
Archive for the 'Malleswaram' Category
ಕಾಯಕಲ್ಪ
May 21, 2022Vidyarthi Bhavan – High Drama in Malleswaram
April 23, 2022War begins afresh
April 18, 2022Tribute to Dr. KS Narayanacharya by RK Bellur
November 26, 2021


Erudite scholar Sri KS Narayanacharya no more
I can still hear the powerful voice of Sri Acharya, chanting the below Sri Hayagreeva stotra, before his lecture:
श्रीमान् वेङ्कटनाथार्यः कवितार्किककेसरी ।
वेदान्ताचार्यवर्यो मे सन्निधत्तां सदा हृदि ॥
ज्ञानानन्द मयं देवं निर्मलस्फटिकाकृतिम् ।
आधारं सर्व विद्यानां हयग्रीवम् उपास्महे ॥
Shriman Venkatnarthaye Kavitakirkkesari
Vedantacharyavaryo me Sannidhatam sada Hradi |
jñānānanda mayaṁ devaṁ nirmalasphaṭikākṛtim |
ādhāraṁ sarva vidyānāṁ hayagrīvam upāsmahe || 1 ||
[Meditate upon the Supreme Being, Sri Hayagriva, the embodiment of knowledge. Sri Hayagriva is an integrated form of knowledge and bliss. The one with the face and neck of a horse and who has a radiant, sparkling body like a pure white crystal, he is the abode of all learning. He is the first God of all knowledge.]
Erudite scholar Sri KS Narayanacharya no more
November 26, 2021ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ, ಭಾರತೀಯ ಸಂಸ್ಕೃತಿಯ ಪ್ರವಚನ ಹರಿಕಾರ ಡಾ.ಕೆ.ಎಸ್.ನಾರಾಯಣಾಚಾರ್ಯರು ಇಂದು ಪ್ರಾತಃಕಾಲ ಶ್ರೀಹರಿಯ ಚರಣ ಸೇರಿದರು. ರಾಮಾಯಣಸಹಸ್ರಶ್ರೀ, ಗೀತಾರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ,ಅಗಸ್ತ್ಯ, ಶ್ರೀಮಾತೇ ಕುಂತಿ ಕರೆದಾಗ, ಚಾಣಕ್ಯ ನೀತಿ ಸೂತ್ರಗಳು, ಶ್ರೀರಾಮಾವತಾರ ಸಂಪೂರ್ಣವಾದಾಗ, ವನದಲ್ಲಿ ಪಾಂಡವರು, ದಶಾವತಾರ ಇನ್ನು ಹಲವಾರು 100ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವುದಲ್ಲದೇ ವಿವಿಧ ಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿನ ಅಂಕಣ, ಬರಹಗಳು, ಪ್ರವಚನಗಳು ಮತ್ತು ವಿವಿಧ ಮಾಧ್ಯಮಗಳ ಚರ್ಚೆಯಗಳಲ್ಲಿ ನಮ್ಮ ನಾಡು, ನುಡಿ, ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳ ಬಗ್ಗೆ ಆಧಿಕಾರಯುತವಾಗಿ ಆರ್ಥಪೂರ್ಣ ವಿಷಯಗಳನ್ನು ಪ್ರತಿಪಾದಿಸುವ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಕನ್ನಡ, ಸಂಸ್ಕೃತ, ತಮಿಳು, ಇಂಗ್ಲೀಷ್ ಭಾಷಾ ಕೋವಿದರ ದೇಹಾಂತ್ಯವು ಸಾಹಿತ್ಯವಲಯಕ್ಕೆ ದುಃಖ ತಂದಿದೆ. ಅವರ ಕೃತಿಗಳ ಮೂಲಕ ಸದಾಕಾಲ ಅವರು ಅವರು ನನಪಿನಲ್ಲಿ ಉಳಿಯಲಿದ್ದಾರೆ.
ಆಚಾರ್ಯರಿಗೆ ಶಿರಸಾ ನಮಾಮಿ
ಮನಸಾ ಸ್ಮರಾಮಿ
ದುಃಖತೃಪ್ರ ಓದುಗ
ರಾಮಕೃಷ್ಣ ಬೆಳ್ಳೂರು
Foremost scholar of Indology ( author of 400+ books in Kannada & English ), Professor Dr. K.S. Narayanacharya, an erudite scholar of Ramayana no more.
Pravachanakalanidhi, Sri Ramayanacharya, Vedabhushana, Mahabharathacharya, Bhagavathacharya, Panditharaja Sriyutha Dr.K.S.Narayanacharya attained Acharyan Thiruvadi at 2:06 am 26-11-2021.
Sri Narayanacharya’s mastery over the religious texts and his sharp memory even at the age of 88 was mind-blowing. It was our sukrutha listening to the intricate details he gave about the Vedas, Puranas, Samhitas, Upanishads, Itihasa, Kavya, sacred scriptures, the mythological and historical characters between the lectures. The audience loved it when he connected the historical/ mythological events/ characters to contemporary events/ characters, esp. to politics.
Below message from Sri KSN’s family:
It is with the greatest regret * we are saddened to inform all his ardent followers that Acharyan Dr Ubhaya Vedanta Pravartakarar – KS Narayanacharya – our very beloved father attained Acharyan Thiruvadi. At 2:06 am 26-11-2021
K S NARAYANACHAR Family 😢😢😢🙏🏻🙏🏻🙏🏻🙏🏻
Below message from Sri Venkatesh, ardent follower of Acharya:
ಆಚಾರ್ಯರ ಕುಟುಂಬಕ್ಕೆ, ಶಿಷ್ಯ ವೃಂದ ಹಾಗೂ ಅಭಿಮಾನಿಗಳಿಗೆ ಭರಿಸಲಾಗದ ದುಃಖ. ಇಂದು ಶ್ರೀ ವೈಷ್ಣವ ಸಾರಸ್ವತ ಲೋಕದಲ್ಲಿ ಧ್ರುವತಾರೆ ಅಸ್ತಂಗತವಾಗಿ ದಾರಿ ತೋರಿಸುವ ದೀವಿಟಿಗೆ ನಂದಿಹೋದಂತಾಗಿದೆ. ಆದರೆ ಅವರು ನಮಗೆ ನೀಡುರುವ ಉಪನ್ಯಾಸಗಳು ಭಗವದ್ವಿಷಯ ಕಾಲಕ್ಷೇಪ ಗ್ರಂಥಗಳು ಮತ್ತು ರಾಷ್ಟ್ರೀಯ ವಿಚಾರಧಾರೆ ಅಪಾರವಾದ ಕೊಡುಗೆಗಳು ಅಜರಾಮರವಾಗಿ ಇರಲಿದೆ. ಅವರ ಅಗಲಿಕೆ ಸತ್ಸಂಪ್ರದಾಯಕ್ಕೆ ಭರಿಸಲಾಗದ ಅಪಾರವಾದ ನಷ್ಟ ಉಂಟಾಗಿದೆ. ಅಂತಿಮವಾಗಿ ಶ್ರೀಸೀತಾರಾಮ ಪಾದುಕಾ ಸೇವೆಯನ್ನು ಮಾಡುವ ಸಲುವಾಗಿ ಶಾಶ್ವತವಾಗಿ ಪರಂಧಾಮಕ್ಕೆ ಮರಳಿದ್ದಾರೆ. ಅವರಿಗೆ ಇಹಲೋಕದಲ್ಲಿ ನಮ್ಮಂತಹ ಸಾಮಾನ್ಯ ಜನರಿಗೆ ಸನ್ಮಾರ್ಗ ತೋರಲೆಂದೇ ಈ ಧರೆಯಲ್ಲಿ ಅವತರಿಸಿದ ಮಹೋನ್ನತ ವ್ಯಕ್ತಿತ್ವದ ಆಚಾರ್ಯರು. ಅದರಲ್ಲೂ ಸುಲಲಿತವಾದ ರಸದೌತಣವಾದ ಕನ್ನಡದಲ್ಲಿ ಭಗವದ್ವಿಷಯ ಮೃಷ್ಟಾನ್ನದ ಭೋಜನದ ರುಚಿ ಯನ್ನು ನಮಗೆಲ್ಲ ತೋರಿಸಲೆಂದೇ ಈ ಧರೆಯಲ್ಲಿ ಅವತರಿಸಿದ ನಿತ್ಯಸೂರಿಗಳು. ಅವರಗಲಿಕೆಯು ಇನ್ನು ಅನೇಕ ಕೃತಿಗಳ ಬರವಣಿಗೆ ಕೆಲಸಗಳು, ಉಪನ್ಯಾಸ ಕಾರ್ಯಕ್ರಮಗಳು, ಮತ್ತು ಮುಖ್ಯವಾಗಿ ಅಂತಿಮವಾಗಿ ಅಯೋಧ್ಯೆ ಶ್ರೀ ರಾಮ ದೇಗುಲದ ಆವರಣದಲ್ಲಿ ಶ್ರೀರಾಮಾಯಣ ಪ್ರವಚನ ಕೇಳಲು ಕಾದಿದ್ದ ಶ್ರೀರಾಮಚಂದ್ರ ಸ್ವಾಮಿಗೂ ಪರಿವಾರದವರಿಗೂ ನಿರಾಸೆ ಮೂಡಿರುವುದರಲ್ಲಿ ಸಂದೇಹವೇ ಇಲ್ಲ. ಇದುವೇ ತುಂಬಲಾರದ ನಷ್ಟ.
ವೈದಿಕ ಸಭೆಯಲ್ಲಿ ಹಾಸ್ಯ!
January 9, 2020(Click on the image to enlarge)
ವೈದಿಕ ಸಭೆಯಲ್ಲಿ ಹಾಸ್ಯ!
ಕರ್ತೃ: ರಾಮಕೃಷ್ಣ ಬೆಳ್ಳೂರು
ವೈದಿಕ ಕ್ರಿಯೆ ಮಾಡಿಸುವ ಶಾಸ್ತ್ರಿಗಳ ಜೊತೆ ಜಗಳ ಆಡಬೇಡಿ. ತಿಥಿ ಮಾಡ್ಬಿಡ್ತಾರೆ!
ಸಾಮಾನ್ಯವಾಗಿ ಯಾರನ್ನಾದ್ರು ಎಷ್ಟು ಪಕ್ಷಗಳಿವೆ ಅಂತ ಕೇಳಿದ್ರೆ “ಎರಡು” ಅಂತೀವಿ: ಶುಕ್ಲ ಪಕ್ಷ, ಕೃಷ್ಣ ಪಕ್ಷ. ಅದೇ ವೈದಿಕ ಮಾಡಿಸುವವರಿಗೆ ಕೇಳಿದ್ರೆ “ಒಂದೇ” ಅಂತಾರೆ – ಪಿತೃ ಪಕ್ಷ!
ವೈದಿಕ ಮಾಡಿಸುವವರಿಗೆ ಯಾವ ಕಂತೆ ಪುರಾಣವೂ ಬೇಡ. ಗರುಡ ಪುರಾಣ ಒಂದೇ ಸಾಕು.
ಹನಿ ಹನಿ ಗೂಡಿದರೆ ಹಳ್ಳ.
ಅಗಳು ಅಗಳು ಸೇರಿದರೆ ಪಿಂಡ.
Generally, ಮನೆ ಮೇಲೆ ಅನ್ನ ಇಡೋರು ಕಾಗೆ ಹಾರ್ಸಲ್ಲ.
ಮನರಂಜನೆಗೆ ಮೊದ್ಲೆಲ್ಲ ಇದ್ದದ್ದೇ ಆಕಾಶವಾಣಿ, ದೂರದರ್ಶನ – ಎರಡೇ ವಾಹಿನಿ. ಈಗ ಸಾವಿರಾರು ವಾಹಿನಿ! ಆದರೆ ವೈದಿಕ ಮಾಡಿಸೋರಿಗೆ ಬೇಕಾಗಿರೋದು ಒಂದೇ : ಪಶ್ಚಿಮ ವಾಹಿನಿ.
ವೈದಿಕ ಸಭೆಯಲ್ಲಿರುವವರಿಗೆ ಅಚ್ಚುಮೆಚ್ಚಾದ ಕ್ರಿಕೆಟ್ ಸೀರೀಸ್? Ashes!
ನಾವು ಬರೀ ಹಾಡು ಕೇಳ್ತೀವಿ: ಇಲ್ಲೇ ವೈಕುಂಠ ಕಾಣಿರೋ! ಎಂದು.
ಆದ್ರೆ ವೈದಿಕ ಸಭೆಯಲ್ಲಿರುವವರು ದಿನವೂ ಅಲ್ಲಿಯೇ ವೈಕುಂಠ ಕಾಣ್ತಾರೆ!
ಟಿ.ಟಿ.ಡಿ. ಕಡೆ ತಿರ್ಗಿದ್ರೆ: ವೈಕುಂಠ ಏಕಾದಶಿ
ವೈದಿಕ ಸಭೆಗೆ ಹೋದ್ರೆ: ವೈಕುಂಠ ಸಮಾರಾಧನೆ
ನಮಗೂ ಪಿತೃಗಳಿಗೂ ಏನು ವ್ಯತ್ಯಾಸ?
ನಮಗೆ ಎಳ್ನೀರು. ಪಿತೃಗಳಿಗೆ ಎಳ್ಳು ನೀರು.
ರೈಲಲ್ಲಿ ಹೋಗ್ಬೇಕಾದ್ರೆ ವೈದಿಕದವರು prefer ಮಾಡೋದು ಅಪರ್ berth.
ನಮ್ ನಮ್ ಮನೆಯಲ್ಲಿ ವೈದಿಕ ಮಾಡೋದೇ ರಾಮಾಯಣ ಆಗಿಬಿಟ್ಟಿದೆ.
ಏಕೆಂದರೆ ನಮಗೆ ಅದು ಕರ್ಮ ಕಾಂಡ!
ವೈದಿಕದವರು ಆ ಹೀರೋಯಿನ್ ಹೆಸರನ್ನು ಓದೋದೇ ಶ್ರಾದ್ಧಾ ಕಪೂರ್ ಎಂದು!
ಹಿಂದೀಯಲ್ಲಿ ಗಯಾ ಅಂದರೆ ಹೋದ ಅಂತ.
ಹೋದೋರಿಗೆ ತಾನೆ ’ಗಯಾ’ಶ್ರಾದ್ಧಾ!
ಬಾಲ್ಯದಲ್ಲಿ ವಿದ್ಯಾಪೀಠ. ವೃದ್ಧಾಪ್ಯದಲ್ಲಿ ವ್ಯಾಸಪೀಠ.
ಸತ್ತಮೇಲೆ ಶಕ್ತಿಪೀಠ.
ವೈದಿಕಸಭೆಯವರು ಒಂದಷ್ಟು ಜನ ಇತ್ತೀಚೆಗೆ ಮಣಿಕರ್ಣಿಕಾ ಫಿಲ್ಂ ನೋಡಕ್ಕೆ ಹೋದ್ರು. ಇಂಟರ್ವಲ್ ಹೊತ್ತಿಗೆ ಈಚೆಗೆ ಬಂದ್ರು. ಮಣಿಕರ್ಣಿಕಾ ಘಾಟ್ ಬಗ್ಗೆ ಫಿಲ್ಂ ಅಲ್ಲ ಅಂತ ಗೊತ್ತಾಯ್ತು.
ವೈದಿಕ ಸಭೆಲಿರೋ ಒಬ್ಬ್ರು ಮೊದ್ಲು ಇದ್ದದ್ದು ವಿಲ್ಸನ್ ಗಾರ್ಡನ್ ಹತ್ರ. ಈಗ ಹರಿಶ್ಚಂದ್ರ ಘಾಟ್ ಪಕ್ಕಕ್ಕೆ ಶಿಫ್ಟ್ ಆದ್ರು.
ವೈದಿಕ ಸಭೆಲಿರೋ ಒಬ್ರ ಮಗ ಹುಡ್ಗೀಗೆ ಕಾಳು ಹಾಕ್ತಾ ಇದ್ದ. ಆಗ ಅವರು ಎಚ್ಛರ ಕೊಟ್ರು: ಅವಳು ನಿನ್ನ ಒಪ್ದಿದ್ರೆ, ನಿನಗೆ ಅವಳು ಅಕ್ಕಿ ಕಾಳು ಹಾಕ್ದಂಗಾಗತ್ತೋ! ಅಂತ.
ನಾವು ಆಗ ಈಗ ಹೇಳೊ ಮಾತು: ದಾನಗಳಲ್ಲಿ ಶ್ರೇಷ್ಠವಾದ ದಾನ – ಸಮಾದಾನ!
ವೈದಿಕ ಸಭೆಲಿರೋರು ಹೇಳೊ ಮಾತು: ದಾನಗಳಲ್ಲಿ ಶ್ರೇಷ್ಠವಾದ ದಾನ – ಪಿಂಡದಾನ!
ಸತ್ತಾಗ ಅಶ್ರು ತರ್ಪಣ. ವೈದಿಕ ಸಬೆಯಲ್ಲಿ? ಪಿತೃ ತರ್ಪಣ!
ಮೊದಲಿಂದಲೂ ಸಂಸ್ಕಾರ ಇರ್ಬೇಕು. ಕೊನೇಗೆ ಸಿಗೋದು ಅಂತಿಮ ಸಂಸ್ಕಾರಾನೇ!
ವೈದಿಕದವರ ಮನೆಯವರಿಗೆ ಬಾಳೆಹಣ್ಣು ನೋಡ್ಕೊಂಡು ಕೊಡಿ. ಹಣ್ಣಾಗಿದ್ರೆ ಮನೆಗಾಗತ್ತೆ. ಕಾಯಿ ಆಗಿದ್ರೆ – ವೈದಿಕಕ್ಕಾಗತ್ತೆ.
ನಮಗೆ FUNERAL. ಸ್ಮಶಾನದಲ್ಲಿರೋರಿಗೆ FUN REAL.
CEREMONY nowadays has become CEREMONEY!
Everytime they utter prachinaviti, they prefer the LEFT. But they generally vote for the RIGHT!
ಅಡುಗೆಯವರು ಮಾಡಿದ್ರೆ? ನಳಪಾಕ.
ನಾವೇ ಮಾಡ್ಕೊಂಡ್ರೆ? ಸ್ವಯಂ ಪಾಕ.
ವೈದಿಕದವರು ಬೌಲಿಂಗ್ ಮಾಡಿದ್ರೆ? ಎಲ್ಲ ಪಿಂಡಾ ಬಾಲ್!
ಎಷ್ಟೇ ಆಸ್ತಿ ಮಾಡಿದ್ರೂ ಕೊನೇಗೆ ಆಗೋದು ಅಸ್ಥಿನೆ.
ಅಸ್ತಿತ್ವ ಕಳ್ಕೊಳೋದೆ ಅಸ್ಥಿ ಬಿಟ್ಟಾಗ.
ದೇವಸ್ಥಾನಕ್ಕೂ ವೈದಿಕ ಸಭೆಗು ವ್ಯತ್ಯಾಸ?
ಅಲ್ಲಿ ಪ್ರದಕ್ಷಿಣೆ. ಇಲ್ಲಿ ದಕ್ಷಿಣೆ.
ಓಣಗಿದ ಹೂ, Cremationಗೆ ಹೊರಟ ಹೆಣ – ಎರಡಕ್ಕೂ ಒಂದೇ description. Body ಹೋಯ್ತು.
ಪರೀಕ್ಷೆಲಿ ಎಲ್ಲ questionಗೂ ಚೆನ್ನಾಗಿ answer ಬರೆಯೋರು ಉತ್ತರ ಕ್ರಿಯೆ ಚೆನ್ನಾಗಿ ಮಾಡ್ತಾರೆ.
ಗಣೇಶನ ಚತುರ್ಥಿ ದಿವಸ ಹತ್ತನೇ ದಿವಸ ಬಂದ್ರೆ?
ಒಂದೆಡೆ ಮೋದಕ, ಇನ್ನೊಂದೆಡೆ ಧರ್ಮೋದಕ!
ವೈದಿಕದ ವಿಷಯ ಕುರಿತು monthly magazine ಒಂದು ಶುರು ಮಾಡೋಣಾ ಅಂತ ಇದೀನಿ…ಹೆಸರು? ಮಾಸಿಕ!
ಇದರ yearly anniversary? ವರ್ಷಾಬ್ಧಿಕ!
I have a friend named Antyesh. He makes excellent Tea. He wanted to start a Tea shop. I warned him beforehand: Don’t name it after yourself. It will become Antyesh Tea shop!
National Egg Coordination Committee tagline is Sunday ho ya Monday, roz khao ande!
Anda, Pinda, Brahmanda – See how close Vaidhika Sabhe and NECC is : Anda, Pinda…
Vaidhika Sabhe can say: Sunday ho ya Monday, roz Rave Unde!
ಸಜ್ಜಪ್ಪ : ನೋಡಿ ಹೆಸರು ಹೇಗಿದೆ! ಹೆಸರಲ್ಲೇ ಪೂರ್ವಿಕರನ್ನೊಳಗೊಂಡಿದೆ! ಸಜ್ಜನಿಕೆಯ ಅಜ್ಜ, ಅಪ್ಪ – ಸೇರಿದರೆ ಸಜ್ಜಪ್ಪ!
ಇರುವವರೆಗೂ ಜೀವನದಲ್ಲಿ ಸಜ್ಜನಿಕೆಯ ಹೂರಣ ಸತ್ವ ತುಂಬಿದ ಹಾಗಿರಿ!
ಸಜ್ಜಪ್ಪ ತಿನ್ನುವಾಗ ತಿಳಿಯಿರಿ…ಇಹ ಮುಗಿಸಿ ಪರಕ್ಕೆ ಹೊರಡಲು ಸಜ್ಜಾಗಿರಪ್ಪ!
ಅದುವೇ ಸಜ್ಜಪ್ಪ!
ಪ್ರಪಂಚದಲ್ಲಿ ಎಲ್ಲೇ ಹೋದ್ರು, ನಮ್ಮನ್ನ ಬೋಳಿಸ್ತಾರೆ.
ಆದ್ರೆ, ವೈದಿಕ ಸಭೆನವರು ಹಾಗಲ್ಲ: ನೀವೇ ಇಲ್ಲಿಗೆ ಬರೋ ಮುನ್ನ ಎಲ್ಲಾ ಬೋಳಿಸ್ಕೊಂಡು ಬನ್ನಿ ಅಂತಾರೆ!
ಶಿವನ ಇನ್ನೊಂದು ಹೆಸರು – ಅಂತ್ಯೇಶ. ಅಂತ್ಯಕ್ಕೆ ಈಶ.
ಹಾಗಂತಾ ಇದನ್ನ ಮಗನಿಗೆ ಇಟ್ರೆ, ಅವನನ್ನ ಟೀ ಗೆ ಕರೆಯೋದು ಪ್ರಾಬ್ಲಮ್ ಆಗತ್ತೆ: ಅಂತ್ಯೇಶ್ ಟೀ ಗ್ ಹೋಗೋಣ ಬಾ!
Vade is made in the name of the departed soul. See the link: The hole in the Vade has a deeper meaning indicating that you are the centre of the universe surrounding you and from your point of view, the circumference of Vade could be even or uneven but they add to the taste of the dish. The departed soul is somewhere in the universe. After offering Pinda,Thithi vade taste is Brahmanda!
There is a place called Vade Samudra in Mandya Dist. of Karnataka. There are several places named Pinda: in Bihar, Brazil, Republic of Angola and Republic of Mozambique. South Australia has Pinda Springs! There is a hotel named Hotel Intercity Pátio Pinda in Brazil!
Coming next: A to Z of Vaidikas!
A for Aryavartha
B for Brahmavartha
C for Ceremony