Archive for the 'Religion & Philosophy' Category

WFH IN RAMAYANA!

April 4, 2020

Happy Sri Rama Navami! Jai Sri Ram!

April 2, 2020

Dwadasha Jyotirlinga using Mathematical Symbols

February 20, 2020

Dwadasha Jyotirlinga using Mathematical Symbols

 

***

ಕನ್ನಡದ ಅಕ್ಷರಗಳಲ್ಲಿ ದ್ವಾದಶ ಜ್ಯೋತಿರ್ಲಿಂಗ
ಕಲೆ+ತಲೆ: ಬೆಳ್ಳೂರು ರಾಮಕೃಷ್ಣ

16996426_860007537474578_6037674401948233471_n

ಶಿವನಿಲ್ಲದ ಸ್ಥಳವುಂಟೆ?

ಪಿತೃ ಪಕ್ಷ ಮತ್ತು ವ್ಯಾಲೆಂಟೈನ್ ಡೇ

February 9, 2020

ಪಿತೃ ಪಕ್ಷ ಮತ್ತು ವ್ಯಾಲೆಂಟೈನ್ ಡೇ
ಕರ್ತೃ : ರಾಮಕೃಷ್ಣ ಬೆಳ್ಳೂರು

೧) ಒಂದೆಡೆ ವಿ-ಡೇ. ಇನ್ನೊಂದೆಡೆ ವಡೆ.
೨) ಎರಡರಲ್ಲೂ ಪಕ್ಷಿಗಳಿಗೆ ಮಹತ್ವ. ಕಾಗೆ. ಡವ್.
೩) ವಾರವೆಲ್ಲ ಆಚರಿಸಿ ೧೪ಕ್ಕೆ ಅದು ಮುಗಿದ್ರೆ, ೧೪ ದಿವಸದಲ್ಲಿ ಯಾವತ್ತಾದ್ರೂ ಇದನ್ನ ಮಾಡಬಹುದು.
೪) ಭಕ್ಷ್ಯಗಳನ್ನ ಕರಿದು (ವಡೆ, ಸಜ್ಜಪ್ಪ) ಪಿತೃಗಳಿಗೆ ಕೊಡ್ತೀವಿ. ವ್ಯಾಲೆಂಟೈನ್-ನ ಕರೆದು ಭಕ್ಷ್ಯಗಳನ್ನು (ಐಸ್ ಕ್ರೀಮ್, ಚಾಕಲೇಟ್ ಇತ್ಯಾದಿ) ಕೊಡ್ತೀವಿ.
೫) ಅಲ್ಲಿ FUNERAL ಆಗಿರ್ಬೇಕು. ಇಲ್ಲಿ FUN REAL ಆಗಿರ್ಬೇಕು.
೬) ಅಲ್ಲಿ ಹುಡ್ಗ ಹುಡುಗಿ ಒಬರಿಗೊಬ್ರು ಕಾಳು ಹಾಕ್ಕೋತಾರೆ. ಇಲ್ಲಿ ಬರೀ ಅಕ್ಕಿ ಕಾಳೆ.
೭) ಅಲ್ಲಿ stuffed item ಅಂದ್ರೆ ಸಜ್ಜಪ್ಪ ಇತ್ಯಾದಿ. ಇಲ್ಲಿ stuffed item ಅಂದ್ರೆ soft toys ಇತ್ಯಾದಿ.
೮) ಅಲ್ಲಿ ಬೇರು. ಇಲ್ಲಿ ಟೆಡ್ಡಿ ಬೇರು.
೯) ಅದು ಆದಿ ಕಾಲದಿಂದಲೂ ನಡೆದುಕೊಂಡು ಬರ್ತಿರೋ ಕರ್ಮ. ಇದು ಈ ನಡುವೆ ಶುರು ಆಗಿರೋ ಕರ್ಮ.
೧೦) ಪಿತೃ ಪಕ್ಷ ಆಗಲಿ, ವ್ಯಾಲೆಂಟೈನ್ಸ್ ಡೇ ಆಗಲಿ, ಕಾಗೆ ಹಾರಿಸಬಾರ್ದು.
೧೧) ಅಲ್ಲಿ ರವೇ undae. ಇಲ್ಲಿ any sundae
೧೨) ಪಿತೃಗಳಿಗೆ ಅರ್ಘ್ಯ. ವ್ಯಾಲೆಂಟೈನ್ ಸಿಕ್ರೆ, ಅನರ್ಘ್ಯ!
೧೩) ಅಲ್ಲಿ ಪವಿತ್ರ (ದರ್ಬೆ) ಇರ್ಬೇಕು, ಇಲ್ಲಿ ಪವಿತ್ರವಾಗಿರ್ಬೇಕು.
೧೪) ಅಲ್ಲಿ ತಿಲದಾನ ಉತ್ತಮ. ಇಲ್ಲಿ ಸಮಾಧಾನ ಉತ್ತಮ.

ಸಂತ ವಾಲೆಂಟೈನ್ ಮತ್ತು ಪಿತೃಗಳ ಆಶೀರ್ವಾದ ಎಲ್ಲರಿಗೂ ಲಭಿಸಲಿ!

SHABARI’MALE’! SABARI’MALA’! AYYAPPA!

November 21, 2019

FRONT PAGES OF NEWSPAPER (10th Nov. 2019) ANNOUNCING AYODHYA VERDICT

November 11, 2019

R2D2 and Idagunji Ganesha

July 20, 2019

FIRST MAN = ADI PURUSHA = GOVINDA

July 16, 2019

ಆಟ ಪರದಾಟ

June 23, 2019

ಆಟ ಪರದಾಟ
ರಚನೆ: ರಾಮಕೃಷ್ಣ ಬೆಳ್ಳೂರು

ಅಫ್ಘಾನಿಸ್ತಾನದಲ್ಲಿರುವ ಕಂದಹಾರ
ಗಾಂಧಾರಿಯ ತವರೂರಾದ ಗಾಂಧಾರ
ಅವಳ ವಂಶ ನಿರ್ವಂಶ ಮಾಡಿಸಿದ್ದಕ್ಕೆ
ಗಾಂಧಾರಿ ಇತ್ತಳು ಕೃಷ್ಣನಿಗೆ ಶಾಪ
ಇದರಿಂದ ಪರಮಾತ್ಮ ನಕ್ಕನೆ ಹೊರತು
ಆಗಲಿಲ್ಲ ಅವನಿಗೆ ಕೋಪ

ನಿನ್ನೆಯ ಪಂದ್ಯದ ನಂತರ ಕುಳಿತರು
ಅಫ್ಘಾನಿಸ್ತಾನದವರು ಬೇಸತ್ತು
ಏಕೆಂದರೆ ಗಾಂಧಾರಿ ಕೊಟ್ಟ ಶಾಪದ ಗಾಳಿ
ನಿನ್ನೆಯ ಪಂದ್ಯದ ಮೇಲೆ ಬೀಸಿತ್ತು
ಆದುದರಿಂದ ಕುರುಕ್ಷೇತ್ರವಾಯಿತು ನಿನ್ನೆಯ ಆಟ
ಗೆಲ್ಲುವ ಹೊತ್ತಿಗೆ ಆಗಿತ್ತು ಮಹಾ’ಭಾರತ’ಕ್ಕೆ ಪರದಾಟ.

ಮಂಚಾಲಮ್ಮ-ಮಾಚಮ್ಮ

June 22, 2019

ಮಂಚಾಲಮ್ಮ-ಮಾಚಮ್ಮ
ರಚೆನೆ: ರಾಮಕೃಷ್ಣ ಬೆಳ್ಳೂರು

ರಾಯರಿಗೆ ಭೂದಾನ ಮಾಡಿದಳು ಮಂಚಾಲಮ್ಮ
ರಾಯರಿಂದ ವರದಾನ ಪಡೆದಳು ಮಾಚಮ್ಮ

ಅಲ್ಲಿ ಗ್ರಾಮದೇವತೆಯ ಶಕ್ತಿ
ಇಲ್ಲಿ ಮಾತೃದೇವತೆಯ ಭಕ್ತಿ

ಅಲ್ಲಿ ರಾಯರ ದರುಶನ ಪಡೆಯುವ ಮುನ್ನ
ಪಡೆಯಬೇಕು ಮಂಚಾಲಮ್ಮನ ದರುಶನ

ಇಲ್ಲಿ ಮಾಚಮ್ಮನ ಮನವೆಂಬ ಮಂತ್ರಾಲಯದಲ್ಲಿ
ಆಗುವುದು ನಿತ್ಯ ರಾಯರ ದರುಶನ

ಅವಳ ದೇವಾಲಯದ ಪಕ್ಕದಲ್ಲಿದೆ ಬೃಂದಾವನ
ಇವಳ ಹೃದಯಾಲಯದ ಒಳಗಿದೆ ತಪೋವನ

ಮಂಚಾಲಮ್ಮ ಮಾಚಮ್ಮ ಇಬ್ಬರಿಗೂ ಅನುಗ್ರಹಿಸದರು ರಾಯರು
ಇವರಿಬ್ಬರೊಡನೆ ಸೇರಿ ಆಶೀರ್ವದಿಸಬೇಕು ನಮ್ಮನ್ನು ಗುರುರಾಯರು

ಗುರುರಾಯರೇ ನಮಗೆ ಕಲ್ಪವೃಕ್ಷ
ಕೈ ಚಾಚಿ ನಿಂತಿರುವೆವು, ನೀಡಿ ನಮಗೆ ಜ್ಞಾನಭಿಕ್ಷ

ಕಲಿಯುಗದಲ್ಲಿ ಗುರುರಾಯರೇ ಕಾಮಧೇನು
ಎಲ್ಲ ಅವನ ಇಚ್ಛೆ, ಇಲ್ಲಿ ನಮ್ಮದೇನು?!