Posts Tagged ‘PM Modi’

ಸಾರ್ಥಕ ದೇಶಕೆ ನರೇಂದ್ರ ಮೋದಿ

September 17, 2023

ಸಾರ್ಥಕ ದೇಶಕೆ ನರೇಂದ್ರ ಮೋದಿ
ರಚನೆ: ರಾಮಕೃಷ್ಣ ಬೆಳ್ಳೂರು

ದೇಶದ ಶ್ರೇಯಸ್ಸಿಗೆ ಶ್ರಮಿಸುವ ಪ್ರಧಾನಿ ಮೋದಿ
ದೇಶ ದೇಶಗಳಲ್ಲೂ ಸ್ನೇಹ ಸಾರುವ ಸಾವಧಾನಿ ಸತ್ಯಶೋಧಿ

ಜನಧನ ಯೋಜನೆಯ ರೂವಾರಿ ಮೋದಿ
ಜನಸುರಕ್ಷೆಯ ನಾಯಕ ಮೋದಿ

ಜೀವನ ಜ್ಯೋತಿ ಭೀಮೆಯ ಯೋಜನೆ
ಅಟಲ ಪಿಂಚಣಿ ಯೋಜನೆ

ಮುದ್ರ ಯೋಜನೆ ವಿಶ್ವಕರ್ಮ ಯೋಜನೆ
ಸೇತು ಭಾರತ ಯೋಜನೆ

ಸ್ವಚ್ಛ ಭಾರತ ಯೋಜನೆ ಸಂಸದ ಆದರ್ಶ ಗ್ರಾಮ ಯೋಜನೆ
ಮೋದಿಗೆ ಉಜ್ವಲ ಭಾರತದ ಯೋಚನೆ

ರಾಷ್ಟ್ರವನ್ನು ಬೆಸೆಯುವ ಸಂಧಾನ ಮಂತ್ರಿ
ಪ್ರಪಂಚದೆಲ್ಲೆಡೆ ಮೆಚ್ಚುಗೆ ಗಳಿಸಿದ ವ್ಯವಧಾನಿ ಮಂತ್ರಿ

ವಿಜ್ಞಾನಿಗಳಿಗೆ ಅಚ್ಚು ಮೆಚ್ಚು ಮೋದಿ
ರೈತರ ಪಾಲಿಗೆ ಒಲಿಯುವ ಮೋದಿ

ಮಕ್ಕಳು ನೆನೆಯುವ ಪ್ರಧಾನಿ ಮೋದಿ
ಹಿಂದೂ ರಾಷ್ಟ್ರಕೆ ಸಂಪ್ರದಾನಿ ಮೋದಿ

ಮಧ್ಯಮ ವರ್ಗಕೆ ಆಶಾಕಿರಣ
ದೇಶದ ಏಳ್ಗೆಗೆ ನಾಗಾಭರಣ

ಬಡವರ ಬಂಧು ನಮ್ಮ ಮೋದಿ
ಸಾರ್ಥಕ ದೇಶಕೆ ನರೇಂದ್ರ ಮೋದಿ

ಸತ್ಯ ಶೋಧಿಸಿ, ಬೋಧಿಸಲಿ ಶಕ್ತಿವಂತ ಮೋದಿ
ಜಾತಿ ಮತಗಳನ್ನು ಮೀರಿ ಮೇಲೇರಲಿ ಹಸನ್ಮುಖಿ ಮೋದಿ

ಮಾತಿನಲ್ಲೇ ಮೋಡಿ ಮಾಡುವರು ಮೋದಿ
ಆಯುಧ ಎತ್ತದೇ ವೈರಿಯ ಸದೆಬಡಿಯುವರು ಮೋದಿ

ನೂರ್ಕಾಲ ಬಾಳಲಿ ಪ್ರೀತಿಯ ಮೋದಿ
ಸರಕಾರ ನಡೆಸಲಿ ಎಂದಿಗೂ ಮೋದಿ

SENGOL used by our dear APPU

May 25, 2023