Archive for the 'Music and Dance' Category

SREE RAMA SEVA MANDALI SCHEDULE 2024

March 30, 2024

Click on the image to enlarge

RwB posts relating to Sri Rama Navami

FALI S NARIMAN & AMEEN SAYANI

February 22, 2024

RAMKI BELLUR: YOUTUBE CHANNEL

January 2, 2024

Have added all the parody Songs on my Youtube Channel: RAMKI BELLUR

ರಾಂಕಿ ಬೆಳ್ಳೂರ್ ರಚಿಸಿ ಹಾಡಿರುವ ಅಣುಕು ಗೀತೆಗಳು !

Spoofs and parodies have always fascinated me since many years. Tried my hand in creating a few over the years.

My latest is related to the present HITS & MISSES by Congress government in Karnataka headed by CM Siddaramaiah & DCM DK Shivakumar, starting with the 5 Guarantees. There is a dedication to our dear CM Siddu.

There are a few parodies lauding Modiji’s government and, have dedicated one to Amit Shah too.

Have made some parodies related to India’s unbeaten run to the 2023 World cup finals and after India’s comprehensive defeat in the FINALS to the Aussies.

There are over a dozen parodies for FOODIES!

Have covered a range of topics in the parodies like Naughty school kids, Sringeri Guru Parampare, Dogs during Diwali, 70-hr work week and Professionals not getting Autorickshaw back home late night, CTR Hotel Anthem, Cows on streets, Bangalore Lovers’ anthem, Increase in Cigarette smokers, foodies getting stones while eating, FB & social media craze, Kannada version of ‘If you come today’, ‘Sigivem Kshanadali’ to Terrorists, Bangalore Garbage & Traffic issues, Cauvery problem, and Indian politics…

Since last few years, have been composing and singing Dairy Day Ice Cream anthems and tributes regularly. My bosses and colleagues enjoy it.

You will find Parodies on :
• State of the Nation during 2012
• Bangalore traffic
• Kaveri Water Dispute between Karnataka & TN
• Bangalore Garbage
• Facebook fad
Congress Govt. headed by Siddu-DKShi [over a dozen parodies]
• Terror attacks
• 100% Kannada version of 100% English song
• Finding stones in food
• Cigarette smokers
• Cows in Bangalore city
• Dogs’ predicament during Deepavali
• Autos not available from office back home during late nights
• Naughty school kids
• Exhausting digital world; Bane of Deepfakes & digital apps
• Kid’s obsession with Mobiles, neglecting homework and studies
• Kannada names of James Bond Films
• Cows sitting near road medians in Bangalore

Cricket
• Cheering India for 2023 Cricket World Cup Finals
• After India comprehensively lost 2023 Cricket world cup

Foodies
• Dose
• Chaats
• Ice Cream
• Karnataka Food specialties

Anthems
• Bangalore City anthem
• BANDH anthem
• CTR Hotel anthem
• Dairy Day anthems/songs
• Tribute to Kannada Cinema
• Sringeri Guru Parampare Song based on Kalidasa’s works
• Dedication to CM Siddaramaiah
• Dedication to all foodies who love Karnataka cuisine
• Dedication to Chaats lovers
• Dedication to those for whom TREAT=DOSE
• Dedication to Sri AMIT SHAH
• Dedication to Sri Narendra Modiji

You can listen to the parody songs by visiting my Youtube Channel: RAMKI BELLUR !

ಮೋದಿ ನಮ್ಮವರು
ನಮ್ಮ ಮನೆಯವರು
Dedication to Sri Narendra Modiji
based on Naanu Nimmavanu [Purushottama]composed and penned by Hamsalekha
Original sung by Dr.Rajkumar

***

Tomorrow Never Dies ನಾಳೆಗೆ ಸಾವಿಲ್ಲ
James Bond Film names in Kannada based on ‘Bisile Irali’ [Bettada Hoovu] composed by Rajan-Nagendra, with lyrics penned by Chi. Udaya Shankar
Original sung by Master Puneeth [Lohit]

ಅಣುಕು ಗೀತೆ ತಮಾಷೆಗಾಗಿ. ಕಲೆ ಎಂದಿಗೂ ಆತ್ಮತೃಪ್ತಿಗಾಗಿ.

__________________________________________________________________________________________________

Visit: PARODY SONGS BY RAMKI BELLUR – post containing details of songs and audio versions

ಅಪರಂಜಿ ಚಾಲೀಸಾ

November 29, 2023

ಅಪರಂಜಿ ಚಾಲೀಸಾ
ರಚನೆ: ರಾಂಕಿ ಬೆಳ್ಳೂರ್ 

ಅಪರಂಜಿಯಿಂದ ನಗೆ ಸೂಸಿದೆ ರಾಶಿ ರಾಶಿ
ಹಾಸ್ಯದಿಂದಲೇ ಬದುಕಿಹುದು ಜೀವರಾಶಿ || 1 ||

ಕೊರವಂಜಿ ಕಾಡಿಗೆ ಸಾಗಿದಳು ಅವಳಿಗಾದಾಗ ಇಪ್ಪತ್ತೈದು
ಅಪರಂಜಿಗೆ ಈಗಿನ್ನು ತುಂಬಿತು ಮೂವತ್ತ್ಐದು ಪ್ಲಸ್ ಐದು || 2 ||

ಅಂದು ಕೊರವಂಜಿ ಆಧುನಿಕ ನಗೆಪ್ರಜ್ಞೆಯ ಹರಿಕಾರಿಣಿ
ಇಂದು ಅಪರಂಜಿಯ ಓದುಗರಲ್ಲಿರುವರು ರಾಜಕಾರಿಣಿ || 3 ||

ಅಂದು ಹಾಸ್ಯದ ಕಾರಂಜಿಯ ಬೆಲೆ ಎರಡಾಣೆ ಇಂದ ಮುಂದಾಯಿತು ನಾಲ್ಕಾಣೆ
ಇಂದು ಅಪರಂಜಿಯನ್ನು ಮೂವತ್ತು ಕೊಟ್ಟಾದರೂ ಓದುತ್ತಿಲ್ಲ ಏಕೆ?…ನಾಕಾಣೆ ! || 4 ||

ಸದಾಕಾಲ ನಗೆಗಡಲಲ್ಲಿ ಮುಳುಗಿರಲು ಇಷ್ಟ ಎಮಗೆ
ಕೊರವಂಜಿ ಅಪರಂಜಿ ಟ್ರಸ್ಟ್ ಮೇಲೆ ಅಪಾರ ಟ್ರಸ್ಟ್ ನಮಗೆ  || 5 ||

ಬಣ್ಣ ಬಣ್ಣದ ನಗೆಲೇಖನ ಹೊತ್ತು ತಂದ ಕೊರವಂಜಿಯ ಹುಟ್ಟುಹಬ್ಬ
ನಾಡೆಲ್ಲವು ಬಣ್ಣಗಳಿಂದ ಓಕುಳಿಯ ಆಡುವ ಕಾಮನಹಬ್ಬ || 6 ||

ಶ್ರಾವಣ ಮಾಸದಲ್ಲಿ ಜನಿಸಿದಳು ಅಪರಂಜಿ
ಇಂದಿಗೂ ಬೀರುತಿಹಳು ತಿಳಿನಗೆಯ ಕಾರಂಜಿ || 7 ||

ರಾಶಿ-ಕಸ್ತುರಿ-ಲಕ್ಷ್ಮಣ್-ಕೈಲಾಸಂ
ಒಬ್ಬೊಬ್ಬರೂ ಹಾಸ್ಯದಲ್ಲಿ ಜಸ್ಟ್ ಆಸಂ || 8 ||

ಕೊರವಾವಲೋಕನ ಸಮಾಜದ ಏರುಪೇರುಗಳುಳ್ಳ ಲೇವಡಿಯ ಕಾಲಂ
ಅಪರಂಜಿಯನ್ನು ಓದಲು ನೋಡಬೇಕೇ ರಾಹುಕಾಲಮ್  || 9 ||

ಅಂದಿಗೂ ಇಂದಿಗೂ ಹಾಸ್ಯದ ಹೂರಣದ ಅಂಕಣ
ನಗೆ ಬರಹಗಾರರು ಕಟ್ಟಿರುವರು ನಮ್ಮನ್ನು ರಂಜಿಸಲು ಕಂಕಣ  || 10 ||

ಅಪರಂಜಿಯನ್ನು ಮನೆ-ಮನಗಳೊಳಗೆ ಬರಮಾಡಿಕೊಂಡೆವು
ಮುಂದಿನ ಸಂಚಿಕೆ ಬರುವುದನ್ನೇ ಕಾದುನಿಂತೆವು || 11 ||  

ಕೊರವಂಜಿ ಅಪರಂಜಿಗೆ ಬರಹಗಳನ್ನು ಕೊಟ್ಟಿದ್ದಾರೆ ಹಲವರು
ಚುಟುಕ-ಅಣಕವಾಡು-ವ್ಯಂಗ್ಯ ಚಿತ್ರ ಕಳುಹಿಸಿದ್ದಾರೆ ಅನೇಕರು || 12 ||

ಸಂಪಾದಕರು-ಬರಹಗಾರರು-ಓದುಗರು ಅಪರಂಜಿಗೆ ಬೆಸ್ಟ್
ಮುದ್ರಕರು-ಟ್ರಸ್ಟಿಗಳು-ಆಡಳಿತ ವರ್ಗ ನಡೆಸುವರು ನಗೆ ಫೆಸ್ಟ್ || 13 ||

ಸಂಕ್ಷಿಪ್ತವಾಗಿ ಹೇಳುವೆ ಕೇಳಿ: ಹತ್ತು-ನೂರು-ಸಾವಿರ
ಬಿಡಿ-ವಾರ್ಷಿಕ-ದಶಕ – ಇದುವೇ ಚಂದದ ವಿವರ || 14 ||

ಕೊರವಂಜಿಯ ಹೊರತಂದರು ಶಿವರಾಮ
ಅಪರಂಜಿಗೆ ಬೆನ್ನೆಲುಬೇ ಶಿವ-ರಾಮ || 15 ||

ನಗೆ ಚಿಲುಮೆಯನ್ನು ನೋಡಲು ನಮಗೆಲ್ಲಿಲ್ಲದ ಉತ್ಸಾಹ
ಅಪರಂಜಿಯ ಕಿಡಿಗೆ ಪ್ರಕಾಶರ ಪ್ರೋತ್ಸಾಹ || 16 ||

ಕೊರವಂಜಿ ಅಪರಂಜಿಗೆ ಅಂದು ತಿಳಿಹಾಸ್ಯವ ಕೊಟ್ಟಿದ್ದು ಸುನಂದ
ತುಂತುರು ಹನಿಗವನಗಳ ಓದಲು ಬೇಕು ದಂ..ನ ಆ ನಂ ದ || 17 ||

ರಾಯಸಮ್ ಬರೆದ ‘ನಾ ಕಂಡ ಬೀಚಿ’ ಓದಿ ಆಗುವುದು ಉಲ್ಲಾಸ
ಪಾಯಸಮ್ ಕುಡಿದಷ್ಟು ನಮಗೆ ಕೊಡುವುದು ಹರ್ಷೋಲ್ಲಾಸ || 18 ||

ನೀನನ್ ರಘುಪತಿ ನಾಗನಾಥ್
ವ್ಯಂಗ್ಯಕ್ಕೆ ಇವರದೆಂದಿಗೂ ಸಿಕ್ಕಿದೆ ಸಾಥ್ || 19 ||

ಹಾಗೂ ಇನ್ನೂ ಸೇರುವರು ಅಪರಂಜಿಯ ಹೆಮ್ಮೆಗೆ
ವ್ಯಂಗ್ಯ ಬಿಡಿಸುವ ನಂಜು-ದತ್ತು-ಪೈ- ಹೆಮ್ಮಿಗೆ || 20 ||

ಬೇಲೂರು ಗುಂಡೂ ಡುಂಡಿ ತಿರುಮಲೇಶ ಐತಾಳ
ಪ್ರೀತಿಯಿಂದ ನಾವು ಹತ್ತಿಸಿಕೊಂಡಿದ್ದೇವೆ ನಗೆ ಎಂಬ ಬೇತಾಳ || 21 ||

ಅಪರಂಜಿಗೆ ಈಗ ನಲವತ್ತೊಂದರ ಸಂಪುಟ ಮೂರನೇ ಸಂಚಿಕೆ
ಇದನ್ನು ಕೊಂಡು ಓದುವವರು ಹೆಚ್ಚಲಿ, ಆಗಲಿ ಇನ್ನಷ್ಟು ಹಂಚಿಕೆ || 22 ||

ಅಪರಂಜಿ ಹೊರತರಲು ಬೇಕು ಅಕ್ಷರ ಜೋಡಣೆಯಲ್ಲಿ ಮುತುವರ್ಜಿ
ಅಪರಂಜಿ ದಿನವೂ ಓದದಿದ್ದರೆ ನಮಗೆ ಆಗುವುದು ಅಲರ್ಜಿ || 23 ||

ಪಾಸಿಟಿವ್ ಆಗಿರಲು ನಮಗೆ ಬೇಕೇಬೇಕು ಅಪರಂಜಿಯ ನಗೆ-ಟಿವ್ ಟಾನಿಕ್
ಜೋರಾಗಿ ನಕ್ಕಾಗ ಆಗುವ ಹರ್ಷೋದ್ಗಾರವೇ ಸೂಪರ್ ಸೋನಿಕ್ || 24 ||

ಅಪರಂಜಿಯ ಚಿಲುಮೆ ಹರಡಲಿ ಒಳನಾಡಿನಲ್ಲೂ
ಅವಳ ಒಲುಮೆ ಪಸರಿಸಲಿ ಹೊರನಾಡಿನಲ್ಲೂ || 25 ||

ಅಂದಿಗೆ ಇದ್ದದ್ದು ಕುಹಕಿಡಿಗಳು ಉರಿಗಾಳು
ನಮ್ಮ ನಿಮ್ಮಲ್ಲಿಹುದು ಇಂದು ಹಾಸ್ಯದ ಹುರಿಗಾಳು || 26 ||

ಕೊರವಂಜಿಯ ಯಶಸ್ಸಿಗೆ ಕೇಫ-ಆ ರಾ ಸೇ-ರಾಮಿ-ದಾಶರಥಿ
ಅವಳನ್ನು ಹುಮ್ಮಸ್ಸಿನಿಂದ ಓದುವರು ಅನೇಕ ಮಹಾರಥಿ || 27 ||

Punchಗೆ ಪಂಚ್ ಕೊಟ್ಟ ಪುಸ್ತಕ ಕೊರವಂಜಿ
Punಚ ಕಜ್ಜಾಯಗಳನ್ನೊಳಗೊಂಡಿದೆ ನಮ್ಮ ಅಪರಂಜಿ || 28 ||

ಸೇತುರಾಮನಿಂದ ಶಿವರುದ್ರನಿಗೆ ರಾಜರತ್ನದ ಹಾರಾ
ಸತ್ಯ ಜೋಶಿಯ ಅಣುಕು ರಾಮನ ಮಿತ್ರನೇ ಬೀರಣ್ಣ ಅಕ್ರೂರ || 29 ||

ಲೋಕ ಕಲ್ಯಾಣಕ್ಕಾಗಿ ನಮಗೆ ಕೊಟ್ಟರು ಹಾಸ್ಯೋತ್ಸವ
ಕ್ಷಣ ಕ್ಷಣವೂ ಸಂಭ್ರಮಿಸಬಹುದು ಈ ನಿತ್ಯೋತ್ಸವ || 30 ||

ಅಪರಂಜಿಗೆ ಜಯಶ್ರೀ ಪುಷ್ಪಲತೆಯ ಚಿತ್ರ ಅಭಯಂ
ನುಗ್ಗೇಹಳ್ಳಿಯಿಂದ ಸುಮಾ ವೀಣಾರ ನಿರ್ಮಲ ಆರತಿ ಮಂಗಳಂ || 31 ||

ಗಣನಾಥನ ಪದಕುಲುಮೆ
ಮಿರ್ಲೆ ವಾಣಿಯ ಪದ ಚಿಲುಮೆ || 32 ||

ಅಪರಂಜಿ ಗೋಪಾಲಕೃಷ್ಣ ನಾಥನಿಗೆ ಶೇಷಗಿರಿ
ಅಪರಂಜಿ ಓದುಗವರ್ಗದವರಿಗೆ ಹಾಸ್ಯದ ಸಿರಿ || 33 ||

ಅಸಂಖ್ಯಾತ ಕೊರವಂಜಿ ಅಪರಂಜಿಗಳಲ್ಲಿದೆ ವಿಡಂಬನೆಯ ವಿನೋದ
ತಿಳಿ ಹಾಸ್ಯಗಳಿಂದಲೇ ಪ್ರಖ್ಯಾತಿ ಗಳಿಸಿದೆ ಅಪರಂಜಿಯ ನಿನಾದ || 34 ||

ಅನಂತದುದ್ದಕ್ಕೂ ಅಡಗಿಹುದು ತಿಳಿನಗೆಯ ಲಾಫ್ಟರ್
ಅಪರಂಜಿಯ ಶಿವಕುಮಾರ್ ಧೀಮಂತ ಮಾಸ್ಟರ್ || 35 ||

ಹಾಸ್ಯವನ್ನೊಳಗೊಂಡಿರುವ ಅಪರಂಜಿಯೇ ಪವಿತ್ರ ಗ್ರಂಥ
ಕನ್ನಡಿಗರಿಗೆಂದಿಗೂ ಇದು ನಮ್ಮದೇ ಸ್ವಂತ || 36 ||

ಅಪರಂಜಿಯ ದಿನವೂ ಓದಿದರೆ ಆರೋಕ್ಯಸಾಮಿ
ನಗೆಗಡಲಲ್ಲಿ ಮಿಂದೆದ್ದರೆ ಪ್ರಶಾಂತ ಸಾಮಿ || 37 ||

ವಿದ್ಯೆ ಬೇಕು ಪದಬಂಧ ಬಿಡಿಸಲು, ಮುಳುಗಿದರದರಲ್ಲಿ ಅದುವೇ ಹಾಲ ಭಾವಿ
ನಕ್ಕು ನಲಿಯದೆ ನಗೆ-ಹಾಸ್ಯ ಇಲ್ಲದಿದ್ದರೆ ಜೀವನವೇ ಹಾಳ ಭಾವಿ || 38 ||

ದಿನವೂ ಪಠಿಸಿರಿ ಈ ಅಪರಂಜಿ ಚಾಲೀಸಾ
ಪಡೆಯಿರಿ ಕಾರಂಜಿಯಂತೆ ಹಾಸ್ಯದೊಡೆಯ ಗಣಪನ ಕೃಪೆ, ಸಾ! || 39 ||

ಇದನ್ನು ಪ್ರಕಟಣೆಗೆ ಒಪ್ಪಬೇಕು ಶಿವೂ ಮತ್ತು ಬೇಲೂರ್
ರಚಿಸಿದ್ದಕ್ಕೆ ಸಾರ್ಥಕ ಎಂದುಕೊಳ್ಳುವರು ಅಪರಂಜಿಯ ಓದುಗ ರಾಂಕಿ ಬೆಳ್ಳೂರ್  || 40 ||

ಶಿವಕುಮಾರ vs ಶಿವಕುಮಾರ

November 24, 2023

*ಶಿವಕುಮಾರ vs ಶಿವಕುಮಾರ*
ರಚನೆ: ರಾಮಕೃಷ್ಣ ಬೆಳ್ಳೂರು

ಆ ಶಿವಕುಮಾರನ ಹೆಸರು ಗಣಪತಿ
ಈ ಶಿವಕುಮಾರನಿಗೆ ಬೇಡ ಗಣತಿ

ಆ ಶಿವಕುಮಾರನ ತಾಯಿ ಪಾರ್ವತಿ
ಈ ಶಿವಕುಮಾರನ ಖಾತೆಗೆ ದಿನವೂ ಅದೆಷ್ಟೋ ಪಾವತಿ

ಆ ಶಿವಕುಮಾರನ ತಂದೆಯೇ ಸುರೇಶ
ಈ ಶಿವಕುಮಾರನ ತಮ್ಮನೇ ಸುರೇಶ

ಅವನಿಗೆ ಭೂಷಣ ನಾಗಾಭರಣ
ಇವನಿಗೆ ಭೂಷಣ ಐಶ್ವರ್ಯ-ಆಭರಣ

ಆ ಶಿವಕುಮಾರನ ಹಿಂದೆ ಅನೇಕ ಶಿವಗಣ
ಈ ಶಿವಕುಮಾರನ ಹಿಂದೆ ಅನೇಕ ಪ್ರಕರಣ

ಅವನು ಮಾಡುತ್ತಾನೆ ದುಷ್ಟರಿಗೆ ತಕ್ಕ ಶಾಸ್ತಿ
ಇವನು ಮಾಡಿದ್ದಾನೆ ಸಾಕಷ್ಟು ಆಸ್ತಿ

ಆ ಶಿವಕುಮಾರನಿಗೆ ಸಿದ್ಧಿ ಬುದ್ದಿ
ಈ ಶಿವಕುಮಾರನಿಗೆ ಸಿದ್ಧಿಸಿದೆ ರಾಜಕೀಯ ಬುದ್ಧಿ

ಅವನ ಹೊಟ್ಟೆಯ ಸುತ್ತ ಸರ್ಪ
ಇವನ ಹೊಟ್ಟೆಯಲ್ಲೇ ದರ್ಪ

ಅವನು ಏಕದಂತ
ಇವನು ಹಣವಂತ

ಅವನೂ DCM – Devadivandita Chamarakarna Mahaganapati
ಇವನೂ ಎಲ್ಲರಿಗೂ ತಿಳಿದಿರುವಂತೆ, DCM

ಅವನಿಗೆ ಮೋದಕವೆಂದರೆ ಇಷ್ಟ ಜಾಸ್ತಿ
ಇವನಿಗೆ ಹೆದರಿಕೆಯಂತೂ ನಾಸ್ತಿ

ಅವನಿಗೆ ಪ್ರೀತಿ ಹುಲ್ಲು ಗರಿಕೆ
ಇವನಿಗೆ ಪ್ರೀತಿ ಗಣಿಗಾರಿಕೆ

ಆ ಶಿವಕುಮಾರನಿಗೆ ಪ್ರೀತಿ ರಾಗ ನಾಟ
ಈ ಶಿವಕುಮಾರ ಮಾಡಬಹುದು ಪ್ರೀತಿಯಿಂದ ರಾಜಕೀಯದ ಪಾಠ

AI Goddess

October 30, 2023

AI’ RELATED POSTS ON RWB:

Ice Cream & AIs cream!

AI vs Human

ARTIFICIAL INTELLIGENCE

ದಶಮಿಯಿಂದ ಪ್ರತಿಪತ್ ಕಡೆಗೆ

October 24, 2023

ದಶಮಿಯಿಂದ ಪ್ರತಿಪತ್ ಕಡೆಗೆ
ರಚನೆ : ರಾಮಕೃಷ್ಣ ಬೆಳ್ಳೂರು

ದಾಶರಥಿಯಿಂದ ದಶಕಂಠನಿಗೆ ದಶಮಿಯಂದು ದೊರಕಿತು ಧರೆಯಿಂದ ದೇವಲೋಕಕೆ ದಾರಿ

ಮುಕ್ತನಾದನು ಮಹಿಷನು ಮಹಿಷಾಸುರ ಮರ್ಧಿನಿಯಿಂದ ಮಹಾನವಮಿಗೆ

ಚಂಡ-ಮುಂಡರನ್ನು ಚಂಡಾಡಿದಳು ಚಾಮುಂಡಿ ಚಂಡಿಕಾಷ್ಟಮಿಯಂದು

ಮಹಾಗೌರಿಯು ಮಾತೆಕಾಳರಾತ್ರಿಯಾಗಿ ಮಾಹಾಶಕ್ತಿಯಿಂದ ಮರ್ಧಿಸಿದಳು ಮಹಾಶುಂಭನಿಶುಂಭರನ್ನು ಮಹಾಸಪ್ತಮಿಯಂದು

ಶುಭಸ್ವರೂಪಿಯು ಷಷ್ಠಿದೇವಿಯು ಸೃಷ್ಟಿಮಾತೆಯು ಸಲಹಿದಳು ಸ್ಕಂದನನ್ನು

ಪಂಚಧಾರೆಗಳುಳ್ಳ  ಪಂಚಮಾತೆಯು ಪದ್ಮಾಸಿನಿಯಂತೆ ಪಂಚಮಿಯಂದು ಪಂಚಲಲಿತಾತ್ರಿಪುರಸುಂದರಿಯಂತಿಹಳು

ಚತುರ್ಥದುರ್ಗಾಮಂದಸ್ಮಿತಮುಖಿ
ಚಾರಚರೇಶ್ವರಿ ಚಂದನಲೇಪಿತೆಕೂಷ್ಮಾಂಡದೇವಿ
ಚತುರ್ದಶಭುವನಸೃಷ್ಟಿಗೆ ಚುಕ್ಕಿಯಿಟ್ಟಳು

ತನ್ಮಾತ್ರದಿಂದಸನ್ಮಾತ್ರದೆಡೆಗೆ  ತ್ರಿಗುಣಾತೀತಳಾದ ತ್ರಿಮೂರ್ತಿಗಳಿಂದಾಯುಧಪಡೆದ ತ್ರಿಮೂರ್ತಿನೀ ತಪೋನಿರತೆಚಂದ್ರಘಂಟಾದೇವಿ ತಾಯಿಯಂತಿರುವಳು

ದ್ವಿತೀಯದಂದು ದೇವಜಾತಾ ದುರ್ಗಿದೇವಿಯು ಧರಿಸಿಶ್ವೇತವರ್ಣವ ದೈವಿಕ ದೇವತೆಬ್ರಹ್ಮಚಾರಿಣಿ ದಿನನಿತ್ಯದ ದುಃಖದಾರಿದ್ರ್ಯವನ್ನು ದೂರವಾಗಿಸುವಳು

ಪ್ರತಿಪತ್ತಿನಿಂದಾರಂಭವಾಗಿ ಪ್ರಕೃತಿಮಾತೆಯೆನಿಸಿದ ಪ್ರತಿಪಾಪ ಪ್ರಣಾಶಿನಿ ಪರಮೇಶ್ವರಿಯ ಪೂರ್ಣಪಕ್ಷನವರಾತ್ರಿವ್ರತ  ಪ್ರಪನ್ನವಾಗುವುದು ಪರಮಪುರುಷ ಪರಮಾತ್ಮನಾದ ಪಟ್ಟಾಭಿರಾಮ ಪರಾಜಯಗೊಳಿಸಿದಶಕಂಠನ  ಪ್ರಖ್ಯಾತವಾದವಿಜಯದಶಮಿಯೊಂದಿಗೆ

ಅಂಬೆ

October 21, 2023

ಶೃಂಗೇರಿಯ ವೈಭವ, ಮೈಸೂರಿನ ವೈಭೋಗ

October 16, 2023

ಶೃಂಗೇರಿಯ ವೈಭವ
ಮೈಸೂರಿನ ವೈಭೋಗ

ರಚನೆ: ರಾಮಕೃಷ್ಣ ಬೆಳ್ಳೂರು

ಶೃಂಗೇರಿಯಲ್ಲಿ ಶಾರದಾಮಾತೆ
ಮೈಸೂರಿನಲ್ಲಿ ಚಾಮುಂಡಿ ಮಾತೆ

ಶೃಂಗ ಗಿರಿಯಲ್ಲಿ ನವರಾತ್ರಿಯಂದು ಮೊದಲಿಗೆ ಹಂಸವಾಹಿನಿ ಅಲಂಕಾರ
ಮಹಿಷನ ಊರಿನಲ್ಲಿ ದಸರೆಗೆ ಹಂಸಲೇಖರಿಂದ ಚಾಮುಂಡಿದೇವಿಗೆ ಪೂಜೆ ಪುನಸ್ಕಾರ

ಶಾರದೆಗೆ ಕ್ಷೇತ್ರಪಾಲ ಮಲಯಾಳಿ ಬ್ರಹ್ಮ ರಾಕ್ಷಸ
ಮೈಸೂರಿನ ದಸರೆಗೆ ಕನ್ನಡಿಗ ನಾದ ಬ್ರಹ್ಮೊಪಾಸಕ

ಶೃಂಗೇರಿಯಲ್ಲಿ ಶಾರದಾಂಬಾ,ರೀ
ಮೈಸೂರಿನಲ್ಲಿ ಆನೆ ಅಂಬಾರಿ

ಶರನ್ನವರಾತ್ರಿ ವೈಭವ ಶೃಂಗೇರಿಯಲ್ಲಿ
ದಸರೆ ವೈಭೋಗ ಮೈಸೂರಿನಲ್ಲಿ

ನವ ರಾತ್ರಿಗಳೂ ಎರಡೂ ಸ್ಥಳದಲ್ಲಿ
ನಾವು ಕಾಣಬಹುದು ವಿಶೇಷ ದರ್ಬಾರ್
ಎರಡೂ ಕ್ಷೇತ್ರಗಳಲ್ಲಿ ದೇವಿಯರದೇ ಕಾರೋಬಾರ್

ಮೈಸೂರಿಗೂ ಶೃಂಗೇರಿಗೂ ಅವಿನಾಭಾವ ಸಂಬಂಧ
ಮೈಸೂರು ರಾಜರಿಗೂ ಶೃಂಗೇರಿ ಗುರುಗಳಿಗೂ ಭಕ್ತಿಭಾವದ ಅಂತರಂಗ