Archive for the 'Nostalgia' Category

June 22, 2020

ಮಹಾಮಾತೆಗೆ ನಮನ
ರಚನೆ: ರಾಮಕೃಷ್ಣ ಬೆಳ್ಳೂರು

ಮಹಾಜನರ ಸಹವಾಸದಿಂದ
ಮಹಾಕಾರ್ಯಗಳನ್ನು ಮಾಡಿ
ಮಹಾಕಾವ್ಯವಾಯಿತು ನಿನ್ನ ಜೀವನ

ಮಹಾತ್ಮರಾದ ಗುರುರಾಯರ ದರ್ಶನ ಪಡೆದು
ಮಹಾನುಭಾವರ ಸತ್ಸಂಗದಿ ಇದ್ದು
ಮಹಾಪೂರವೆಂಬ ಜನರ ನಡುವೆ ಗೆದ್ದು
ಮಹಾಪ್ರಳಯ ದೇಹಸ್ಥಿಥಿಗೆ ಬಂದರೂ ಮಹಾಪ್ರಾಣಗಳನ್ನು ಕಾಪಾಡಿದೆ ನೀನು

ಮಹಾಕಂಟಕಗಳನ್ನು ಬದುಕು ಒಡ್ಡಿದರೂ
ಮಹಾಪಥದಲ್ಲಿ ನಡೆದು
ಮಹಾದೇವ ಕರುಣಿಸಿದ
ಮಹಾಪ್ರಸಾದವನ್ನು
ಮಹಾಕುಂಭದಲ್ಲಿರಿಸಿ
ಮಹಾಜ್ಞಾನ ಪಡೆದೆ ನೀನು

ಮಹಾಮೇಧಾವಿಗಳಲ್ಲಿ
ಮಹಾಭಾಷ್ಯಗಳನ್ನು ಕಲಿತು
ಮಹಾತತ್ವವನ್ನರಿತು
ಮಹಾದಾನಗಳನ್ನು ಮಾಡಿ
ಮಹಾತೇಜಸ್ಸಿನ ವರ ಹೊಂದಿದೆ ನೀನು

ಮಹಾರಾಜನಾದ ದೊರೆಯ ಕೈ ಹಿಡಿದು
ಮಹಾರಾಣಿಯಾಗಿ ದೊರೆಸಾನಿಯಾಗಿ
ಮಹಾಭಾರತದ ಪ್ರಜೆಯಾಗಿ
ಮಹಾಮತಿಯಿಂದ
ಮಹಾಶಯರಿಂದ ಕಲಿತ
ಮಹಾಮಂತ್ರಗಳ ಬಲದಿಂದ
ಮಹಾಕುಟುಂಬದಂತಹ
ಮಹಾಸಾಗರವಾದ ಸಂಸಾರಸಾಗರದಿ
ಮಹಾ ಉತ್ಸವಗಳನ್ನಾಚರಿಸಿ
ಮಹಾಮಾರಿ ದೇಹಕ್ಕೆ ಬಂದರೂ
ಮಹಾಯುದ್ಧ ನಡೆಸಿ ಜಯಿಸಿ
ಮಹಾಪಾಶವಾದ ಮೋಹಪಾಶಕ್ಕೆ ಸಿಲುಕದೆ
ಮಹಾಲಯದ ಮಹಾನವಮಿಯವರೆಗೂ ಕಾಯದೆ
ಮಹಾಪ್ರಸ್ತಾನಕ್ಕೆ ಜ್ಯೇಷ್ಠ ಶುದ್ದ ನವಮಿಯಂದು ಹೊರೆಟ
ಮಹಾಮಾತೆ ಮಹಾಲಕ್ಷ್ಮೀ!
ಇಗೋ ನಿನಗೆ ಅಕ್ಷರ ನಮನ!

ದೊರೆ

May 20, 2020

ದೊರೆ
ರಚನೆ: ರಾಮಕೃಷ್ಣ ಬೆಳ್ಳೂರು

ದೊರೆಯಿಂದ
ದೊರೆಯ
ದೊರೆತನ
ದೊರೆಯಿತು ಎಮಗೆ

ದೊರೆಗೆ
ದೊರೆಸಾನಿಯಾಗಿ
ದೊರೆತ
ಮಹಾಶಕುತಿಯೇ
ಮಹಾಲಕುಮಿ

ದೊರೆಗೆ
ದೊರೆತ
ದೊರೆತನವ
ನಿಭಾಯಿಸಿ
ಆಳಾಗಬಲ್ಲವನೆ
ದೊರೆಯಾಗುವನೆಂದು
ತೋರಿಸಿದ
ದೊರೆಯು ಇಂದು
ದೊರೆತರೆ ಕೇಳುವೆ…

…ದೊರೆಯುವುದೇ
ದೊರೆಯ
ದೊರೆತನ
ಮತ್ತೊಮ್ಮೆ ಎಮಗೆ

ದೊರೆ
ನಮಗಿತ್ತ
ದೊರೆತನವಷ್ಟೇ
ದೊರೆಯಿತಂದಿನವರೆಗೂ
ಮೂವತ್ತೊಂದು ಸಂವತ್ಸರಗಳ
ಹಿಂದಿನವರೆಗೂ

ದೊರೆಗೆ
ದೊರೆತನಕ್ಕೆ
ನಮ್ಮ ನಮನ

ದೊರೆ: ಏಪ್ರಿಲ್ ೯, ೧೯೩೨ – ಮೇ ೨೧, ೧೯೮೯

DR.RAJKUMAR SONG QUIZ

April 18, 2020

Click to enlarge

WFH IN RAMAYANA!

April 4, 2020

Happy Sri Rama Navami! Jai Sri Ram!

April 2, 2020

ರೈಲ್ ಬಿಡೋ ಜೋಕ್ಸು

February 7, 2020

ರೈಲ್ ಬಿಡೋ ಜೋಕ್ಸು
ಇಂಜಿನ್ ಡ್ರೈವರ್: ರಾಮಕೃಷ್ಣ ಬೆಳ್ಳೂರು

Railways favourite festival?
Bogey habba.

***

ರೈಲಲ್ಲಿ, ತುಂಬಾ passengers berth ಬೇಕು ಅಂತ ಸಾಯ್ತಾರೆ.

***
Track ಸರಿಯಾಗಿದ್ರೇನೆ ರೈಲು ಬಿಡಕ್ಕೆ ಆಗೋದು.

***

ಕೆಲವರಿಗೆ ಮಲಗಿದ್ರೆ ನಿದ್ರೆ ಬರಲ್ಲ. ಕೂತ್ಕೊಂಡೇ ನಿದ್ರೆ ಮಾಡ್ತಾರೆ. ಅಂತಹವರಿಗೆ RAC ಒಂದು boon.

***

ರೈಲಲ್ಲಿ tea ಮಾರುವವನಿಗೆ ಹೆಣ್ಣು ಮಗು ಹುಟ್ಟಿತು. ಹೆಸರು? ಛಾಯಾ.

***

ಕೆಲವರು ಥಟ್ ಅಂತ track ಹಾಕ್ಕೊಂಡು ರೈಲ್ ಬಿಡ್ತಾರೆ. ಇದಕ್ಕೆ ಅವರೇನು ಸ್ಪೆಷಲ್ಲಾಗ್ train ಆಗಿರಲ್ಲ.
ಇದರಲ್ಲಿ ಅಗ್ರಗಣ್ಯರು ನಮ್ಮ ಲಂಬೋದರ್!

***

ಮಲಯಾಳಿಗಳು Clock Roomನ್ನು Cloak room ಅಂತಾನೆ ಓದೋದು!

#KLRahul #Hiranyakashyapu

February 3, 2020

#KLRahul #Hiranyakashyapu #Annavru #SameSame
ಒಬ್ಬರಹಾಗೆ ಮತ್ತೊಬ್ಬರು ನಿಲ್ಲೋ ವೈಶಿಷ್ಟ್ಯ, ಇವತ್ತು ನೋಡಿದ ಹಾಗಾಯಿತು !

 

Difference between Bus and Metro!

November 16, 2019

BHOJA RAJA AND ARGENTINA FC JERSEY!

October 28, 2019

T Prabhakar Sir, Former Principal (Kendriya Vidyalaya Malleswaram) No More

October 3, 2019

[Click on the image to enlarge]

How can I forget the attire of our Principal T Prabhakar? Never did I see him wear anything other than Suit and Boot!
During the assembly in the morning, he spoke almost everyday, with topics ranging from current affairs to good manners that a student must follow.
He had a very good sense of humour! We will miss this gentle mannered Principal.

Sadgatipraaptirastu!

Received this via email:
Sir,
I am a close relative of T. Prabhakar(my uncle). Unfortunately, he passed away yesterday (Sept.30) night after a brief illness, he was very active all his life till the end. I wanted to share this with you as I saw your blog today and shared with his family, so we all appreciate his greatness and contributions.
Regards,
Sekhar

 

***

 

Below is Sri T Prabhakar Sir’s message in the Kendriya Vidyalaya Souvenir released on the occasion of the 50th year of KV Malleswaram – The Alumni association of KV malleswaram released Swarn Mahotsav Patrika in the Golden Jubilee year.

[Click on the image to enlarge]

Times Tribute in TOI (09.10.19 Bangalore edition)