Archive for the 'Anuku Geethe' Category

ಆಚೆ ಮನೆಯ ಸುಬ್ಬಮ್ಮನಿಗೆ SPOOF

June 1, 2017

ನಾನು: ಏನ್ ಸುಬ್ಬಮ್ಮ್ನೋರೆ, ಸೋಮ್ವಾರ ಏಕಾದಶಿ. ಎಲ್ಲ ರೆಡೀನ?
ಸುಬ್ಬಮ್ಮನೋರು: ಏನ್ ಏಕಾದಶಿನೋ ಏನೊ…ನನ್ ಕಷ್ಟ ನನಗೆ.

ಅವರ ಕಷ್ಟಾನ ಇಲ್ಲಿ ಬರ್ದಿದ್ದೀನಿ…ದಯಮಾಡಿ ಓದಿ!

ಸುಬ್ಬಮ್ಮನ ಏಕಾದಶಿ ಇಂದು
ರಚನೆ: ರಾಮಕೃಷ್ಣ ಬೆಳ್ಳೂರು

ಆಚೆ ಮನೆಯ ಸುಬ್ಬಮ್ಮನಿಗೆ
ಏಕಾದಶಿ ಉಪವಾಸ
ಎಲ್ಲೊ ಸ್ವಲ್ಪ ತಿಂತಾರಷ್ಟೆ
ಚಾಟ್ಸು, ನೂಡಲ್ಸು, ಪಾಸ್ತ

ಮೂರೋ ನಾಲ್ಕೋ ಕಲ್ಲಂಗಡಿ ಹಣ್ಣು
ಸ್ವಲ್ಪ ಭೇಲ್ ಪಾಪ್ ಕಾರ್ನು
ಘಂಟೆಗೆ ಡಜ಼ನ್ನು ಸ್ಟ್ರಾಬೆರಿಹಣ್ಣು
ಆಗಾಗ ಒಂದೊಂದು ಬೇಬಿ ಕಾರ್ನು

ಮಧ್ಯಾನಕ್ಕೆಲ್ಲ ನುಚ್ಚಿನುಂಡೆ
ಕಾಂಗ್ರೆಸ್ ಹಾಕಿರೊ ಉಸಲಿ
ಎಲ್ಲೋ ಸ್ವಲ್ಪ ಬೆಣ್ಣೆ ದೋಸೆ ಟೇಸ್ಟಿಗೆ
ಬೆಣ್ಣೆ ಖಂಡಿತಾ ಅಸಲಿ

ರಾತ್ರಿಗೆ ಪಾಪ ಫುಡ್ ಸ್ಟ್ರೀಟೆ ಗತಿ
ಒಂದ್ ಲೋಟದ ತುಂಬಾ ಲಸ್ಸಿ
ಪಕ್ಕದಲ್ಲಿರೋ ಲಸ್ಸಿ ಬಾರಲಿ
ಸುಬ್ಬಮ್ಮ ತುಂಬ ಫಸ್ಸಿ

As a Fan guest on Majaa Bharatha (Colors Super) (Raj special: April 25, 2017)

April 26, 2017

As a Fan guest on Majaa Bharatha (Colors Super) (Raj special: April 25, 2017)

Below is the complete version of Raaja Panchakshara stotra and Raj Rangoli.

 

Anuku geete: Facebookkin moolenaage ittondu meme-na halli

April 17, 2017

Anuku song: Facebookkin moolenaage ittondu meme-na halli
Written by: Ramakrishna Bellur

[Original ಹಾಡು: ಮಲ್ನಾಡಿನ್ ಮೂಲೆನಾಗೆ ಇತ್ತೊಂದು ಸೋಮನಹಳ್ಳಿ
ಚಿತ್ರ: ಸುವರ್ಣ ಸೇತುವೆ (1982)
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ವಿಜಯಭಾಸ್ಕರ್
ಹಾಡಿದವರು: ವಾಣಿ ಜಯರಾಂ]

facebookkin moolenaage ittondu meme-na halli
aa hallil ella janaru whatsappe gottildoru
avarolage mudukiyoblu, meme maadkond meritidlu
avalantu bho naughty, thumba haughty

facebookkin moolenaage ittondu meme-na halli

aa muduki chandada memer saakiralu
aa memer memu FBli haaktiralu
adrindle whatsappalli memes moodthaithendu
nanindle humourru kaantaitendu
tannindle memu ella, taanilde whatsapp illa
andkonde FBli kobbidalu

la la la lala land la la la la
la la la lala land la la la la

aa facebookkin moolenaage ittondu meme-na halli

Whatsapp-norge thann mahatva thorisbekendu
kankalanaage laptop-annu bacchitkondu
katthalnaage memer jothe hejje ittkondu
FB-kaadu serkondlu hotth nodkondu
meme banthu yavathnange, pecchadlu muduki hange
nadedaithe memeloka yavathnange

la la la lala land la la la la
la la la lala land la la la la

aa facebookkin moolenaage ittondu meme-na halli

thanna memer maadidrene meme aagtaitendu
nambkonda muduki page down-aaitindu
saddilde jokes maador memes kodthare
nimge gottu yav yav mandi haasya maadthare
tilkondu FB neethi, tiddkondu whatsapp reethi
ellarigu hidsohaage jokes maadbeku

ಅದೇ ಕಲ್ಲು ಅದೇ ಕಲ್ಲು (Spoof song)

April 11, 2017

https://clyp.it/nhamijpr

ಅದೇ ಕಲ್ಲು ಅದೇ ಕಲ್ಲು (Spoof song)

ಮೂಲ ಗೀತೆ: ಅದೇ ಕಣ್ಣು ಅದೇ ಕಣ್ಣು
ರಚನೆ: ಚಿ.ಉದಯಶಂಕರ್
ಗಾಯಕರು: ಡಾ.ರಾಜಕುಮಾರ್
ಅಣಕು ಗೀತೆ ರಚನೆ ಮತ್ತು ಗಾಯನ: ರಾಮಕೃಷ್ಣ ಬೆಳ್ಳೂರು

IF YOU COME TODAY (Kannada version)

February 28, 2017

https://clyp.it/wc0l4cw4

IF YOU COME TODAY (Kannada version)

Original Lyrics: Chi Udayshankar
Original Singer: Dr.Rajkumar
Music: GK Venkatesh
Kannada lyrics Composed and sung by Ramakrishna Bellur Shivaram

Spoof song: ಫೇಸ್ಬುಕ್ ನೆನೆಯದಂಥ ನರಜನ್ಮವೇಕೆ

February 3, 2017

ಫೇಸ್ಬುಕ್ ನೆನೆಯದಂಥ ನರಜನ್ಮವೇಕೆ ರಚನೆ: ರಾಮಕೃಷ್ಣ ಬೆಳ್ಳೂರು

Click on the above link to listen to the Spoof song
(Original: Hariya Neneyadantha Narajanmaveke by Sri Purandaradasaru)

ಫೇಸ್ಬುಕ್ ನೆನೆಯದಂಥ ನರಜನ್ಮವೇಕೆ
ರಚನೆ: ರಾಮಕೃಷ್ಣ ಬೆಳ್ಳೂರು

ಫೇಸ್ಬುಕ್ ನೆನೆಯದಂಥ ನರಜನ್ಮವೇಕೆ
ಫೇಸ್ಬುಕ್ಕಲ್ ಲೈಕ್ ಮಾಡದ ಅಕೌಂಟು ಏಕೆ

ವಾಲ್ಪೋಸ್ಟು ಓದದ ವಿಪ್ರ ತಾನೇಕೆ
ಶೇರ್ ಮಾಡಲು ಅರಿಯದ ಕ್ಷತ್ರಿಯನೇಕೆ
ಸ್ಮೈಲಿಯನ್ ಹಾಕದ ಸನ್ಯಾಸಿ ತಾನೇಕೆ
ಆದರವಿಲ್ಲದ ಇನ್ವೈಟು ಏಕೆ

ಫೇಸ್ಬುಕ್ ನೆನೆಯದಂಥ ನರಜನ್ಮವೇಕೆ
ಫೇಸ್ಬುಕ್ಕಲ್ ಲೈಕ್ ಮಾಡದ ಅಕೌಂಟು ಏಕೆ

ಸತ್ಯ-ಶೌಚವಿಲ್ಲದ ವಾಲ್ಪೋಸ್ಟು ಏಕೆ
ನಿತ್ಯ ನೇಮವಿಲ್ಲದ ಕಮೆಂಟ್ ಮಾಡೋದೇಕೆ
ಭಕ್ತೀಲಿ ಮಾಡದ ರಿಕ್ವೆಸ್ಟು ಏಕೆ
ಉತ್ತಮರಿಲ್ಲದ ಗ್ರೂಪು ತಾನೇಕೆ

ಫೇಸ್ಬುಕ್ ನೆನೆಯದಂಥ ನರಜನ್ಮವೇಕೆ
ಫೇಸ್ಬುಕ್ಕಲ್ ಲೈಕ್ ಮಾಡದ ಅಕೌಂಟು ಏಕೆ

ಪೇರೆಂಟ್ಸ್ ಶೇರ್ ಮಾಡದ ಪೋಸ್ಟು ಏಕೆ
ಮಾತು ಕೇಳದ ಸೊಸೆಯ ಲೈಕ್ ಮಾಡೋದೇಕೆ
ನೀತಿ ನೇಮವಿಲ್ಲದ ಟ್ಯಾಗಿಂಗು ಏಕೆ
ಲೈಕ್ ಬಾರದಿದ್ದಕ್ಕೆ ಕೋಪವವೇಕೆ

ಅನ್ಲೈಕ್ ಮಾಡ್ ಹೋಗುವ ಮಕ್ಕಳೇಕೆ
ತಿಳಿದೂ ಕಮೆಂಟ್ ಮಾಡದ ಗುರುವೇಕೆ
ನಳಿನನಾಭಶ್ರೀ ರಾಮಕೃಷ್ಣ ಬೆಳ್ಳೂರನ್
ಫ್ರೆಂಡ್ ಮಾಡಿಕೊಳ್ಳದ ಅಕೌಂಟು ಏಕೆ

ಫೇಸ್ಬುಕ್ ನೆನೆಯದಂಥ ನರಜನ್ಮವೇಕೆ
ಫೇಸ್ಬುಕ್ಕಲ್ ಲೈಕ್ ಮಾಡದ ಅಕೌಂಟು ಏಕೆ

***
Facebook neneyadantha narajanmaveke
By Ramakrishna Bellur

Facebook neneyadantha narajanmaveke
Facebookkall ‘like’ maadada accountu yeke

wall-post odhadha vipra thaneke
share maadalu ariyada kshatriyaneke
smileyann hakada sanyasi thaneke
aadaravillada invite-u eke

Facebook neneyadantha narajanmaveke
Facebookkall ‘like’ maadada accountu yeke

satya-shouchavillada wallpostu yeke
nitya-nemavillada comment maadodeke
bhaktili maadada request-u yeke
utthamarillada groupu thaneke

Facebook neneyadantha narajanmaveke
Facebookkall ‘like’ maadada accountu yeke

parents share maadada postu yeke
maathu kelada soseya ‘like’ maadodeke
nithi-nemavillada tagging yeke
‘like’ baradiddakke kopavaveke

‘unlike’ maad hoguva makkaleke
thilidu commentu maadada guruveke
nalinanabhasri ramakrishna bellurannu
friend maadikollada accountu yeke

Facebook neneyadantha narajanmaveke
Facebookkall ‘like’ maadada accountu yeke

“ಸಿಗಿವೆಂ ಕ್ಷಣದಲಿ” : ಭಾರತೀಯನ ಆವೃತ್ತಿ

October 3, 2016

ಉಗ್ರಗಾಮಿಗಳಿಗೆ ಭಾರತೀಯನು “ಸಿಗಿವೆಂ ಕ್ಷಣದಲಿ” ಹಾಡಿದರೆ!
“ಸಿಗಿವೆಂ ಕ್ಷಣದಲಿ” : ಭಾರತೀಯನ ಆವೃತ್ತಿ
ರಚನೆ ಮತ್ತು ಗಾಯನ: ರಾಮಕೃಷ್ಣ ಬೆಳ್ಳೂರು
https://clyp.it/a5mnur0i

rwb-sigivem-spoof

Raaja Panchakshara Stotra

September 29, 2016

rwb-rajapanchaksharastotra-290916

ಇಂದು ಶುಕ್ರವಾರ ಶುಭವ ತರುವವರ spoof song (relating to Bandhs)

September 9, 2016

ಎದುರುಮನೆ ಅಜ್ಜಿ ಶುಕ್ರವಾರದ ಹಾಡು ಹಾಡ್ತಿದ್ರು:

ಬಂದ್ ಶುಕ್ರವಾರ! ಬಂದ್ ತರುವವಾರ
ರಾಜ್ಯದೆಲ್ಲೆಡೆ ಬೀಗ ಹಾಕಿ ಯಶಸ್ವಿಯಿಂದ ಬಂದ್ ಮಾಡುವವಾರ

ಮುಂಜಾನೆಯ ಮಡಿಉಟ್ಟು ಪೋಸ್ಟರ್ ಎಲ್ಲರಿಗೂ ಕೊಟ್ಟು
ನಮ್ಮ ಧ್ವಜವನ್ನು ಹಿಡಿದಿಟ್ಟು ರಜೆಯನ್ನು ನೀಡುವ ವಾರ

ಬ್ಯಾನರ್ ಸ್ಲೋಗನ್ ಊರೆಲ್ಲ ಹಾಕಿ ವಾಹನ ನಿಲ್ಲಿಸಿ ಗಲಾಟೆ ಮಾಡಿ
ಚಪ್ಪಲಿ ಆರತಿ ವೈರಿಗೆ ಮಾಡಿ ವೈಕುಂಠ ಸಮಾರಾಧನೆ ಮಾಡುವ ವಾರ

ಪಡ್ಡೆ ಹುಡುಗರಿಗೆ ಕಿಚ್ಚನು ಹಚ್ಚಿ ಸಂಭ್ರಮದಿಂದ ಬಾವುಟ ನೀಡಿ
ನಮ್ಮ ರಾಜ್ಯದ ಕೀರ್ತಿಯ ಹಾಡಿ ಸಕಲ ರಾಜ್ಯವ ಮುಚ್ಚುವ ವಾರ

(ರಚನೆ: ರಾಮಕೃಷ್ಣ ಬೆಳ್ಳೂರು)

Chutuka Chakravarthi H Dundiraj

February 10, 2016

rwb-dundiraj

Cartoon: RK

Also visit the Cartoon page on RwB.