




ಎಕ್ಸಾಮ್ ಫೀವರ್
ರಚನೆ: ರಾಮಕೃಷ್ಣ ಬೆಳ್ಳೂರು
ಮೈದಾನ-ಫುಡ್ ಸ್ಟ್ರೀಟ್-ಮಾಲ್-ಬಸ್ ನಿಲ್ದಾಣಗಳಲ್ಲಿ ಕಾಣಿಸುತ್ತಿದ್ದ ವಿದ್ಯಾರ್ಥಿಗಳು
ಇನ್ನು ಕೆಲವು ದಿವಸಗಳಿಗೆ ಗಂಭೀರವಾಗಿ ವಿದ್ಯಾಲಯಕ್ಕೆ ಹೋಗುವ ಪರೀಕ್ಷಾರ್ಥಿಗಳು
ಪರೀಕ್ಷೆ ಅಂದರೆ ಕೆಲವರಿಗೆ ಬರುವುದು ಫೀವರ್
ಇನ್ನು ಕೆಲವು ದಿವಸಗಳಿಗೆ ಇವರು ಓದು ಹತ್ತದ ಗೋಳಾಡುವ ಗ್ರೀವರ್
ಹುಟ್ಟುಹಬ್ಬದ ಆಚರಣೆಗೆ ರೋಡುಗಳೇ ಇವರಿಗೆ ಕನ್ವೆನ್ಷನ್ ಹಾಲ್
ಇನ್ನು ಕೆಲವು ದಿವಸಗಳಿಗೆ ಇವರ ದೇವಾಲಯವೇ ಎಕ್ಸಾಮಿನೇಷನ್ ಹಾಲ್
ಬರ್ತ್ ಡೇ ನೆಪದಲ್ಲಿ ತಿನ್ನುವ ಕೇಕ್ ತಲೆಗೆ ಹಚ್ಚಿಕೊಳ್ಳುತ್ತಾರೆ
ಇನ್ನು ಕೆಲವು ದಿವಸಗಳಿಗೆ ಪರೀಕ್ಷೆ ತಲೆಗೆ ಹಚ್ಚಿಕೊಳ್ಳುತ್ತಾರೆ
ವರ್ಷವೆಲ್ಲ ಸ್ನೇಹಿತರ ಕಾಲೆಳೆಯೋದು-ತಮಾಷೆ-ಕೀಟಲೆ
ಇನ್ನು ಕೆಲವು ದಿವಸಗಳಿಗೆ ಇವರಿಗೆ ಓದೋದೇ ಕೋಟಲೆ
ಮೊದಲಿಂದಲೇ ಓದಿದ್ದರೆ ಸಂಪೂರ್ಣ ಸಿಲಬಸ್
ಇನ್ನು ಕೆಲವು ದಿವಸಗಳಿಗೆ ಪರೀಕ್ಷೆ ಗ್ಯಾರಂಟಿ ಸುಲಭಸ್!