ಮರೆಯಲಾದೀತೇ
ರಚನೆ:ರಾಮಕೃಷ್ಣ ಬೆಳ್ಳೂರು
ನಿನ್ನ ಸವಿ ನೆನಪು
ನಿನ್ನ ಪಾದರಸದಂತಹ ಹುರುಪು
ನಿನ್ನ ಸ್ವಚ್ಛ ಬಿಳುಪು
ನಿನ್ನ ಶುಭ್ರ ಉಡುಪು
ನಿನ್ನ ಆಚಾರ
ನಿನ್ನ ವಿಚಾರ
ನಿನ್ನ ಉಪಚಾರ
ನಿನ್ನ ಸದಾಚಾರ
ನಿನ್ನ ಮೃದು ಸ್ವಭಾವ
ನಿನ್ನ ಒಳ್ಳೆಯತನದ ಪ್ರಭಾವ
ನಿನ್ನ ಅಗಲಿಕೆಯಿಂದಾದ ಅಭಾವ
ಎಲ್ಲರಿಗೂ ನೀ ತೋರಿದ ಸ್ನೇಹಭಾವ
ಇಪ್ಪತ್ತು ಮೂರು ವರ್ಷಗಳಿಂದ ಭಗವಂತನಿಗೆ ತೊರುತ್ತಿರುವೆ ನಿನ್ನ ಮಾತೃಭಾವ
ಇದುವೇ ಪರಮಾತ್ಮನ ಸೌಭಾಗ್ಯ
ನಿನ್ನನ್ನು ತಾಯಿಯಾಗಿ ಪಡೆದಿದ್ದೇ ನಮ್ಮ ಭಾಗ್ಯ!