Archive for the 'Musings' Category

SENGOL used by our dear APPU

May 25, 2023

ಡಾ.ರಾಜ್ ನಟಿಸಿರುವ ‘ಪರಶುರಾಮ್’ ಚಿತ್ರದಲ್ಲಿ ‘ಕಾಂತಾರ’ ಪೋಸ್ಟರ್ !?

November 3, 2022

Mahanati with Mahacritic

May 3, 2022

Was hearing to ‘Sada Nannu’ from Mahanati… lovely composition. Have heard this several times…but today I thought of @BaradwajRangan when i heard Ranga Ranga…and it translated to this!

ಅದು ಇದು – 2

February 24, 2020

In English, we say HBD.
In Kannada, we say ಹುಹಹಾಶು
In English we say HVD
In Kannada, it will be ವ್ಯಾದಿಶು

The word ವ್ಯಾದಿಶು is in this sloka of Vishnu Sahasranama:
Aarthaa Vishannah Shithilaascha Bheethah
Goreshu Cha Vyadhishu Varthamaanah
Sankeerthya Narayana Shabdha Maathram
Vimuktha Dukhaah Sukhino Bhavanthu

One should constantly practice Sri Narayana Japa. Whether one is tormented by dire distress or poignant grief, shattered by confusion due to fear or tormented by diseases, if people recite the name of Narayana, they not only get rid of their troubles but also attain everlasting happiness.

#HVD #ವ್ಯಾದಿಶು #14Feb

***

Image may contain: 2 people, possible text that says 'ಚಿನ್ನ ನಿನ್ನ ಮುದ್ದಾಡುವೆ JOJO RABBIT ನಾ ಹಾಡುವೆ 20'

***

ಮನೆ ಬಾಗಿಲಿನಿಂದ sumpವರೆಗಿನ ದಾರಿ?
ಸಂಪಿಗೆ ರಸ್ತೆ.

***

Slogan: ಟ್ರಂಪೆಟ್ ಉದೋದು, ಟ್ರಮ್ಪ ಮಾಡೋದು.
Sloka: ಟ್ರಮ್ಪಕಂ ಯಜಾಮಹೇ ಸುಗಂಧಿಂ
Rocky: ಐ ಯಾಮ್ ಟ್ರಮ್ಪ್ಡ್ ಚಿನ್ನ !

 

***

 

DJT is in BJP

***

ಬಫೆಸ್ ಎಳ್ದಷ್ಟು ನನ್ನನ್ನು ಬಿಫೆಸ್ ಎಳ್ಯಲ್ಲ.

#BIFFES #foodie4ever

***

***

#BIFFES #BIFFES2020 #biffesblr

***

ಇವರು ಎರಡು ಕಡೆಯಿಂದಲೂ ಸಂಬಂಧ:
ನಿಮ್ ಫಾದರ್ ಆಫ್ ದ ನೇಷನ್
ಅಂದ್ರೆ ನಮ್ ಗಾಂಧಿ ತಾತ!

***

Image result for carona shoes

Imagine the sales of this brand if it had existed today!

***

facebook ‘f’ is SHIVAMAYAM!

February 21, 2020

facebook ‘f’ is full of Shiva!

Dwadasha Jyotirlinga using Mathematical Symbols

February 20, 2020

Dwadasha Jyotirlinga using Mathematical Symbols

 

***

ಕನ್ನಡದ ಅಕ್ಷರಗಳಲ್ಲಿ ದ್ವಾದಶ ಜ್ಯೋತಿರ್ಲಿಂಗ
ಕಲೆ+ತಲೆ: ಬೆಳ್ಳೂರು ರಾಮಕೃಷ್ಣ

16996426_860007537474578_6037674401948233471_n

ಶಿವನಿಲ್ಲದ ಸ್ಥಳವುಂಟೆ?

ಪಿತೃ ಪಕ್ಷ ಮತ್ತು ವ್ಯಾಲೆಂಟೈನ್ಸ್ ಡೇ – ಭಾಗ 1

February 9, 2020

DON’T MISS:  ಪಿತೃ ಪಕ್ಷ ಮತ್ತು ವ್ಯಾಲೆಂಟೈನ್ಸ್ ಡೇ – ಭಾಗ 2

ಪಿತೃ ಪಕ್ಷ ಮತ್ತು ವ್ಯಾಲೆಂಟೈನ್ಸ್ ಡೇ
ಕರ್ತೃ : ರಾಮಕೃಷ್ಣ ಬೆಳ್ಳೂರು

೧) ಒಂದೆಡೆ ವಿ-ಡೇ. ಇನ್ನೊಂದೆಡೆ ವಡೆ.
೨) ಎರಡರಲ್ಲೂ ಪಕ್ಷಿಗಳಿಗೆ ಮಹತ್ವ. ಕಾಗೆ. ಡವ್.
೩) ವಾರವೆಲ್ಲ ಆಚರಿಸಿ ೧೪ಕ್ಕೆ ಅದು ಮುಗಿದ್ರೆ, ೧೪ ದಿವಸದಲ್ಲಿ ಯಾವತ್ತಾದ್ರೂ ಇದನ್ನ ಮಾಡಬಹುದು.
೪) ಭಕ್ಷ್ಯಗಳನ್ನ ಕರಿದು (ವಡೆ, ಸಜ್ಜಪ್ಪ) ಪಿತೃಗಳಿಗೆ ಕೊಡ್ತೀವಿ. ವ್ಯಾಲೆಂಟೈನ್-ನ ಕರೆದು ಭಕ್ಷ್ಯಗಳನ್ನು (ಐಸ್ ಕ್ರೀಮ್, ಚಾಕಲೇಟ್ ಇತ್ಯಾದಿ) ಕೊಡ್ತೀವಿ.
೫) ಅಲ್ಲಿ FUNERAL ಆಗಿರ್ಬೇಕು. ಇಲ್ಲಿ FUN REAL ಆಗಿರ್ಬೇಕು.
೬) ಅಲ್ಲಿ ಹುಡ್ಗ ಹುಡುಗಿ ಒಬರಿಗೊಬ್ರು ಕಾಳು ಹಾಕ್ಕೋತಾರೆ. ಇಲ್ಲಿ ಬರೀ ಅಕ್ಕಿ ಕಾಳೆ.
೭) ಅಲ್ಲಿ stuffed item ಅಂದ್ರೆ ಸಜ್ಜಪ್ಪ ಇತ್ಯಾದಿ. ಇಲ್ಲಿ stuffed item ಅಂದ್ರೆ soft toys ಇತ್ಯಾದಿ.
೮) ಅಲ್ಲಿ ಬೇರು. ಇಲ್ಲಿ ಟೆಡ್ಡಿ ಬೇರು.
೯) ಅದು ಆದಿ ಕಾಲದಿಂದಲೂ ನಡೆದುಕೊಂಡು ಬರ್ತಿರೋ ಕರ್ಮ. ಇದು ಈ ನಡುವೆ ಶುರು ಆಗಿರೋ ಕರ್ಮ.
೧೦) ಪಿತೃ ಪಕ್ಷ ಆಗಲಿ, ವ್ಯಾಲೆಂಟೈನ್ಸ್ ಡೇ ಆಗಲಿ, ಕಾಗೆ ಹಾರಿಸಬಾರ್ದು.
೧೧) ಅಲ್ಲಿ ರವೇ undae. ಇಲ್ಲಿ any sundae
೧೨) ಪಿತೃಗಳಿಗೆ ಅರ್ಘ್ಯ. ವ್ಯಾಲೆಂಟೈನ್ ಸಿಕ್ರೆ, ಅನರ್ಘ್ಯ!
೧೩) ಅಲ್ಲಿ ಪವಿತ್ರ (ದರ್ಬೆ) ಇರ್ಬೇಕು, ಇಲ್ಲಿ ಪವಿತ್ರವಾಗಿರ್ಬೇಕು.
೧೪) ಅಲ್ಲಿ ತಿಲದಾನ ಉತ್ತಮ. ಇಲ್ಲಿ ಸಮಾಧಾನ ಉತ್ತಮ.

ಸಂತ ವಾಲೆಂಟೈನ್ ಮತ್ತು ಪಿತೃಗಳ ಆಶೀರ್ವಾದ ಎಲ್ಲರಿಗೂ ಲಭಿಸಲಿ!

ವೈದಿಕ ಸಭೆಯಲ್ಲಿ ಹಾಸ್ಯ!

January 9, 2020

(Click on the image to enlarge)

ವೈದಿಕ ಸಭೆಯಲ್ಲಿ ಹಾಸ್ಯ!
ಕರ್ತೃ: ರಾಮಕೃಷ್ಣ ಬೆಳ್ಳೂರು

ವೈದಿಕ ಕ್ರಿಯೆ ಮಾಡಿಸುವ ಶಾಸ್ತ್ರಿಗಳ ಜೊತೆ ಜಗಳ ಆಡಬೇಡಿ. ತಿಥಿ ಮಾಡ್ಬಿಡ್ತಾರೆ!

ಸಾಮಾನ್ಯವಾಗಿ ಯಾರನ್ನಾದ್ರು ಎಷ್ಟು ಪಕ್ಷಗಳಿವೆ ಅಂತ ಕೇಳಿದ್ರೆ “ಎರಡು” ಅಂತೀವಿ: ಶುಕ್ಲ ಪಕ್ಷ, ಕೃಷ್ಣ ಪಕ್ಷ. ಅದೇ ವೈದಿಕ ಮಾಡಿಸುವವರಿಗೆ ಕೇಳಿದ್ರೆ “ಒಂದೇ” ಅಂತಾರೆ – ಪಿತೃ ಪಕ್ಷ!

ವೈದಿಕ ಮಾಡಿಸುವವರಿಗೆ ಯಾವ ಕಂತೆ ಪುರಾಣವೂ ಬೇಡ. ಗರುಡ ಪುರಾಣ ಒಂದೇ ಸಾಕು.

ಹನಿ ಹನಿ ಗೂಡಿದರೆ ಹಳ್ಳ.
ಅಗಳು ಅಗಳು ಸೇರಿದರೆ ಪಿಂಡ.

Generally, ಮನೆ ಮೇಲೆ ಅನ್ನ ಇಡೋರು ಕಾಗೆ ಹಾರ್ಸಲ್ಲ.

ಮನರಂಜನೆಗೆ ಮೊದ್ಲೆಲ್ಲ ಇದ್ದದ್ದೇ ಆಕಾಶವಾಣಿ, ದೂರದರ್ಶನ – ಎರಡೇ ವಾಹಿನಿ. ಈಗ ಸಾವಿರಾರು ವಾಹಿನಿ! ಆದರೆ ವೈದಿಕ ಮಾಡಿಸೋರಿಗೆ ಬೇಕಾಗಿರೋದು ಒಂದೇ : ಪಶ್ಚಿಮ ವಾಹಿನಿ.

ವೈದಿಕ ಸಭೆಯಲ್ಲಿರುವವರಿಗೆ ಅಚ್ಚುಮೆಚ್ಚಾದ ಕ್ರಿಕೆಟ್ ಸೀರೀಸ್? Ashes!

ನಾವು ಬರೀ ಹಾಡು ಕೇಳ್ತೀವಿ: ಇಲ್ಲೇ ವೈಕುಂಠ ಕಾಣಿರೋ! ಎಂದು.
ಆದ್ರೆ ವೈದಿಕ ಸಭೆಯಲ್ಲಿರುವವರು ದಿನವೂ ಅಲ್ಲಿಯೇ ವೈಕುಂಠ ಕಾಣ್ತಾರೆ!

ಟಿ.ಟಿ.ಡಿ. ಕಡೆ ತಿರ್ಗಿದ್ರೆ: ವೈಕುಂಠ ಏಕಾದಶಿ
ವೈದಿಕ ಸಭೆಗೆ ಹೋದ್ರೆ: ವೈಕುಂಠ ಸಮಾರಾಧನೆ

ನಮಗೂ ಪಿತೃಗಳಿಗೂ ಏನು ವ್ಯತ್ಯಾಸ?
ನಮಗೆ ಎಳ್ನೀರು. ಪಿತೃಗಳಿಗೆ ಎಳ್ಳು ನೀರು.

ರೈಲಲ್ಲಿ ಹೋಗ್ಬೇಕಾದ್ರೆ ವೈದಿಕದವರು prefer ಮಾಡೋದು ಅಪರ್ berth.

ನಮ್ ನಮ್ ಮನೆಯಲ್ಲಿ ವೈದಿಕ ಮಾಡೋದೇ ರಾಮಾಯಣ ಆಗಿಬಿಟ್ಟಿದೆ.
ಏಕೆಂದರೆ ನಮಗೆ ಅದು ಕರ್ಮ ಕಾಂಡ!

ವೈದಿಕದವರು ಆ ಹೀರೋಯಿನ್ ಹೆಸರನ್ನು ಓದೋದೇ ಶ್ರಾದ್ಧಾ ಕಪೂರ್ ಎಂದು!

ಹಿಂದೀಯಲ್ಲಿ ಗಯಾ ಅಂದರೆ ಹೋದ ಅಂತ.
ಹೋದೋರಿಗೆ ತಾನೆ ’ಗಯಾ’ಶ್ರಾದ್ಧಾ!

ಬಾಲ್ಯದಲ್ಲಿ ವಿದ್ಯಾಪೀಠ. ವೃದ್ಧಾಪ್ಯದಲ್ಲಿ ವ್ಯಾಸಪೀಠ.
ಸತ್ತಮೇಲೆ ಶಕ್ತಿಪೀಠ.

ವೈದಿಕಸಭೆಯವರು ಒಂದಷ್ಟು ಜನ ಇತ್ತೀಚೆಗೆ ಮಣಿಕರ್ಣಿಕಾ ಫಿಲ್ಂ ನೋಡಕ್ಕೆ ಹೋದ್ರು. ಇಂಟರ್ವಲ್ ಹೊತ್ತಿಗೆ ಈಚೆಗೆ ಬಂದ್ರು. ಮಣಿಕರ್ಣಿಕಾ ಘಾಟ್ ಬಗ್ಗೆ ಫಿಲ್ಂ ಅಲ್ಲ ಅಂತ ಗೊತ್ತಾಯ್ತು.

ವೈದಿಕ ಸಭೆಲಿರೋ ಒಬ್ಬ್ರು ಮೊದ್ಲು ಇದ್ದದ್ದು ವಿಲ್ಸನ್ ಗಾರ್ಡನ್ ಹತ್ರ. ಈಗ ಹರಿಶ್ಚಂದ್ರ ಘಾಟ್ ಪಕ್ಕಕ್ಕೆ ಶಿಫ್ಟ್ ಆದ್ರು.

ವೈದಿಕ ಸಭೆಲಿರೋ ಒಬ್ರ ಮಗ ಹುಡ್ಗೀಗೆ ಕಾಳು ಹಾಕ್ತಾ ಇದ್ದ. ಆಗ ಅವರು ಎಚ್ಛರ ಕೊಟ್ರು: ಅವಳು ನಿನ್ನ ಒಪ್ದಿದ್ರೆ, ನಿನಗೆ ಅವಳು ಅಕ್ಕಿ ಕಾಳು ಹಾಕ್ದಂಗಾಗತ್ತೋ! ಅಂತ.

ನಾವು ಆಗ ಈಗ ಹೇಳೊ ಮಾತು: ದಾನಗಳಲ್ಲಿ ಶ್ರೇಷ್ಠವಾದ ದಾನ – ಸಮಾದಾನ!
ವೈದಿಕ ಸಭೆಲಿರೋರು ಹೇಳೊ ಮಾತು: ದಾನಗಳಲ್ಲಿ ಶ್ರೇಷ್ಠವಾದ ದಾನ – ಪಿಂಡದಾನ!

ಸತ್ತಾಗ ಅಶ್ರು ತರ್ಪಣ. ವೈದಿಕ ಸಬೆಯಲ್ಲಿ? ಪಿತೃ ತರ್ಪಣ!

ಮೊದಲಿಂದಲೂ ಸಂಸ್ಕಾರ ಇರ್ಬೇಕು. ಕೊನೇಗೆ ಸಿಗೋದು ಅಂತಿಮ ಸಂಸ್ಕಾರಾನೇ!

ವೈದಿಕದವರ ಮನೆಯವರಿಗೆ ಬಾಳೆಹಣ್ಣು ನೋಡ್ಕೊಂಡು ಕೊಡಿ. ಹಣ್ಣಾಗಿದ್ರೆ ಮನೆಗಾಗತ್ತೆ. ಕಾಯಿ ಆಗಿದ್ರೆ – ವೈದಿಕಕ್ಕಾಗತ್ತೆ.

ನಮಗೆ FUNERAL. ಸ್ಮಶಾನದಲ್ಲಿರೋರಿಗೆ FUN REAL.

CEREMONY nowadays has become CEREMONEY!

Everytime they utter prachinaviti, they prefer the LEFT. But they generally vote for the RIGHT!

ಅಡುಗೆಯವರು ಮಾಡಿದ್ರೆ? ನಳಪಾಕ.
ನಾವೇ ಮಾಡ್ಕೊಂಡ್ರೆ? ಸ್ವಯಂ ಪಾಕ.

ವೈದಿಕದವರು ಬೌಲಿಂಗ್ ಮಾಡಿದ್ರೆ? ಎಲ್ಲ ಪಿಂಡಾ ಬಾಲ್!

ಎಷ್ಟೇ ಆಸ್ತಿ ಮಾಡಿದ್ರೂ ಕೊನೇಗೆ ಆಗೋದು ಅಸ್ಥಿನೆ.
ಅಸ್ತಿತ್ವ ಕಳ್ಕೊಳೋದೆ ಅಸ್ಥಿ ಬಿಟ್ಟಾಗ.

ದೇವಸ್ಥಾನಕ್ಕೂ ವೈದಿಕ ಸಭೆಗು ವ್ಯತ್ಯಾಸ?
ಅಲ್ಲಿ ಪ್ರದಕ್ಷಿಣೆ. ಇಲ್ಲಿ ದಕ್ಷಿಣೆ.

ಓಣಗಿದ ಹೂ, Cremationಗೆ ಹೊರಟ ಹೆಣ – ಎರಡಕ್ಕೂ ಒಂದೇ description. Body ಹೋಯ್ತು.

ಪರೀಕ್ಷೆಲಿ ಎಲ್ಲ questionಗೂ ಚೆನ್ನಾಗಿ answer ಬರೆಯೋರು ಉತ್ತರ ಕ್ರಿಯೆ ಚೆನ್ನಾಗಿ ಮಾಡ್ತಾರೆ.

ಗಣೇಶನ ಚತುರ್ಥಿ ದಿವಸ ಹತ್ತನೇ ದಿವಸ ಬಂದ್ರೆ?
ಒಂದೆಡೆ ಮೋದಕ, ಇನ್ನೊಂದೆಡೆ ಧರ್ಮೋದಕ!

ವೈದಿಕದ ವಿಷಯ ಕುರಿತು monthly magazine ಒಂದು ಶುರು ಮಾಡೋಣಾ ಅಂತ ಇದೀನಿ…ಹೆಸರು? ಮಾಸಿಕ!
ಇದರ yearly anniversary? ವರ್ಷಾಬ್ಧಿಕ!

I have a friend named Antyesh. He makes excellent Tea. He wanted to start a Tea shop. I warned him beforehand: Don’t name it after yourself. It will become Antyesh Tea shop!

National Egg Coordination Committee tagline is Sunday ho ya Monday, roz khao ande!
Anda, Pinda, Brahmanda – See how close Vaidhika Sabhe and NECC is : Anda, Pinda…
Vaidhika Sabhe can say: Sunday ho ya Monday, roz Rave Unde!

ಸಜ್ಜಪ್ಪ : ನೋಡಿ ಹೆಸರು ಹೇಗಿದೆ! ಹೆಸರಲ್ಲೇ ಪೂರ್ವಿಕರನ್ನೊಳಗೊಂಡಿದೆ! ಸಜ್ಜನಿಕೆಯ ಅಜ್ಜ, ಅಪ್ಪ – ಸೇರಿದರೆ ಸಜ್ಜಪ್ಪ!
ಇರುವವರೆಗೂ ಜೀವನದಲ್ಲಿ ಸಜ್ಜನಿಕೆಯ ಹೂರಣ ಸತ್ವ ತುಂಬಿದ ಹಾಗಿರಿ!
ಸಜ್ಜಪ್ಪ ತಿನ್ನುವಾಗ ತಿಳಿಯಿರಿ…ಇಹ ಮುಗಿಸಿ ಪರಕ್ಕೆ ಹೊರಡಲು ಸಜ್ಜಾಗಿರಪ್ಪ!
ಅದುವೇ ಸಜ್ಜಪ್ಪ!

ಪ್ರಪಂಚದಲ್ಲಿ ಎಲ್ಲೇ ಹೋದ್ರು, ನಮ್ಮನ್ನ ಬೋಳಿಸ್ತಾರೆ.
ಆದ್ರೆ, ವೈದಿಕ ಸಭೆನವರು ಹಾಗಲ್ಲ: ನೀವೇ ಇಲ್ಲಿಗೆ ಬರೋ ಮುನ್ನ ಎಲ್ಲಾ ಬೋಳಿಸ್ಕೊಂಡು ಬನ್ನಿ ಅಂತಾರೆ!

ಶಿವನ ಇನ್ನೊಂದು ಹೆಸರು – ಅಂತ್ಯೇಶ. ಅಂತ್ಯಕ್ಕೆ ಈಶ.
ಹಾಗಂತಾ ಇದನ್ನ ಮಗನಿಗೆ ಇಟ್ರೆ, ಅವನನ್ನ ಟೀ ಗೆ ಕರೆಯೋದು ಪ್ರಾಬ್ಲಮ್ ಆಗತ್ತೆ: ಅಂತ್ಯೇಶ್ ಟೀ ಗ್ ಹೋಗೋಣ ಬಾ!

Vade is made in the name of the departed soul. See the link: The hole in the Vade has a deeper meaning indicating that you are the centre of the universe surrounding you and from your point of view, the circumference of Vade could be even or uneven but they add to the taste of the dish. The departed soul is somewhere in the universe. After offering Pinda,Thithi vade taste is Brahmanda!

There is a place called Vade Samudra in Mandya Dist. of Karnataka. There are several places named Pinda: in Bihar, Brazil, Republic of Angola and Republic of Mozambique. South Australia has Pinda Springs! There is a hotel named Hotel Intercity Pátio Pinda in Brazil!

Coming next: A to Z of Vaidikas!
A for Aryavartha
B for Brahmavartha
C for Ceremony

The very first MAC

July 9, 2019

Trivia: Macmohan, popular for his role as ‘Samba’ in Sholay, was born on 24 April 1938, Karachi, Pakistan. He shares his birthday with Dr.Rajkumar and Sachin Tendulkar.

Extremely Goody Baddy

March 24, 2018

Click on the pic to enlarge

Don’t miss:

Fifteen years, and counting…

Coin designed on Baradwaj Rangan’s 15 years as Reviewer

Also read:

Pongalo Pongal! Rangano Rangan!

The World of Baradwaj Rangan

Our Film Companion is Baradwaj Rangan

The inimitable Baradwaj Rangan

Baradwaj Rangan, a writer par excellence