Archive for the 'Sanskrit' Category

Solar Eclipse June 21, 2020!

June 21, 2020

ಯೋಗವಿದ್

June 20, 2020

[Click on the image to enlarge]

ಯೋಗವಿದ್
ರಚನೆ: ರಾಮಕೃಷ್ಣ ಬೆಳ್ಳೂರು

ಯೋಗಪತಿಯು ಯೋಗನಾಥನು ಯೋಗಮೂರ್ತಿಧರನು
ಯೋಗಸ್ಥನೂ ಯೋಗಾಚಾರ್ಯನು ಆದ ಯೋಗಪುರುಷನು
ಯೋಗನಿದ್ರೆಯಲ್ಲಿ ಯೋಗಬಲದಿ ಯೋಗದರ್ಶನ ಪಡೆದು
ಯೋಗಶಾಸ್ತ್ರ; ಯೋಗಸಾರ; ಯೋಗಾಸನ; ಯೋಗಫಲಗಳನ್ನಡಗಿಸಿ
ಯೋಗಸಮಾಧಿಯಲ್ಲಿದ್ದ ಯೋಗಾತ್ಮರಾದ ವಸಿಷ್ಠರೊಡನೆ
ಯೋಗೀಶ್ವರನು ನಡೆಸಿದ ಸಂವಾದವೇ ಯೋಗವಾಸಿಷ್ಠವೆಂಬುದನ್ನು
ಯೋಗಾಭ್ಯಾಸಕ್ಕೆ ಯೋಗಾಭ್ಯಾಸಿಗೆ ಅವಶ್ಯವಾದ
ಯೋಗವಾಹಿಯೆಂಬ ಯೋಗಶಿಕ್ಷೆಯಲ್ಲಿರುವ
ಯೋಗವಿದ್ಯೆಯ ಯೋಗಾಂಗದ ಯೋಗಾಮೃತವನ್ನರಿಯಲು
ಯೋಗಪಥದಲ್ಲಿರುವ ಯೋಗಾನುಶಾಸನ ಪಡೆಯಲು
ಯೋಗಯುಕ್ತನಾದ ಯೋಗಯುಕ್ತಿಯು, ಯೋಗಧರ್ಮಿಯು
ಯೋಗಾಂಜನವ ಲೇಪಿಸಿಕೊಂಡು ಯೋಗಜನಾಗಿ
ಯೋಗರಥದಲ್ಲಿ ಏರಿ ಯೋಗವಾಹಿನಿಯ
ಯೋಗವಾಣಿಯ ಆಣತಿಯಂತೆ
ಯೋಗಾನಂದದಿ ಯೋಗತತ್ವೋಪನಿಷತ್ತಿನಲ್ಲಡಗಿರುವ
ಯೋಗಸೂತ್ರ, ಹಠಯೋಗ ಮತ್ತು ಕುಂಡಲಿನಿ ಯೋಗಗಳ
ಯೋಗತ್ವ ಪಡೆಯುವುದೇ ಸುಯೋಗವೆಂದರಿತು
ಯೋಗಪಾರಂಗತನಾದ ಯೋಗಸ್ವಾಮಿಯ ಸಹಯೋಗದಿಂದ
ಯೋಗೈಶ್ವರ್ಯ ಪ್ರಸಾದ ಪಡೆದು ಯೋಗಸೇವಾನಿರತನಾಗಿ
ಯೋಗದ ಯೋಗ್ಯತೆಯಿರುವ ಯೋಗ್ಯರ ಯೋಗಕ್ಷೇಮ ವಹಿಸಿ
ಯೋಗಸಂಸಿದ್ಧಿಯತ್ತ ನೀಡುತ್ತಿದ್ದಾನೆ ತನ್ನ ಯೋಗದಾನ

Also read: ಯೋಗ

Dwadasha Jyotirlinga using Mathematical Symbols

February 20, 2020

Dwadasha Jyotirlinga using Mathematical Symbols

 

***

ಕನ್ನಡದ ಅಕ್ಷರಗಳಲ್ಲಿ ದ್ವಾದಶ ಜ್ಯೋತಿರ್ಲಿಂಗ
ಕಲೆ+ತಲೆ: ಬೆಳ್ಳೂರು ರಾಮಕೃಷ್ಣ

16996426_860007537474578_6037674401948233471_n

ಶಿವನಿಲ್ಲದ ಸ್ಥಳವುಂಟೆ?

VYANGYA CHITRAAVADHAANA: A TRIBUTE TO SHATAAVADHAANI DR.R.GANESH

January 6, 2020

ಯೋಗ

June 21, 2019

[Click on the image to enlarge]

ಯೋಗ
ರಚನೆ: ರಾಮಕೃಷ್ಣ ಬೆಳ್ಳೂರು

ಛಂದಸ್ಸಿಗನುಗುಣವಾಗಿ ಬರೆಯುವುದು ಅಧ್ವಯೋಗ
ಕಾವ್ಯವನ್ನು ರಚಿಸುವುದು ಅಭಿಯೋಗ

ಪುರುಷರಿಗೆ ಲಕ್ಷಣ ಉದ್ಯೋಗ
ದೇಶದ ಸಮಸ್ಯೆಗಳಲ್ಲೊಂದು ನಿರುದ್ಯೋಗ

ಎಂದಿಗೂ ಕಾಯಕ ಮಾಡುವುದೇ ಕರ್ಮಯೋಗ
ದೇವರನ್ನು ಸ್ಮರಿಸುವುದು ಭಕ್ತಿಯೋಗ

ಕಲ್ಪವೃಕ್ಷದಿಂದ ನಮಗೆಷ್ಟು ಉಪಯೋಗ
ತಂದೆ ತಾಯಿಯರ ಸೇವೆ ಮಾಡುವುದೇ ಸುಯೋಗ

ಕಲೆಯಲ್ಲಿ ಮಾಡಿದ ಪ್ರಯೋಗ
ಸಾರ್ಥಕ್ಯ ಪಡೆಯುವುದು ಆದಾಗ ಸದುಪಯೋಗ

ಏಕಾಗ್ರಚಿತ್ತವಾಗಿರಲು ಮಾಡಬೇಕು ಹಠಯೋಗ
ಮಾಡಬಾರದು ಸಂಪನ್ಮೂಲಗಳ ದುರುಪಯೋಗ

ಪ್ರತಿದಿನ ಪಾಲಿಸಬೇಕಾದ ಯೋಗ
ಜೀವನ ಧರ್ಮ ಯೋಗ

ಸರ್ಕಾರ ದೇಶವನ್ನು ಪರಿವರ್ತಿಸಲು ಸೃಷ್ಟಿಸಿದೆ ನೀತಿ ಆಯೋಗ
ಧೃತರಾಷ್ಟ್ರ ಪಾಂಡು ವಿದುರ ಹುಟ್ಟಿದ್ದ ವಿಧಿ ನಿಯೋಗ

ಬ್ರಹ್ಮ ತತ್ವ ತಿಳಿಯಲು ಬೇಕು ದೈವಯೋಗ
ಸಾಫಲ್ಯತೆ ಪಡೆಯುವುದೇ ನಿತ್ಯ ಯೋಗ

ವಿದ್ಯಾಧಿದೇವತೆ ಅನುಗ್ರಹಿಸಿದರೆ ಸಿಗುವುದು ಅಕ್ಷರ ಯೋಗ
ಹೊರನಾಡ ದೇವತೆ ವರವಿತ್ತರೆ ದಿನವೂ ಅನ್ನ ಯೋಗ

ದೇಶದ ಬೆನ್ನೆಲುಬಾದ ರೈತರಿಗೆ ಬೇಕು ಕೃಷಿ ಯೋಗ
ವಂಶ ಬೆಳೆಯಲು ಭಗವಂತ ಕರುಣಿಸಬೇಕು ಸಂತಾನ ಯೋಗ

ಮಂತ್ರ ತಂತ್ರ ಯಂತ್ರಗಳಿಂದ ಸೂಕ್ಷ್ಮವನ್ನು ಜಾಗೃತಗೊಳಿಸಲು ಕಲಿಯಬೇಕು ಕುಂಡಲಿನಿ ಯೋಗ
ಮಾಯೆಯಿಂದ ಮುಕ್ತನಾಗುವುದೇ ರಾಜ ಯೋಗ

ಸಕಾಲಕ್ಕೆ ಮಳೆಬರಲು ಬೇಕು ವರ್ಷ ಯೋಗ
ಲಕ್ಷ್ಮಿಯ ೨೩ನೆ ನಿತ್ಯ ನೈಸರ್ಗಿಕ ಯೋಗವೇ ಶುಭಯೋಗ

ಶೋಕಿಸಬೇಕು ನಾವು ಭಗವಂತನಿಂದ ಆಗಿದ್ದಕ್ಕೆ ವಿಯೋಗ
ಯೋಗ ಮಾರ್ಗ ವಿಷಮವಾದರೂ ವಿವೇಕ ಹೊಂದಲು ಬೇಕು ಜ್ಞಾನಯೋಗ

ಪ್ರತ್ಯಕ್ಷ ಅನುಮಾನ ಮತ್ತು ಶಬ್ದಗಳ ಪ್ರಮಾಣ ಒಪ್ಪುವುದು ಸಾಂಖ್ಯ ಯೋಗ
ಆತ್ಮ ಸಾಕ್ಷಾತ್ಕಾರದತ್ತ ಅರ್ಜುನನನ್ನು ಕಳುಹಿಸಿದ್ದೆ ವಿಷಾದ ಯೋಗ

ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧಾರಣ ಧ್ಯಾನ ಸಮಾಧಿಗಳೇ ಅಷ್ಟಾಂಗಯೋಗ
ಯೋಗ ದಿವಸದಂದು ಈ ಸಾಲುಗಳು ಬರೆದಿದ್ದು ಯೋಗ ಭಾವನೆಗಳ ಸಂಯೋಗ

Santa Claus Jokes and Christmas one liners

December 25, 2017

Difference betw. we commoners and Santa? We say “Oho ho” while he says “Hohoho”!

***

Using Nirukta (etymological derivation) we can interpret ‘Santa Claus’ as ‘शान्त क्लोश’, who brings world peace, gifts and happiness, and who pacifies the crying!

***

What is common between Ganesha and Jesus? During their bday, we utter their Mom’s name first.
Happy Gowri Ganesha !
‘Merry (Mary)’ Christmas !

***

Which Dr.Raj’s film will be read differently during X-mas?
SANTA Tukaram.

***

HBD SantAtal !

***

Sringeri Shankara Mutt wallpapers design by RK Bellur

July 15, 2017

To the goddess and Jagadgurus who have blessed me with all good things.

 

ರಾಜ ಪಂಚಾಶತ್

June 21, 2017

ರಾಜ ಪಂಚಾಶತ್
ರಚನೆ: ರಾಮಕೃಷ್ಣ ಬೆಳ್ಳೂರು

ರಾಜಮಾರ್ಗದಿ
ರಾಜರ್ಷಿಯ ಧ್ಯಾನದಿ
ರಾಜಕಾರ್ಯಾಸಕ್ತರಾಗಿ
ರಾಜವೈಭೋಗವ ಅನುಭವಿಸಿ
ರಾಜಭಟನೆಂಬ
ರಾಜಪದವಿ ಪಡೆದು
ರಾಜವಂಶಸ್ಥರಾಗಿ
ರಾಜಠೀವಿಯಿಂ
ರಾಜಕೀಯಕ್ಕೆ ಹೋಗದೆ
ರಾಜಕುಲದವರಾಗಿ
ರಾಜಮಂದಿರದಿ ನೆಲೆಸಿ
ರಾಜ ಲಕ್ಷಣ ಹೊಂದಿರುವ
ರಾಜ ಸದನದಿ
ರಾಜಭವನವಲಂಕರಿಸಿ
ರಾಜಚಿಹ್ನೆಗೆ
ರಾಜತ್ವ ಇತ್ತು
ರಾಜತರುವಂತಿರುವ
ರಾಜರತ್ನಮಾಲೆ ಧರಿಸಿದ
ರಾಜರಾಜೇಂದ್ರನಂತಿರುವ
ರಾಜಕಳೆ ಉಳ್ಳ
ರಾಜೋಪಚಿತ ನಡೆನುಡಿಯುಳ್ಳ
ರಾಜಕುಮಾರನಿಂದ
ರಾಜಧರ್ಮವ ಕಲೆತು
ರಾಜಧಾನಿಯಿಂದಾಚೆಗೂ
ರಾಜನೀತಿ ತಿಳಿಸಿ
ರಾಜ ಪಟ್ಟ ಗಳಿಸಿದ
ರಾಜಪುತ್ರರರೊಡನೆ
ರಾಜಪೂಜಿತರಾಗಿ
ರಾಜಬೀದಿಯಲ್ಲಿ
ರಾಜ ಮರ್ಯಾದೆಯೊಂದಿಗೆ
ರಾಜಮಾನ್ಯರೆನಿಸಿ
ರಾಜಮುದ್ರೆ ಹೊಂದಿ
ರಾಜಾಶ್ರಯದಲ್ಲಿ
ರಾಜಯೋಗ್ಯತೆ ಪಡೆದು
ರಾಜವಂತರಾಗಿ
ರಾಜ ವೈದ್ಯರೊಡನೆ
ರಾಜ ವಿದ್ಯೆ ಕಲೆತು
ರಾಜ ಶಾಸನದಿ
ರಾಜ ಶಿರೋಮಣಿಗೆ
ರಾಜಶೇಖರನ
ರಾಜಶ್ರೀ ಸಮೇತ
ರಾಜಲಿಂಗವ ಪೂಜಿಸಿ
ರಾಜ ಸಭೆಯಲ್ಲಿ
ರಾಜಸೂಯ ಮಾಡುತ್ತ
ರಾಜಸೇವೆಯಲ್ಲಿ
ರಾಜಹಂಸದಿ ವಿಹರಿಸಿ
ರಾಜಕಾರ್ಯಾನಿರತರಾಗಿ
ರಾಜಾಜ್ಞೆಯ ಪಾಲಿಸುತ್ತ
ರಾಜಾಧಿರಾಜನ ಧ್ಯಾನದಲ್ಲಿರುವುದೇ
ರಾಜಯೋಗ
ಇದಲ್ಲವೇ ರಾಜಧರ್ಮರಾಜಯೋಗ

As a Fan guest on Majaa Bharatha (Colors Super) (Raj special: April 25, 2017)

April 26, 2017

As a Fan guest on Majaa Bharatha (Colors Super) (Raj special: April 25, 2017)

Below is the complete version of Raaja Panchakshara stotra and Raj Rangoli.