಿದ್ದ ನಂಬಿಕೆ ಕಡಿಮೆಯಾಯಿತೆ? ಬೆಂಗಳೂರು ಕ್ಷೇತ್ರದ ದೋಸೆಯ ಮಹಾಸಂಗ್ರಾಮದಲ್ಲಿ ನನ್ನ ಕಾವಲಿ ಮುಳುಗೆದ್ದಿದ್ದರೂ ಇನ್ನು ತುಕ್ಕು ಹಿಡಿದಿಲ್ಲ. ಆ ಕಾವಲಿಯ ಸಹಾಯದಿಂದ ಸೌತ್ ಬೆಂಗ್ಳೂರಿನ ಹೋಟೆಲ್ ಯೇನು, ಇಡೀ ಬ್ರಹ್ಮಾಂಡವನ್ನೇ ಅಲ್ಲೋಲ ಕಲ್ಲೋಲ ಮಾಡುವ ನನ್ನ ತೋಳಿನ ಶಕ್ತಿ, ಕುಗ್ಗಿಲ್ಲ. ನನ್ನ customerಗಳ ಹಸಿವು, ಇನ್ನು ತೀರಿಲ್ಲ.
ದೋಸೆ ಭಟ್ಟರು & ಕೃಷ್ಣ ಭಟ್ಟ: :ಭಲಾ! ಭಲಾ CTR ಭಲಾ!
CTR: ಅಪ್ಪಣೆ ಕೊಡಿ! ಅಪ್ಪಣೆ ಕೊಡಿ! ಭೂಮಂಡಲದಲ್ಲಿರುವ ಎಲ್ಲಾ ಹೋಟೆಲ್ಗಳ customersಗಳನ್ನು ಗೆದ್ದು ಅವರ positive feedbackಅನ್ನು ತಂದು ನಿಮ್ಮ ಪಾದಗಳಲ್ಲಿ ಕಾಣಿಕೆಯಾಗಿ ಅರ್ಪಿಸುತ್ತೇನೆ.
ದೋಸೆ ಭಟ್ಟರು & ಕೃಷ್ಣ ಭಟ್ಟ:ಹೋಗಿ ಬಾ CTR! ಕೀರ್ತಿಶಾಲಿಯಾಗಿ, ದಿಗ್ವಿಜಯಶಾಲಿಯಾಗಿ ಹಿಂತಿರುಗು!
***
ಸಾಧಿಸಿದ್ದು ಏನು? “ಚತುರ್ದಶಭುವನಗಳಲ್ಲೂ ಸ್ಪರ್ಧೆಗೆ ಇಳಿದು ಗೆಲ್ಲುವೆ” ಎಂಬ ನಂಬಿಕೆ! ಕೊನೆಗೆ ಗೆದ್ದಿದ್ದು ಶ್ರೀ ಸಾಗರ್ ಹೋಟೆಲ್! ಅದು ಎಷ್ಟಾದರು CTRನ ಹೊಸ ಹೆಸರಲ್ಲವೇ!
[ಬಭೃವಾಹನ ಚಿತ್ರದ ಅಶ್ವಮೇಧ ಯಾಗದ scene ನಿಂದ ಸ್ಫೂರ್ತಿ]

***

ಅಜ್ಜಿ ವಯಸ್ಸು. ಕರೆಸಿಕೊಳ್ಳೋದು ಅಮ್ಮ. ಹೆಸರಿಗೆ ಮುಂಚೆ ಕುಮಾರಿ.

***

ಕಡಲೇಹಿಟ್ಟು ಉಪಯೋಗಿಸದೇ ಮಾಡಿದರೂ ಮಂಗಳೂರು ಬಜ್ಜಿಯ ರುಚಿ ಅಮೋಘ ಏಕೆಂದರೆ ಮಂಗಳೂರಿನ ಕಡಲೇ ಹಿಟ್ಟು.

***

THANGAvelu – GOLD medal. What a coincidence!

***

ಅಮ್ಮ ಜೈಲ್ ಅಲೀತಾ ಇದ್ದ ಕಾಲ ಒಂದಿತ್ತು!
ಆಮೇಲ್ ಕೋರ್ಟಲೀತಾ ಇದ್ರು.
ನೀರ್ಗಲೀತಾ ಇರೋದು ಈಗ.

***

ಶೈವೈಟ್ಸ್: ಸಂಕೋಚ ಪಡುವ ಪರಂಗಿ ಜನ.

***

ಊಟ ಮಾಡಿ ಕೈ ತೊಳೆದು ರಾಘವಾಂಕ ಟಿ.ವಿ. ರಿಮೋಟ್ ತೊಗೋಬೇಕು, ಮೊಬೈಲ್ ರಿಂಗ್ ಆಗತ್ತೆ.
ರಾಘವಾಂಕನ ಫ್ರೆಂಡ್: ಹಾಯ್ ಮಗ, ಸಂಜೆಗೆ ಬುಕ್ ಮಾಡಿದೀನಿ. ನಮ್ಮನೇಗೆ ಬರ್ತ್ಯೋ ಇಲ್ಲ ನಿಮ್ಮನೇ ಇಂದ್ಲೇ ಹೋಗೋಣ್ವೋ?
ರಾಘವಾಂಕನ: ಇಲ್ಲೀಗೆ ಬಾ.
ರಾಘವಾಂಕನ ಫ್ರೆಂಡ್: ಲೋ, ನಿನ್ ಲೇಟೆಸ್ಟ್ hexa ಮೀಟರ್ ಹಾಕಿದ್ಯಲ್ಲ, ಅದೇ ಆರ್ ಲೈನಿಂದ್, ಅದ್ರೆಸ್ರು ಯೇನ್ ಕೊಟ್ಟಿದ್ಯಾ? ಷ…
ರಾಘವಾಂಕನ: ಲೇ, ಷಟ್ಪದಿ, ಕಣೋ…
ರಾಘವಾಂಕನ: ಅದೇ ಷಟ್ಪದಿ ಅಂತ್ಲೇ ಹೇಳಕ್ ಹೊರ್ಟ್ನಪ್ಪ, ಷ ಇಂದ ಶುರು ಅಂತ ಜ್ಞಾಪಕ ಇತ್ತು… ಹೂಂ ಆ ನಿನ್ ಪೊಸ್ಟ್, ಸಕ್ಕತ್ ಟ್ರೆಂಡ್ ಆಗ್ತಿದೆ ಮಗ…
ರಾಘವಾಂಕನ: ಸೂಪರ್!
ರಾಘವಾಂಕನ ಫ್ರೆಂಡ್: ಲೋ ರಾಘವ, ಈ ಫೇಸ್ಬುಕ್ಕು, ಟ್ವಿಟರ್ ಇಲ್ಲೆಲ್ಲೆ ನಿನ್ ಷಟ್ಪದಿಗಳನ್ನ ಹಾಕಿ ನಿನ್ ಟ್ಯಾಲೆಂಟ್ ಸುಮ್ನೆ ವೇಸ್ಟ್ ಮಾಡ್ಕೊತಿದ್ಯ ಕಣೋ.
ರಾಘವಾಂಕ: ಯೇನ್ ಮಾಡು ಅಂತ್ಯೋ?
ರಾಘವಾಂಕನ ಫ್ರೆಂಡ್: ನಿನ್ನೇ ಹರೀಶ್ಚಂದ್ರನ್ ಕಥೆ ಯೇನ್ ಬರ್ದಿದ್ಯಾ ಮಗಾ! ನಿನ್ದು forceful style ಇದೆ. ನಿನ್ ಷಟ್ಪದಿಗಳಲ್ಲಿ dramatic elements ಇದೆ, ನವರಸಗಳ fine and artistic portrayal ಮಾಡ್ತಿಯ. ಕನ್ನಡ vocabulary ಎಷ್ಟು ಘನವಾಗಿದೆ. ತೋರ್ಸಿದ್ಯೇನೋ ಹರೀಶ್ಚಂದ್ರನ್ ಕಥೆ ಗುರುಗಳಿಗೆ? ಯೇನ್ ಹೇಳಿದ್ರು?
ರಾಘವಾಂಕ: ಹೋಗಿದ್ನೋ. ಬೈದು ಕಳ್ಸದ್ರು. ಮಧ್ ಮಧ್ಯೆ blank verse ಥರಾ ಲುಕ್ಕು. ಅವ್ರದ್ದು ಒಳ್ಳೆ ರಗಳೆ ಆಯ್ತು.
ರಾಘವಾಂಕನ ಫ್ರೆಂಡ್: ಹೋಗ್ಲಿ ಬಿಡು. ಸಂಜೆ ಬರ್ತೀನಿ. ಅಣ್ಣಾವ್ರ’ ಸತ್ಯ ಹರೀಶ್ಚಂದ್ರ.’ ಓಕೇನಾ?

***

ಕಾವೇರಿ ನಮ್ದು + ಕಾವೇರಿ ಹರ್ದೋಯ್ತು = ನಮ್ದು ಹರ್ದೋಯ್ತು

***

Attention deficit in school.
Attendance deficit in college.

***

ಕಾವೇರಿ: ಗಾಳಿಯಲ್ಲಿ ಕಾಗೆಯ ಕೂಗು.

***

’ಕಿತ್ತೋಗಿರೋ’
ಈ ಪದ ಇತ್ತೀಚೆಗೆ ಬಳಕೆಯಲ್ಲಿರೋದು.
ನಾವು ಚಿಕ್ಕವರಿದ್ದಾಗ ಬಳಕೆಯಲ್ಲಿದ್ದಿದ್ದ್ರೆ, ಬರೀ ’ಕಿತ್ತೋಗಿರೋ’ ಚಪ್ಪಲಿ ಹಾಕ್ಕೊಂಡೇ ಮದ್ವೆ ಮನೆಗೂ ಹೋಗ್ತಿದ್ವಿ, ಆಟಾನೂ ಆಡ್ತಿದ್ವಿ.
[ಬರೀ ಚಪ್ಪಲಿ ಯೇನು, ಗುಂಡಿ ಕಿತ್ತೋಗಿರೋ ಶರ್ಟ್ ಹಾಕ್ಕೋಂಡ್ರೂ ಸುಪೀರಿಯಾರಿಟಿ ಫೀಲಿಂಗಲ್ಲೇ ಇರ್ತಿದ್ವಿ]

***

ಮಾರಿ ಹಬ್ಬ: ಕೆಲವರ ಮನೇಗೆ ಹೋದರೆ, ಬರೀ ಮಾರಿ ಬಿಸ್ಕತ್ತೆ ಕೊಡೋದು.

***

Why is the INSAT-3DR photo not in colour? ಹಳೇ Black & White ಕ್ಯಾಮೆರಾ ಫಿಕ್ಸ್ ಆಗಿಲ್ಲ ತಾನೆ?

***

Most probably, ಸಂಜಯ್ ಲೀಲಾ ಬಂಸಾಲಿಗೆ ಯಾರು ಹೇಳಿಲ್ವೇನೋ, ಊರ್ಗೊಬ್ಳೆ ಪದಾವತಿ ಇರೋದು ಇಲ್ಲಿ ಅಂತ.

***

ಅಂತೂ ಶುಕ್-ಶುಕ್ರವಾರದ ಬಂದ್ ಪರಂಪರೆ ಮುಂದ್ವರೀತಿದೆ ಅನ್ನೋದು ಮುಖ್ಯ.
ಹೋದ್ವಾರ ಹೇಳ್ಕೊಟ್ಟ Friday anthem “ಬಂದ್ ಶುಕ್ರವಾರ” ಹಾಡ್ ನೆನಪಿರಲಿ!

***

Mungaru Male – 2: Not a Shashank Redemption.

***

Anyone can become an engineer. I am planning to become one by attending Isha Inner Engineering.

***

The Integer song:
ವನ್ನಿನ ಹಿಂದೆ ಬಂದು ನೀನು ಸೊನ್ನೆಗೆ ಮುತ್ತಿಡುವಾಗ…

Guess the right word

August 18, 2016

guess-the-right-word